ದೇಶ
ಧರ್ಮೇಂದ್ರ ವಿಲ್ ಸಂಚಲನ: ₹5 ಕೋಟಿ ಆಸ್ತಿ ಮಕ್ಕಳಿಗೆ ಸಿಗುವುದಿಲ್ಲ!
ದೆಹಲಿ: ಬಾಲಿವುಡ್ನ ದಿಗ್ಗಜ ನಟ ಧರ್ಮೇಂದ್ರ (Dharmendra) ನವೆಂಬರ್ 24ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಇಬ್ಬರು ಪತ್ನಿಯರು ಮತ್ತು ಆರು ಮಕ್ಕಳನ್ನು ಅಗಲಿರುವ ಧರ್ಮೇಂದ್ರ ಅವರ ಒಟ್ಟು ಆಸ್ತಿ ₹400–₹450 ಕೋಟಿಗಳಷ್ಟಿದೆ ಎಂದು ವರದಿಗಳು ತಿಳಿಸಿವೆ.
ಆದರೆ ಪಂಜಾಬ್ನಲ್ಲಿರುವ ₹5 ಕೋಟಿ ಮೌಲ್ಯದ ಪೂರ್ವಜರ ಆಸ್ತಿ ಮಾತ್ರ ಅವರ ಮಕ್ಕಳಿಗೆ ಸಿಗುವುದಿಲ್ಲ ಎಂಬ ಸಂಗತಿ ಈಗ ದೊಡ್ಡ ಸುದ್ದಿಯಾಗಿದೆ.
ತಮ್ಮ ಬೇರುಗಳೊಂದಿಗೆ ಗಾಢ ಸಂಬಂಧ ಹೊಂದಿದ್ದ ಧರ್ಮೇಂದ್ರ, ಈ ಆಸ್ತಿಯನ್ನು ಮಕ್ಕಳಿಗಲ್ಲ, ಬದಲಾಗಿ ತಮ್ಮ ವಿಸ್ತೃತ ಕುಟುಂಬ ಸದಸ್ಯರಿಗೆ ನೀಡಲು ನಿರ್ಧರಿಸಿದ್ದರಂತೆ. ನಟರು ಸುಮಾರು ಎಂಟು ವರ್ಷಗಳ ಹಿಂದೆ ಈ ಕುರಿತು ವಿಲ್ (Will) ಮಾಡಿಸಿ, 5 ಕೋಟಿ ಮೌಲ್ಯದ ಆಸ್ತಿಯನ್ನು ಚಿಕ್ಕಪ್ಪನ ಮೊಮ್ಮಕ್ಕಳಿಗೆ ಉಡುಗೊರೆಯಾಗಿ ಬಿಟ್ಟಿದ್ದಾರೆ.
ಅವರಲ್ಲಿ ಬೂಟಾ ಸಿಂಗ್ ಎಂಬವರು ಕೂಡ ಸೇರಿದ್ದು, ಅವರು ಪ್ರಸ್ತುತ ಲೂಧಿಯಾನಾದಲ್ಲಿ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಧರ್ಮೇಂದ್ರ ತಮ್ಮ ಜೀವನದಲ್ಲಿ ಎರಡು ಮದುವೆಗಳು ಮಾಡಿಕೊಂಡಿದ್ದರು.
ಮೊದಲ ಪತ್ನಿ ಪ್ರಕಾಶ್ ಕೌರ್, ಅವರಿಗೆ ನಾಲ್ಕು ಮಕ್ಕಳು — ಸನ್ನಿ ಡಿಯೋಲ್, ಬಾಬಿ ಡಿಯೋಲ್, ಅಜೀತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್.
ನಂತರ ಅವರು ನಟಿ ಹೇಮಾ ಮಾಲಿನಿ ಅವರನ್ನು ಮದುವೆಯಾಗಿ, ಇಬ್ಬರು ಹೆಣ್ಣುಮಕ್ಕಳು — ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರಿಗೆ ಜನಿಸಿದರು.
ಇದೀಗ ಅವರ ಆಸ್ತಿ ಹಂಚಿಕೆ ಕುರಿತು ಹೊಸ ವಿವರಗಳು ಹೊರಬಿದ್ದಂತೆ, ಬಾಲಿವುಡ್ ವಲಯದಲ್ಲಿ ಮತ್ತೊಂದು ಚರ್ಚೆ ಆರಂಭವಾಗಿದೆ.