ದೇಶ

ಬೀದರ್‌: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ಅಡುಗೆ ಸಿಬ್ಬಂದಿ ಕೆಲಸದಿಂದ ಬಿಡುಗಡೆ

Published

on

ಬೀದರ್: ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾದ ಅಡುಗೆ ಸಿಬ್ಬಂದಿ ಪ್ರಮೋದ್ ತಂದೆ ಅಶೋಕ ಕುಮಾರ್ ಅವರನ್ನು ತಾಲೂಕು ಆಡಳಿತ ಬಿಡುಗಡೆ ಮಾಡಿದೆ. ಪ್ರಮೋದ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಸರ್ಕಾರದಿಂದ ನೀಡಲಾದ ವೇತನದೊಂದಿಗೆ ಯಾವುದೇ ಸಂಘ ಸಂಸ್ಥೆಯಲ್ಲಿ ಭಾಗಿಯಾಗಬಾರದು ಎಂಬ ಗೇಟ್‌ಪಾಸ್ ಉಲ್ಲೇಖವನ್ನು ಉಲ್ಲಂಘಿಸಿ ಪ್ರಮೋದ್ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಈ ವೇಳೆ ಬಸವಕಲ್ಯಾಣದಲ್ಲಿ ಸುಮಾರು 20ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಈ ಪಥಸಂಚಲನದಲ್ಲಿ ಭಾಗಿಯಾದರು ಎಂದು ವರದಿಯಾಗಿದೆ. ಜಿಲ್ಲಾಾದ್ಯಂತ ನಡೆದ ಪಥಸಂಚಲನಗಳಲ್ಲಿ ಹಲವಾರು ಸರ್ಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಭಾಗವಹಿಸಿದ್ದು, ಈ ಪ್ರಕರಣವು ಸರ್ಕಾರಿ ನೌಕರರ ಪಾಲನೆಯ ಬಗ್ಗೆ ಪ್ರಶ್ನೆ ಎತ್ತಿದೆ.

Trending

Exit mobile version