ಬಿಹಾರ ಚುನಾವಣೆ 2025: ಸೀಟು ಹಂಚಿಕೆ ಲೆಕ್ಕಾಚಾರ ಆರಂಭ; ಎನ್‌ಡಿಎ-ಇಂಡಿಯಾ ಒಕ್ಕೂಟದಲ್ಲಿ ಕಸರತ್ತು | Hosa Suddi

ದೇಶ

ಬಿಹಾರ ಚುನಾವಣೆ 2025: ಸೀಟು ಹಂಚಿಕೆ ಲೆಕ್ಕಾಚಾರ ಆರಂಭ; ಎನ್‌ಡಿಎ-ಇಂಡಿಯಾ ಒಕ್ಕೂಟದಲ್ಲಿ ಕಸರತ್ತು

Published

on

ದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗಳಿಗೆ ಶುಭ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಹೊರ ಬೀಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ.

ಈ ನಡುವೆ ಎನ್‌ಡಿಎ (NDA) ಮತ್ತು ಇಂಡಿಯಾ ಒಕ್ಕೂಟ (INDIA Bloc) ನಡುವೆ ಸೀಟು ಹಂಚಿಕೆ ಚರ್ಚೆಗಳು ಜೋರಾಗಿವೆ. 243 ಸ್ಥಾನಗಳ ಪೈಕಿ 205 ಕ್ಷೇತ್ರಗಳನ್ನು ಬಿಜೆಪಿ ಮತ್ತು ಜೆಡಿಯು ಹಂಚಿಕೊಳ್ಳಲಿದ್ದು, ಉಳಿದ 38 ಸ್ಥಾನಗಳನ್ನು ಎಲ್‌ಜೆಪಿ (ಚಿರಾಗ್ ಪಾಸ್ವಾನ್), ಹೆಚ್‌ಎಎಂ (ಜಿತನ್ ರಾಮ್ ಮಾಂಝಿ), ಆರ್‌ಎಲ್‌ಎಂ (ಉಪೇಂದ್ರ ಕುಶ್ವಾಹ) ನಡುವಿನ ಹಂಚಿಕೆ ಆಗಲಿದೆ.

ವಿವರಣೆ ಪ್ರಕಾರ:

  • ಎಲ್‌ಜೆಪಿಗೆ ~25 ಸ್ಥಾನಗಳು
  • ಹೆಚ್‌ಎಎಂಗೆ ~7
  • ಆರ್‌ಎಲ್‌ಎಂಗೆ ~6

ಇತ್ತ ಇಂಡಿಯಾ ಒಕ್ಕೂಟದಲ್ಲೂ ಚರ್ಚೆ ಗರಿಷ್ಠ ಸ್ಥಾನಕ್ಕಾಗಿ ನಡೆಯುತ್ತಿದ್ದು:

  • ಆರ್‌ಜೆಡಿಗೆ ~125
  • ಕಾಂಗ್ರೆಸ್‌ಗೆ ~55-57
  • ಎಡಪಕ್ಷಗಳಿಗೆ ~35
  • ವಿಐಪಿ ಪಕ್ಷ (ಮುಖೇಶ್ ಸಾಹ್ನಿ) ~20
  • ಪಶುಪತಿ ಪರಾಸ್ ~3
  • ಜೆಎಂಎಂ ~2 ಸ್ಥಾನಗಳಲ್ಲಿ ಸ್ಪರ್ಧೆ ಮಾಡಬಹುದು.

ಇನ್ನು ಕಾಂಗ್ರೆಸ್ ಮೊದಲ ಸಿಇಸಿ ಸಭೆಯನ್ನು ನಾಳೆ ನಡೆಸಲಿದ್ದು, ಸುಮಾರು 30 ಅಭ್ಯರ್ಥಿಗಳ ಘೋಷಣೆ ಸಾಧ್ಯತೆ ಇದೆ. ಎಲ್ಲ ಪಕ್ಷಗಳು ತಮ್ಮ ಪ್ರಭಾವ ಕ್ಷೇತ್ರಗಳಲ್ಲಿ ಬಲವರ್ಧನೆಗೆ ತಯಾರಿ ನಡೆಸುತ್ತಿವೆ.

Trending

Exit mobile version