ದೆಹಲಿಯ ಸ್ಫೋಟದ ಬಗ್ಗೆ ಕ್ರೀಡಾ ಲೋಕದ ಪ್ರತಿಕ್ರಿಯೆ | Hosa Suddi

ದೇಶ

ದೆಹಲಿಯ ಸ್ಫೋಟದ ಬಗ್ಗೆ ಕ್ರೀಡಾ ಲೋಕದ ಪ್ರತಿಕ್ರಿಯೆ

Published

on

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿಯ ಸ್ಫೋಟದಿಂದ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುರಂತಕ್ಕೆ ಕ್ರೀಡಾ ಲೋಕದಿಂದಲೂ ಸಂತಾಪ ವ್ಯಕ್ತವಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ದೆಹಲಿ ಸ್ಫೋಟದಲ್ಲಿ ಬಾಧಿತರ ಪರವಾಗಿ ಪ್ರಾರ್ಥನೆ ಸಲ್ಲಿಸಿದೆ.

ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ (Twitter) ಖಾತೆಯಲ್ಲಿ,

“ದೆಹಲಿ ನಮ್ಮ ಹೃದಯದಲ್ಲಿದೆ. ಈ ದುರ್ಘಟನೆಯಿಂದ ಬಾಧಿತರಾದ ಎಲ್ಲರಿಗೂ ನಮ್ಮ ಪ್ರಾರ್ಥನೆಗಳು. ದೆಹಲಿ ಸದೃಢವಾಗಿರಲಿ” ಎಂದು ಹೇಳಿದೆ.

ಸೋಮವಾರ ಸಂಜೆ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್‌ ಸಂಖ್ಯೆ 1ರ ಬಳಿಯಲ್ಲಿ ಕಾರು ಸ್ಫೋಟಗೊಂಡಿತು. ಸ್ಫೋಟದ ತೀವ್ರತೆಗೆ ಆರು ಕಾರುಗಳು, ಮೂರು ಆಟೋಗಳು ಹೊತ್ತಿ ಉರಿದವು. ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಮತ್ತು ಅನೇಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಈ ಘಟನೆ ನಂತರ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಭದ್ರತಾ ಪಡೆಗಳು ಸ್ಥಳದಲ್ಲೇ ತಪಾಸಣೆ ನಡೆಸುತ್ತಿದ್ದು, ಸ್ಫೋಟದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Trending

Exit mobile version