ದೇಶ
ರಕ್ಷಿತಾ–ಅಶ್ವಿನಿ ನಡುವೆ ಜಗಳ: ಸುದೀಪ್ ಹೇಳಿದ್ದೇನು?
ಬೆಂಗಳೂರು: ಬಿಗ್ ಬಾಸ್ (Bigg Boss) ಮನೆಯಲ್ಲಿ ನಡೆದ ರಕ್ಷಿತಾ ಶೆಟ್ಟಿ (Rakshita Shetty) ಮತ್ತು ಅಶ್ವಿನಿ ಗೌಡ (Ashwini Gowda) ನಡುವಿನ ಜಗಳ ಈ ವಾರಾಂತ್ಯದ ಕಿಚ್ಚ ಸುದೀಪ್ (Sudeep) ನಿರೂಪಣೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಯಿತು. ಸಾಮಾನ್ಯವಾಗಿ ಶನಿವಾರದ ಎಪಿಸೋಡ್‌ನಲ್ಲಿ ಸುದೀಪ್ ಅವರು ವಾರದ ಘಟನೆಗಳ ವಿಮರ್ಶೆ ನಡೆಸುತ್ತಾರೆ. ಆದರೆ ಈ ಬಾರಿ ಅವರು ಕಲಾವಿದರ ಅವಮಾನ ಕುರಿತ ವಿವಾದದ ಬಗ್ಗೆ ಪ್ರತ್ಯೇಕವಾಗಿ ಸ್ಪಷ್ಟನೆ ನೀಡಿದರು.
ರಕ್ಷಿತಾ ಮತ್ತು ಅಶ್ವಿನಿ ನಡುವೆ ನಡೆದ ವಾಗ್ವಾದದಲ್ಲಿ “ಇದು ಧಾರಾವಾಹಿಯಲ್ಲ” ಎಂಬ ರಕ್ಷಿತಾ ಹೇಳಿಕೆಯ ನಂತರ ಅಶ್ವಿನಿ, “ನೀನು ಕಲಾವಿದರಿಗೆ ಅವಮಾನ ಮಾಡಬೇಡ” ಎಂದು ತಿರುಗೇಟು ನೀಡಿದ್ದರು. ಈ ಜಗಳ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು.
ಸುದೀಪ್ ಶನಿವಾರದ ಕಾರ್ಯಕ್ರಮದಲ್ಲಿ ಇಬ್ಬರು ಮಾತನಾಡಿದ ನಿಜವಾದ ವಾಕ್ಯಗಳನ್ನು ಪದಗಳ ಸಹಿತ ವಿಡಿಯೋ ರೂಪದಲ್ಲಿ ಪ್ಲೇ ಮಾಡಿಸಿ, “ರಕ್ಷಿತಾ ಹೇಳಿದ್ದು ನಿಮಗೆ, ಆದರೆ ಅದನ್ನು ಕಲಾವಿದರಿಗೆ ಹೇಳಿದಂತೆ ತಿರುಗಿಸುವುದು ತಪ್ಪು” ಎಂದು ಅಶ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡರು. “ಬಿಗ್ ಬಾಸ್ ಮನೆಯಲ್ಲಿ ಕಲಾವಿದರಿದ್ದಾರೆ, ನಾನು ಕೂಡ ಒಬ್ಬ ಕಲಾವಿದ” ಎಂದು ಸುದೀಪ್ ಖಡಕ್‌ವಾಗಿ ಹೇಳಿದರು.
ಅಷ್ಟೇ ಅಲ್ಲದೆ, ಹಿರಿಯ ಸ್ಪರ್ಧಿಯಾಗಿರುವ ಅಶ್ವಿನಿಯವರಿಗೆ ಕಾಲಿನ ಮೂಲಕ ಸಂಜ್ಞೆ ಮಾಡುವುದು ಸರಿಯಲ್ಲ ಎಂದು ರಕ್ಷಿತಾಗೆ ಎಚ್ಚರಿಸಿದರು. ಇದಕ್ಕೆ ರಕ್ಷಿತಾ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು.
ಎಪಿಸೋಡ್ ಅಂತ್ಯದಲ್ಲಿ ಧನುಷ್, ಗಿಲ್ಲಿ, ರಕ್ಷಿತಾ ಹಾಗೂ ಅಶ್ವಿನಿಯನ್ನು ಎಲಿಮಿನೇಶನ್‌ನಿಂದ ಸೇವ್ ಮಾಡುತ್ತ, “ನೀವೆಲ್ಲರು ಒಂದೇ ಕುಟುಂಬದ ಸದಸ್ಯರಂತೆ ಇರಬೇಕು” ಎಂದು ಸುದೀಪ್ ಸಲಹೆ ನೀಡಿದರು. ಹೀಗೆ “ಕಲಾವಿದರ ಅವಮಾನ” ವಿವಾದಕ್ಕೆ ಕೊನೆಗೂ ಸ್ಪಷ್ಟನೆ ಸಿಕ್ಕಿತು.