ರೈತರನ್ನ ಒಕ್ಕಲೆಬ್ಬಿಸುವುದಿಲ್ಲ.. ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ: ಡಿಸಿಎಂ ಡಿಕೆಶಿ ಗರಂ | Hosa Suddi

ಬೆಂಗಳೂರು

ರೈತರನ್ನ ಒಕ್ಕಲೆಬ್ಬಿಸುವುದಿಲ್ಲ.. ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ: ಡಿಸಿಎಂ ಡಿಕೆಶಿ ಗರಂ

Published

on

ಬೆಂಗಳೂರು: ವಕ್ಫ್ ವಿವಾದ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಕೇಸರಿಪಡೆ ಮುಗಿಬಿದ್ದಿದೆ, ಈ ನಡುವೆ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು ಬಿಜೆಪಿಯ ರಾಜಕೀಯ ಷಡ್ಯಂತ್ರದಿಂದ ವಕ್ಫ್ ವಿವಾದ ಭುಗಿಲೆದ್ದಿದೆ, ಬೈ ಎಲೆಕ್ಷನ್ ಹೊಸ್ತಿನಲ್ಲಿ ಸುಮ್ಮನೆ ಗೊಂದಲ ಸೃಷ್ಠಿ ಮಾಡಲಾಗುತ್ತಿದೆ, ಈಗಾಗಲೇ ಸಿಎಂ ಕಂದಾಯ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ, ಹಿಂದೆ ಬಿಜೆಪಿ ಸರ್ಕಾರದಲ್ಲೂ ಆ ರೀತಿ ನೋಟಿಸ್ ಕೊಡುತ್ತಿದ್ದರು, ನಾವು ಈಗ ಎಚ್ಚೆತ್ತುಕೊಂಡು ರೈತರಿಗೆ ಕಟ್ಟ ಎಲ್ಲಾ ನೋಟಿಸ್ ವಾಪಸ್ ಪಡೆದಿದ್ದೇವೆ ಎಂದು ಹೇಳಿದರು,
ರೈತರನ್ನು ಉಳಿಸುವ ಕೆಲಸ ಮಾಡುತ್ತೇವೆ, ರೈತರ ಆಸ್ತಿ ರೈತರದ್ದು, ಕಂದಾಯ ಇಲಾಖೆ, ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ, ಯಾವ ರೈತರಿಗೆ ತೊಂದರೆ ಕೊಡುವುದಿಲ್ಲ ಅವರನ್ನು ಒಕ್ಕಲೆಬ್ಬಿಸುವುದಿಲ್ಲ, ಬಿಜೆಪಿ ಸುಮ್ಮನೆ ರಾಜಕೀಯ ಮಾಡುತ್ತಿದೆ, ರೈತರ ಬೆನ್ನಿಗೆ ಸರ್ಕಾರ ಸದಾ ನಿಲ್ಲುತ್ತದೆ ಎಂದು ತಿಳಿಸಿದರು,

Trending

Exit mobile version