ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಶಿಸ್ತಿನ ಕಚ್ಚಾಟ: ನಾಲ್ವರಿಗೆ ಸಸ್ಪೆನ್ಷನ್ | Hosa Suddi

ಅಪರಾಧ

ಬೆಂಗಳೂರು ಪೊಲೀಸ್ ವ್ಯವಸ್ಥೆಯಲ್ಲಿ ಶಿಸ್ತಿನ ಕಚ್ಚಾಟ: ನಾಲ್ವರಿಗೆ ಸಸ್ಪೆನ್ಷನ್

Published

on

ಬೆಂಗಳೂರು: ನಗರದಲ್ಲಿ ಪೊಲೀಸರು ಸಂಬಂಧಿಸಿದ ಕರ್ತವ್ಯಲೋಪ ಮತ್ತು ಅಕ್ರಮ ಚಟುವಟಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಿರಿಯ ಅಧಿಕಾರಿಗಳು ಆ ಕ್ರಮಶೀಲತೆಗೆ ತೀವ್ರ ಬ್ರೇಕ್‌ ಹಾಕಿದ್ದಾರೆ. ಇತ್ತೀಚೆಗೆ ವಿವೇಕನಗರ ಠಾಣೆಯಲ್ಲಿನ ಲಾಕಪ್ ಡೆತ್ ಆರೋಪದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೂ ನಾಲ್ವರು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸೇವೆಯಿಂದ ದೂರಗೊಳಿಸಲಾಗಿದೆ.

ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರು ಹೊರಡಿಸಿರುವ ಇತ್ತೀಚಿನ ಆದೇಶದ ಪ್ರಕಾರ ನಂದಿನಿ ಲೇಔಟ್, ಸುಬ್ರಹ್ಮಣ್ಯ ನಗರ ಮತ್ತು ಸಂಜಯನಗರ ಠಾಣೆಗಳ ನಾಲ್ವರು ಪೊಲೀಸ್ ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರು – ASI ಶ್ರೀನಿವಾಸ್ ಮೂರ್ತಿ (ನಂದಿನಿ ಲೇಔಟ್), ASI ಜಯರಾಮೇಗೌಡ, ಹೆಡ್ ಕಾನ್ಸ್‌ಟೆಬಲ್ ಧರ್ಮ (ಸುಬ್ರಹ್ಮಣ್ಯ ನಗರ), ಕಾನ್ಸ್‌ಟೆಬಲ್ ನಜೀರ್ (ಸಂಜಯನಗರ).

ದೂರು ಸ್ವೀಕರಿಸಲು ನಿರಾಕರಿಸಿದ ಎಎಸ್‌ಐ

ನಂದಿನಿ ಲೇಔಟ್ ಠಾಣೆಯ ASI ಶ್ರೀನಿವಾಸ್ ಮೂರ್ತಿ, ನಿತ್ಯಾನಂದ ಎಂಬ ದೂರುದಾರರಿಂದ ಬಂದ ದೂರು ಸ್ವೀಕರಿಸದೇ ನಿರ್ಲಕ್ಷ್ಯ ತೋರಿದ್ದಾಗಿ ಆರೋಪ ಬಂದಿದೆ. ನಿರಾಶರಾದ ದೂರುದಾರರು ಘಟನೆ ಬಗ್ಗೆ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದು, ವಿಷಯ ದೊಡ್ಡ ಮಟ್ಟದಲ್ಲಿ ವೈರಲ್‌ ಆಯಿತು. ತಕ್ಷಣವೇ ಮೇಲ್ದರ್ಜೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಇಬ್ಬರು ಎಎಸ್‌ಐಗಳನ್ನು ಅಮಾನತುಗೊಳಿಸಿದರು.

ಕೋರ್ಟ್‌ ಸಮನ್ಸ್‌ಗೂ ನಿರ್ಲಕ್ಷ್ಯ

ಸುಬ್ರಹ್ಮಣ್ಯ ನಗರ ಠಾಣೆಯ ASI ಜಯರಾಮೇಗೌಡ ಮತ್ತು HC ಧರ್ಮ, ಕೋರ್ಟ್ ಹೊರಡಿಸಿದ ಸಮನ್ಸ್ ಪಾಲನೆ ಮಾಡಲು ವಿಫಲರಾಗಿದ್ದರು. ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಹಾಜರುಪಡಿಸದೇ ಕರ್ತವ್ಯಲೋಪ ತೋರಿದ್ದರಿಂದ ಇಬ್ಬರ ಮೇಲೂ ಕ್ರಮ ಜರುಗಿದೆ.

ಸಿಎಂ ನಿವಾಸದ ಭದ್ರತೆಗೆ ಗೈರಾದ ಕಾನ್‌ಸ್ಟೇಬಲ್ ಸಸ್ಪೆಂಡ್

ಸಂಜಯನಗರ ಠಾಣೆಯ ಕಾನ್ಸ್‌ಟೆಬಲ್ ನಜೀರ್, ಸಿಎಂ ಕಾವೇರಿ ನಿವಾಸದ ಭದ್ರತೆಯಲ್ಲಿ ನಿಯೋಜಿಸಲ್ಪಟ್ಟಿದ್ದರೂ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದರು. ಈ ಗಂಭೀರ ತಪ್ಪಿಗೆ ಕಾರಣವಾಗಿ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ.

ಕೆವಲ ಕಳೆದ 15 ದಿನಗಳಲ್ಲಿ 33ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇವರ ವಿರುದ್ಧ ಅಮಾನತು, ಶಿಸ್ತಿನ ಕ್ರಮ ಜರುಗಿರುವುದು ಬೆಂಗಳೂರಿನಲ್ಲಿ ಪೊಲೀಸರು ಎದುರಿಸುತ್ತಿರುವ ಒಳಗಟ್ಟಿನ ಸಮಸ್ಯೆಗಳನ್ನು ಬೆಳಗಿಸಿದೆ.

Trending

Exit mobile version