ಬೆಂಗಳೂರು
ರವಿಕುಮಾರ್ ಗೆ ದುರಹಂಕಾರ ಜಾಸ್ತಿಯಾಗಿದೆ- ಸಿಎಂ ವಾರ್ನಿಂಗ್
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಗೆ ದುರಹಂಕಾರ ಜಾಸ್ತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ,
ಈ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಎಂಎಲ್‍ಸಿ ರವಿಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಅವಹೇಳನ ಮಾಡಿದ ರೀತಿ ಖಂಡನೀಯ, ರವಿಕುಮಾರ್ ಗೆ ದುರಹಂಕಾರ ಜಾಸ್ತಿಯಾಗಿದೆ, ಅವರು ವಿರುದ್ಧ ಪ್ರಕರಣ ದಾಖಲಾಗಿದ್ದು, ಸೂಕ್ತ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ,
ಇದೇ ವಿಚಾರವಾಗಿ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಈ ಕೇಸ್ ನಲ್ಲಿ ಈಗಾಗಲೇ ಎಫ್‍ಐಆರ್ ಆಗಿದೆ, ತನಿಖೆ ಕೂಡ ನಡೆಯುತ್ತಿದೆ, ಎನ್ ರವಿಕುಮಾರ್ ಅವರ ಹೇಳಿಕೆ ಅವಹೇಳನಕಾರಿ ಹೌದೋ, ಅಲ್ವೋ ಅಂತ ನೋಡ್ತಾರೆ, ಆ ಬಳಿಕ ಏನು ಕ್ರಮ ಆಗಬೇಕೋ ಅದನ್ನು ಮಾಡ್ತಾರೆ ಎಂದಿದ್ದಾರೆ,