ಅಪರಾಧ
ದೆಹಲಿಯ ಸ್ಫೋಟದ ಹಿಂದೆ ಅಂತರರಾಷ್ಟ್ರೀಯ ಸಂಪರ್ಕ? ಹೊಸ ಮಾಹಿತಿ!
ದೆಹಲಿ: ನವೆಂಬರ್ 10ರಂದು ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ತನಿಖೆ ಮಹತ್ವದ ತಿರುವು ಪಡೆದುಕೊಂಡಿದೆ. ಸ್ಫೋಟದ ಸಮಯದಲ್ಲಿ ಮತ್ತು ಅದರ ಸುತ್ತಮುತ್ತ ಒಟ್ಟು 68 ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿದ್ದವು ಎಂದು ತನಿಖಾ ಸಂಸ್ಥೆಗಳು ಬಹಿರಂಗ ಪಡಿಸಿವೆ.
ಸುನ್ಹಾರಿ ಬಾಗ್ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸಲಾಗಿದ್ದ ಸಮಯದಲ್ಲಿ ಮಾತ್ರವೇ 30 ಮೀಟರ್ ವ್ಯಾಪ್ತಿಯಲ್ಲಿ 187 ಫೋನ್ ಸಂಖ್ಯೆಗಳು ಸಕ್ರಮವಾಗಿದ್ದವು ಎನ್ನಲಾಗಿದೆ. ಶಂಕಿತ ಉಗ್ರ ಉಮರ್ ತನ್ನ ಕಾರನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದಾನೆ.
ತನಿಖಾ ಮೂಲಗಳ ಪ್ರಕಾರ, ಸ್ಫೋಟಕ್ಕೂ ಕೆಲವೇ ಕ್ಷಣಗಳ ಮೊದಲು ಮತ್ತು ನಂತರ ಒಟ್ಟು 912 ಮೊಬೈಲ್‌ಗಳು ಸಕ್ರಿಯವಾಗಿದ್ದವು. ಅವರಲ್ಲೂ ಹೆಚ್ಚಿನ ಸಂಖ್ಯೆಗಳು ಅಸಾಮಾನ್ಯ ಚಟುವಟಿಕೆ ಕಂಡಿದ್ದು ಅಧಿಕಾರಿಗಳ ಗಮನ ಸೆಳೆದಿದೆ.
ಅತ್ಯಂತ ಶಂಕಾಸ್ಪದ ಸಂಗತಿಯೆಂದರೆ, ಆ ಪ್ರದೇಶದಲ್ಲಿ ಸ್ಫೋಟದ ದಿನ ಪಾಕಿಸ್ತಾನ ಮತ್ತು ಟರ್ಕಿಯಿಂದ ಕರೆಗಳು ದಾಖಲಾಗಿವೆ ಎಂಬುದು. ಇದರೊಂದಿಗೆ ಕೆಲವು ಸಂಖ್ಯೆಗಳು ಸ್ಫೋಟಕ್ಕೆ ಮುನ್ನ ಭಾರತೀಯ ನೆಟ್‌ವರ್ಕ್‌ನಲ್ಲಿ ಹಠಾತ್ ಡೇಟಾ ಸ್ಪೈಕ್ ತೋರಿಸಿದವು.
ಎನ್‌ಐಎ ಅಧಿಕಾರಿಗಳು ಈಗ ಸ್ಫೋಟ ಸ್ಥಳ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಸಕ್ರಿಯವಾಗಿದ್ದ 68 ಅನುಮಾನಾಸ್ಪದ ಸಂಖ್ಯೆಗಳ ವಿವರಗಳನ್ನು ಸಂಗ್ರಹಿಸಿ, ಅವರ ಚಲನವಲನ, ಸ್ಥಳೀಯ ಸಂಪರ್ಕ ಮತ್ತು ಡಿಜಿಟಲ್ ಟ್ರೇಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ತನಿಖೆ ವೇಗ ಪಡೆದುಕೊಂಡಿದ್ದು, ಶೀಘ್ರದಲ್ಲೇ ಘಟನೆಯ ನಿಖರ ಹಿನ್ನೆಲೆಯತ್ತ ಸುಳಿವು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.