ಬಿಹಾರ ಚುನಾವಣೆಯಲ್ಲಿ ಇತಿಹಾಸ: ಮೊದಲ ಹಂತದಲ್ಲಿ 64.66% ಮತದಾನ | Hosa Suddi

ಚುನಾವಣೆ

ಬಿಹಾರ ಚುನಾವಣೆಯಲ್ಲಿ ಇತಿಹಾಸ: ಮೊದಲ ಹಂತದಲ್ಲಿ 64.66% ಮತದಾನ

Published

on

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇ 64.66% ಮತದಾನ ದಾಖಲಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಹೇಳಿದ್ದಾರೆ. ಪ್ರಜಾಪ್ರಭುತ್ವದ ಗೆಲುವು ಎಂದೇ ಅವರು ಈ ಸಾಧನೆಯನ್ನು ಬಣ್ಣಿಸಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (SIR) ವೇಳೆ ಶೂನ್ಯ ಮೇಲ್ಮನವಿ ದಾಖಲಾಗಿದೆ. 1951ರ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಇಷ್ಟು ಹೆಚ್ಚಿನ ಮತದಾನ ನಡೆದಿದ್ದು, ಪಾರದರ್ಶಕ ಯಂತ್ರಗಳು ಮತ್ತು ಮತದಾರರ ಉತ್ಸಾಹಭರಿತ ಭಾಗವಹಿಸುವಿಕೆ ಇದಕ್ಕೆ ಕಾರಣವಾಗಿದೆ ಎಂದು ಆಯೋಗ ತಿಳಿಸಿದೆ.

ಒಟ್ಟು 243 ಕ್ಷೇತ್ರಗಳಲ್ಲಿ ಮೊದಲ ಹಂತದ 121 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಿತು. ಈ ಬಾರಿ ಮತದಾನ ಪ್ರಮಾಣವು 2020ರ ಕೋವಿಡ್‌ ಸಮಯದ ಶೇ 57.29ಕ್ಕಿಂತ ಹೆಚ್ಚಾಗಿದೆ. ಹಳೆಯ ದಾಖಲೆಗಳ ಪ್ರಕಾರ 2000ರಲ್ಲಿ ಶೇ 62.57 ಮತ್ತು 1998ರಲ್ಲಿ ಶೇ 64.6 ಮತದಾನ ದಾಖಲಾಗಿತ್ತು.

ಉಳಿದ 122 ಕ್ಷೇತ್ರಗಳಿಗೆ ನವೆಂಬರ್‌ 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಫಲಿತಾಂಶಗಳನ್ನು ನವೆಂಬರ್‌ 14ರಂದು ಪ್ರಕಟಿಸಲಾಗುತ್ತದೆ.

Trending

Exit mobile version