AI SUMMIT 2026 : ಇಂಡಿಯಾ AI ಶೃಂಗಸಭೆಗೆ ಬಿಲ್ ಗೇಟ್ಸ್ ಗೈರು! | Hosa Suddi

ದೇಶ

AI SUMMIT 2026 : ಇಂಡಿಯಾ AI ಶೃಂಗಸಭೆಗೆ ಬಿಲ್ ಗೇಟ್ಸ್ ಗೈರು!

Published

on

ನವದೆಹಲಿ: ಎಪ್‌ಸ್ಟೈನ್ ಫೈಲ್ಸ್ ವಿವಾದದ ಹಿನ್ನೆಲೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ Bill Gates ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು Gates Foundation ತಿಳಿಸಿದೆ.

ಫೌಂಡೇಶನ್ ಪರವಾಗಿ ಆಫ್ರಿಕಾ ಮತ್ತು ಭಾರತ ಕಚೇರಿಗಳ ಅಧ್ಯಕ್ಷ Ankur Vora ನವದೆಹಲಿಯಲ್ಲಿ ನಡೆಯುವ ಶೃಂಗಸಭೆಯಲ್ಲಿ ಪ್ರತಿನಿಧಿಸಲಿದ್ದಾರೆ. AI ಶೃಂಗಸಭೆಯ ಪ್ರಮುಖ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಲು ಗೇಟ್ಸ್ ತಮ್ಮ ಮುಖ್ಯ ಭಾಷಣವನ್ನು ನೀಡುವುದಿಲ್ಲ ಎಂದು ಸಂಸ್ಥೆ X ನಲ್ಲಿ ಪ್ರಕಟಿಸಿದೆ.

ಭಾರತದಲ್ಲಿ ಆರೋಗ್ಯ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ನಮ್ಮ ಹಂಚಿಕೆಯ ಗುರಿಗಳನ್ನು ಮುಂದುವರಿಸಲು ಸಂಪೂರ್ಣ ಬದ್ಧರಾಗಿದ್ದೇವೆ ಎಂದು ಫೌಂಡೇಶನ್ ಸ್ಪಷ್ಟಪಡಿಸಿದೆ.

ಶೃಂಗಸಭೆಯಲ್ಲಿ ಭಾಗವಹಿಸುವ ಪ್ರಮುಖರ ಪಟ್ಟಿಯಿಂದ ಗೇಟ್ಸ್ ಹೆಸರು ಕಾಣೆಯಾಗಿದ್ದು, ಸರ್ಕಾರ AI ಚರ್ಚೆಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ಬಯಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಈ ಶೃಂಗಸಭೆ ಸೋಮವಾರ ಆರಂಭವಾಗಿದ್ದು, 2023ರಲ್ಲಿ ಯುಕೆ, 2024ರಲ್ಲಿ ದಕ್ಷಿಣ ಕೊರಿಯಾ ಮತ್ತು 2025ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಬಳಿಕ ಇದು AI ಕುರಿತ ನಾಲ್ಕನೇ ವಾರ್ಷಿಕ ಅಂತರರಾಷ್ಟ್ರೀಯ ಸಭೆಯಾಗಿದೆ.

Trending

Exit mobile version