ಹಣಕಾಸು ನಷ್ಟದಿಂದ ಮನನೊಂದು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ | Hosa Suddi

ಅಪರಾಧ

ಹಣಕಾಸು ನಷ್ಟದಿಂದ ಮನನೊಂದು ಬಿಜೆಪಿ ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ

Published

on

ಬೆಂಗಳೂರು: ಹಣಕಾಸು ನಷ್ಟದಿಂದಾಗಿ ಮನನೊಂದಿದ್ದ ಬಿಜೆಪಿ (BJP) ಕಾರ್ಯಕರ್ತ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಮಲ್ಲೇಶ್ವರದ ಬಿಜೆಪಿ ಮಂಡಲದ ಕಾರ್ಯಕರ್ತನಾಗಿದ್ದ ವೆಂಕಟೇಶ್‌, ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ (Ashwath Narayan) ಅವರ ಆಪ್ತರಾಗಿದ್ದರು. ಅವರು ವೈಯಾಲಿಕಾವಲ್‌ನಲ್ಲಿರುವ ತಮ್ಮ ಟೂರ್ಸ್ ಅಂಡ್ ಟ್ರಾವೆಲ್ಸ್ (Tours and Travels) ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅಶ್ವಥ್ ನಾರಾಯಣ್ ಅವರು ಇಂದು ಮಧ್ಯಾಹ್ನ ದರ್ಶನ ಮಾಡುವ ನಿರೀಕ್ಷೆಯಿದೆ. ಆಪ್ತ ಮೂಲಗಳ ಪ್ರಕಾರ, ವೆಂಕಟೇಶ್ ಕಳೆದ ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಇಂದು ಪತ್ತೆಯಾಗಿದೆ.

ಹಣಕಾಸು ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೆಂಕಟೇಶ್ ಚೀಟಿ ವ್ಯವಹಾರ ನಡೆಸುತ್ತಿದ್ದರು, ಆದರೆ 7 ಜನರು ಹಣ ಕಟ್ಟದೇ ಮೋಸ ಮಾಡಿದ್ರು. ಇದೇ ವೇಳೆ ಉಳಿದ ಚೀಟಿ ಸದಸ್ಯರು ಹಣಕ್ಕಾಗಿ ಒತ್ತಡ ಹೇರಿದ್ದರಿಂದ ಮಾನಸಿಕ ಹಿಂಸೆ ಅನುಭವಿಸಿದ್ದಾರಂತೆ.

ಸಾಯುವ ಮೊದಲು ವೆಂಕಟೇಶ್‌ ವಿಡಿಯೋ ರೆಕಾರ್ಡ್ ಮಾಡಿ, ಹಣಕಾಸು ನಷ್ಟ ಮತ್ತು ಎದುರಿಸಿದ ಸಂಕಷ್ಟಗಳ ಬಗ್ಗೆ ವಿವರಿಸಿದ್ದಾರೆ. ಜೊತೆಗೆ “ಜೀವನದಲ್ಲಿ ಯಾವಾಗಲೂ ಚೀಟಿ ಏಜೆಂಟ್ ಆಗಬೇಡಿ” ಎಂದು ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.

Trending

Exit mobile version