ದೇಶ
ಧನುಷ್–ಮೃಣಾಲ್ ಡೇಟಿಂಗ್ ಗಾಸಿಪ್ ಬಿಸಿ! ವೈರಲ್ ಕಮೆಂಟ್‌ಗಿಂದ ನೆಟ್ಟಿಗರಲ್ಲಿ ಹೊಸ ಚರ್ಚೆ
ಚೆನ್ನೈ: ನಟ ಧನುಷ್ (Dhanush) ಮತ್ತು ಬಾಲಿವುಡ್ ನಟಿ ಮೃಣಾಲ್ ಠಾಕೂರ್ (Mrunal Thakur) ನಡುವಿನ ಡೇಟಿಂಗ್ ಗಾಸಿಪ್ ಮತ್ತೆ ಬಿಸಿ ಬಿಸಿ ಸುದ್ದಿಯಾಗಿದೆ. ಇಬ್ಬರೂ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ವಿಡಿಯೋ–ಫೋಟೋಗಳು ಇತ್ತೀಚೆಗೆ ವೈರಲ್ ಆಗಿದ್ದರೂ, ಇದೀಗ ಮೃಣಾಲ್ ಮಾಡಿದ ಕಮೆಂಟ್ ಈ ಗಾಸಿಪ್‌ಗೆ ಮತ್ತಷ್ಟು ಇಂಧನ ಸುರಿದಂತಾಗಿದೆ.
ಧನುಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಫೋಟೋಗೆ ಮೃಣಾಲ್,
“Sir.. ಎಂಥ ಅದ್ಭುತ ಪಯಣ! Blockbuster, Cult, Legacy” ಎಂಬ ಭಾರಿ ಉತ್ಸಾಹದ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಧನುಷ್ ಅಪ್ಪುಗೆ ಮತ್ತು ಬಿಳಿ ಹಾರ್ಟ್ ಎಮೋಜಿಯಿಂದ ಪ್ರತಿಕ್ರಿಯಿಸಿದ್ದು, ಇದೀಗ ಈ ಕಮೆಂಟ್ ವಿನಿಮಯವೇ ಇಂಟರ್ನೆಟ್‌ನಲ್ಲಿ ಸಿಡಿಲಂತೆ ಹರಿದಾಡುತ್ತಿದೆ.
ಸನ್ ಆಫ್ ಸರ್ದಾರ್-2 ಚಿತ್ರದ ಪ್ರೀಮಿಯರ್‌ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಿಂದಲೇ ಗಾಸಿಪ್‌ಗಳು ಶುರುವಾಗಿದ್ದವು. ಅದೇ ರೀತಿ ‘ತೇರೆ ಇಷ್ಕ್ ಮೇ’ ಚಿತ್ರದ ಶೂಟಿಂಗ್ ಮುಗಿದ ಸಂದರ್ಭದಲ್ಲಿ ಕೂಡ ಮೃಣಾಲ್ ಧನುಷ್ ಜೊತೆ ಇದ್ದರು ಎಂಬ ಫೋಟೋಗಳು ವೈರಲ್ ಆಗಿದ್ದವು.
ಇದಲ್ಲದೆ, ಧನುಷ್ ಅವರ ಸಹೋದರಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಮೃಣಾಲ್ ಫಾಲೋ ಮಾಡಿರುವುದು ನೆಟ್ಟಿಜನ್‌ಗಳಿಗೆ ಮತ್ತೊಂದು ಕ್ಲೂ ಸಿಕ್ಕಂತೆ ಆಗಿದೆ. ಈ ಎಲ್ಲಾ ಕಾರಣಗಳಿಂದಾಗಿ, ಇಬ್ಬರೂ ಡೇಟಿಂಗ್‌ನಲ್ಲಿ ಇದ್ದಾರೆ ಎಂಬ ಚರ್ಚೆ ಇದೀಗ ಸೌತ್‌ದಿಂದ ಬಾಲಿವುಡ್‌ವರೆಗೆ ಬೆಂಕಿಯಂತೆ ಹಬ್ಬಿದೆ.
ಧನುಷ್ ಅವರು ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರಿಗೆ ವಿಚ್ಛೇದನ ನೀಡಿದ ನಂತರ ಹೊಸ ಸಂಬಂಧದ ಬಗ್ಗೆ ಸುದ್ದಿ ಹೊರಬೀಳುತ್ತಿರುವುದು ಗಮನಾರ್ಹ.
ಧನುಷ್ (42) – ಮೃಣಾಲ್ (33) ಎಂಬ ವಯೋಭೇದದ ವಿಚಾರವೂ ನೆಟ್ಟಿಗರ ನಡುವೆ ಹೊಸ ಚರ್ಚೆಗೆ ಕಾರಣವಾಗಿದೆ.