BREAKING NEWS ಅಪ್ರಾಪ್ತೆಗೆ ಲೈಂಗಿಕ ಕಿರುಕಳ ಆರೋಪ, ಬಿಎಸ್‍ವೈಗೆ ಬಿಗ್ ರಿಲೀಫ್! | Hosa Suddi

ಬೆಂಗಳೂರು

BREAKING NEWS ಅಪ್ರಾಪ್ತೆಗೆ ಲೈಂಗಿಕ ಕಿರುಕಳ ಆರೋಪ, ಬಿಎಸ್‍ವೈಗೆ ಬಿಗ್ ರಿಲೀಫ್!

Published

on

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೇಳಿ ಬಂದಿದ್ದ ಅಪ್ತಾಪ್ತ ಬಾಲಕಿಗೆ ಲೈಂಗಿಕ ಕಿರುಕಳ ನೀಡಿದ ಆರೋಪ ಪೋಕ್ಸೋ ಪ್ರಕರಣದಲ್ಲಿ ಬಿಎಸ್‍ವೈ ಗೆ ಹೈಕೋರ್ಟ್ ರಿಲೀಫ್ ನೀಡಿದೆ,
ಪ್ರಕರಣ ರದ್ದು ಕೋರಿ ಬಿಎಸ್‍ವೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆ.22 ಕ್ಕೆ ನ್ಯಾಯಾಲಯ ನಿಗದಿ ಮಾಡಿದೆ, ಇದಲ್ಲದೇ ಮುಂದಿನ ವಿಚಾರಣೆವರೆಗೂ ಖುದ್ದು ಹಾಜರಾತಿಯಿಂದ ಬಿಎಸ್‍ವೈ ಸೇರಿದಂತೆ ಪ್ರಕರಣದ ಇತರ ಆರೋಪಿಗಳಿಗೂ ವಿನಾಯಿತಿ ನೀಡಿ ಕೋರ್ಟ್ ಆದೇಶಿಸಿದೆ, ಇದರೊಂದಿಗೆ ಯಡಿಯೂರಪ್ಪರನ್ನು ಅರೆಸ್ಟ್ ಮಾಡದಂತೆ ನೀಡಿದ ಆದೇಶವನ್ನೂ ವಿಸ್ತರಣೆ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಇಂದು ಮಧ್ಯಂತರ ಆದೇಶ ಹೊರಡಿಸಿದೆ,
ಸಹಾಯಕೋರಿ ಬಿಎಸ್‍ವೈ ಬಳಿ ಬಂದಿದ್ದ ತಾಯಿತ ಅಪ್ರಾಪ್ತ ಪ್ರತ್ರಿಯೋರ್ವಳೊಂದಿಗೆ ಬಿಎಸ್‍ವೈ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಬಾಲಕಿಯ ತಾಯಿ ಮಾರ್ಚ್‍ನಲ್ಲಿ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಬಳಿಕ ಸಿಐಡಿ ಪೊಲೀಸರು ತನಿಖೆ ಪೂರ್ಣಗೊಳಿಸಿ ಹೈಕೋರ್ಟ್‍ಗೆ ಚಾರ್ಚ್‍ಶೀಟ್ ಕೂಡ ಸಲ್ಲಿಸಿತ್ತು.

Trending

Exit mobile version