Connect with us

ದೇಶ

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆ: ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜು

Published

on

ಧಾರವಾಡ, ಮಾರ್ಚ್ 03: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. Dharwad ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜನಸಾಮಾನ್ಯರ ವೇದಿಕೆ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ರೈತ ಸೇನಾ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜನಸಾಮಾನ್ಯರ ವೇದಿಕೆ ಸಂಚಾಲಕ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಕಳೆದ ಆರು ತಿಂಗಳಿನಿಂದ 21 ಜಿಲ್ಲೆಗಳಲ್ಲಿ ಹೋರಾಟ ನಡೆಸಿದ್ದೇವೆ. ಅದರ ಪರಿಣಾಮವಾಗಿ ಬೆಳಗಾವಿ ಅಧಿವೇಶನದಲ್ಲಿ 24 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಲಾಯಿತು. ಆದರೆ ಮೂರು ತಿಂಗಳು ಕಳೆದರೂ ಅಧಿಸೂಚನೆ ಹೊರಬಂದಿಲ್ಲ ಎಂದು ಆರೋಪಿಸಿದರು.

ಇತ್ತೀಚೆಗೆ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದರೂ ಸ್ಪಷ್ಟ ವೇಳಾಪಟ್ಟಿಯಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಯುವಕರನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಗಂಭೀರ ಆರೋಪ ಮಾಡಿದರು.

2003ರಲ್ಲಿ Atal Bihari Vajpayee ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ FRBM Act ಕಾಯ್ದೆಯ ಪರಿಣಾಮವಾಗಿ ಸರ್ಕಾರಿ ಹುದ್ದೆಗಳ ಕಡಿತ ನಡೆಯುತ್ತಿದೆ ಎಂದು ಆಕ್ಷೇಪಿಸಿದರು. ಗುತ್ತಿಗೆ ನೇಮಕಾತಿ, ಅತಿಥಿ ಉಪನ್ಯಾಸಕರ ವ್ಯವಸ್ಥೆ ಇವುಗಳಿಗೂ ಇದೇ ಕಾರಣ ಎಂದು ಹೇಳಿದರು.

ಹೀಗಾಗಿ FRBM ಕಾಯ್ದೆ ರದ್ದುಪಡಿಸುವಂತೆ ಆಗ್ರಹಿಸಿ ಮಾರ್ಚ್ 6ರಿಂದ 22ರವರೆಗೆ ರಾಜ್ಯಾದ್ಯಂತ ಯುವ ಅಧಿವೇಶನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಧಾರವಾಡ ಡಿಸಿ ಕಚೇರಿ ಎದುರು ಆರಂಭವಾಗುವ ಈ ಹೋರಾಟ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಿದ್ದು, ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೊಸ ವೇಗ ಸಿಕ್ಕಿದೆ.

J S Vasudev is the Founder and Editor of Hosasuddi.in, a Kannada digital news platform established in 2023. He is actively involved in news writing, editing, content development, and digital publishing. With a focus on timely and informative journalism, he works on developing news stories covering Karnataka, India, and significant national and international developments. His role includes researching news, preparing and editing articles, managing digital content, and continuously developing Hosasuddi.in as a credible Kannada news platform. Through Hosasuddi.in, J S Vasudev aims to provide readers with accessible, relevant, and timely news while maintaining professional standards in digital journalism.

ದೇಶ

Lok Sabha: ಲೋಕಸಭೆಯಲ್ಲಿ 6 ಮತಗಳ ಲೆಕ್ಕಾಚಾರ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪಾಸ್ ಆಗುತ್ತಾ? ಎನ್‌ಡಿಎಗೆ ಬೇಕು 360 ಇರೋದು 354

Published

on

ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮತದಾನದ ಲೆಕ್ಕಾಚಾರ

ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕಾರಕ್ಕೆ ಎನ್‌ಡಿಎಗೆ ಬೇಕಿರುವುದು 360 ಮತ, ಈಗ ಇರುವುದು 354. ಅಂದರೆ ಕೇವಲ 6 ಮತಗಳ ಕೊರತೆ. ಇಡೀ ದೇಶದ ಕಣ್ಣು ಈಗ ಲೋಕಸಭೆಯ(Lok Sabha) ಸಂಖ್ಯಾಬಲದ ಮೇಲಿದೆ.

also read: https://hosasuddi.in/asha-workers-honorarium-hike-cn-manjunath/

ಸಂವಿಧಾನ ತಿದ್ದುಪಡಿ ಮಸೂದೆಗೆ ಎಷ್ಟು ಮತ ಬೇಕು?

ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಮೂರನೇ ಎರಡರಷ್ಟು (2/3) ಬಹುಮತ ಬೇಕು. ಲೋಕಸಭೆಯಲ್ಲಿ ಈಗ 3 ಸ್ಥಾನಗಳು ಖಾಲಿ ಇವೆ (ಬಸಿರ್ಹತ್, ಶ್ರೀನಗರ, ಶಿಲ್ಲಾಂಗ್). ಒಟ್ಟು 540 ಸಂಸದರಿದ್ದಾರೆ. ಎಲ್ಲರೂ ಮತ ಚಲಾಯಿಸಿದರೆ ಮಸೂದೆ ಪಾಸಾಗಲು 360 ಮತ ಬೇಕು.

Lok Sabha ಏಪ್ರಿಲ್ 17ರಂದು ಏನಾಯಿತು?

ಏಪ್ರಿಲ್ 17ರಂದು ಸರ್ಕಾರ ಮೊದಲ ಬಾರಿಗೆ ಮಸೂದೆ ಅಂಗೀಕರಿಸಲು ಪ್ರಯತ್ನಿಸಿತ್ತು. ಅಂದು ಸದನದಲ್ಲಿ 528 ಸದಸ್ಯರಿದ್ದರು, ಪಾಸಾಗಲು 352 ಮತ ಬೇಕಿತ್ತು. ಎನ್‌ಡಿಎ ಪರ 298, ವಿರುದ್ಧ 230 ಮತ ಬಿದ್ದವು. 54 ಮತಗಳ ಕೊರತೆಯಿಂದ ಮಸೂದೆಗೆ ಹಿನ್ನಡೆಯಾಯಿತು.

Lok Sabha ಲೋಕಸಭೆಯಲ್ಲಿ ಈಗಿನ ಸಂಖ್ಯಾಬಲ ಎಷ್ಟು?

ಏಪ್ರಿಲ್‌ನಲ್ಲಿ 293 ಸಂಸದರಿದ್ದ ಎನ್‌ಡಿಎ ಬಲ ಈಗ 320ಕ್ಕೆ ಏರಿದೆ. ಕಾರಣಗಳು:

  • ಟಿಎಂಸಿಯ 20 ಬಂಡಾಯ ಸಂಸದರ ಬೆಂಬಲ
  • ಶಿವಸೇನೆ (ಯುಬಿಟಿ) ಬಣದ 9 ಸಂಸದರ ಪೈಕಿ 6 ಮಂದಿಯ ಬೆಂಬಲ. ಇವರು ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.

ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನವಾಗಲು ಸ್ಪೀಕರ್ ಅನುಮತಿಗಾಗಿ ಕಾಯುತ್ತಿದ್ದಾರೆ. ಅಧಿಕೃತ ದಾಖಲೆಗಳಲ್ಲಿ ಇವರು ಇನ್ನೂ ಟಿಎಂಸಿ ಸಂಸದರೇ.

ಎನ್‌ಡಿಎಯೇತರ ಪಕ್ಷಗಳಾದ ಡಿಎಂಕೆ (22), ಎನ್‌ಸಿಪಿ (ಎಸ್‌ಪಿ) (8) ಮತ್ತು ವೈಎಸ್‌ಆರ್‌ಸಿಪಿ (4) ಕೂಡ ಮಸೂದೆ ಬೆಂಬಲಿಸುವುದಾಗಿ ಹೇಳಿವೆ. ಇವರೆಲ್ಲರ ಬೆಂಬಲದೊಂದಿಗೆ ಎನ್‌ಡಿಎ ಬಲ 354ಕ್ಕೆ ತಲುಪುತ್ತದೆ. ಆದರೂ ಅಗತ್ಯವಿರುವ 360ಕ್ಕಿಂತ 6 ಮತ ಕಡಿಮೆ. ಸ್ಪೀಕರ್ ಸಮಬಲ (ಟೈ) ಆದಾಗ ಮಾತ್ರ ಮತ ಚಲಾಯಿಸುವುದರಿಂದ ಗರಿಷ್ಠ 353 ಮತ ಮಾತ್ರ ಲಭ್ಯವಾಗಲಿವೆ.

Lok Sabha ಗೈರುಹಾಜರಿ ಏಕೆ ನಿರ್ಣಾಯಕ?

360 ಮತಗಳ ಲೆಕ್ಕಾಚಾರ ಎಲ್ಲಾ 540 ಸಂಸದರು ಮತ ಹಾಕಿದರೆ ಮಾತ್ರ ಅನ್ವಯವಾಗುತ್ತದೆ. ಮಸೂದೆ ವಿರೋಧಿಸುವ ಸುಮಾರು 10 ಸಂಸದರು ಗೈರಾದರೆ, ಬೇಕಾದ ಮತಗಳ ಸಂಖ್ಯೆ 353ಕ್ಕೆ ಇಳಿಯುತ್ತದೆ. ಆಗ ಎನ್‌ಡಿಎಗೆ ಮಸೂದೆ ಪಾಸ್ ಮಾಡಿಕೊಳ್ಳುವುದು ಸುಲಭ. ವಿಪಕ್ಷಗಳ ಕೆಲವು ಸಂಸದರು ಸಭಾತ್ಯಾಗ ಮಾಡಿದರೂ ಇದೇ ಪರಿಣಾಮವಾಗುತ್ತದೆ.

ಅಮಾನತುಗೊಂಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಜೈಲಿನಲ್ಲಿರುವ ಅಮೃತ್‌ಪಾಲ್ ಮತ್ತು ಎಂಜಿನಿಯರ್ ರಶೀದ್ ಸದನಕ್ಕೆ ಗೈರಾಗುವ ಸಾಧ್ಯತೆಯಿದೆ. ಮತ್ತೊಂದೆಡೆ, ತೆರೆಮರೆಯ ಅಡ್ಡಮತದಾನ ಲೆಕ್ಕಾಚಾರವನ್ನೇ ಉಲ್ಟಾಪಲ್ಟಾ ಮಾಡಬಹುದು.

Lok Sabha ನಿಲುವು ಅಸ್ಪಷ್ಟವಾಗಿರುವ ಪಕ್ಷಗಳು ಯಾವುವು?

ಜೆಎಂಎಂನ 3 ಸಂಸದರು, ಇತರ ಸಣ್ಣ ಪಕ್ಷಗಳು ಮತ್ತು 11 ಪಕ್ಷೇತರ ಸಂಸದರ ನಿಲುವು ಇನ್ನೂ ಸ್ಪಷ್ಟವಾಗಿಲ್ಲ. ಇವರು ಬೆಂಬಲ ನೀಡಿದರೆ ಮಸೂದೆ ಸುಲಭವಾಗಿ ಪಾಸಾಗಲಿದೆ.

ವಿರೋಧ ಪಕ್ಷಗಳ ಬಲ: 169 ಮತಗಳು

ಕಾಂಗ್ರೆಸ್ ಮತ್ತು ಇತರ ಪ್ರಮುಖ ಪ್ರತಿಪಕ್ಷಗಳು ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವುದನ್ನು ವಿರೋಧಿಸುತ್ತಿವೆ.

  • ಕಾಂಗ್ರೆಸ್: ಸುಮಾರು 99 ಸಂಸದರು (ಪ್ರತಿಪಕ್ಷಗಳ ಅತಿ ದೊಡ್ಡ ಪಕ್ಷ)
  • ಸಮಾಜವಾದಿ ಪಕ್ಷ: 37 ಸಂಸದರು. ವಿರೋಧಿ ಬಣದಲ್ಲಿದ್ದರೂ ನಡೆ ಅಸ್ಪಷ್ಟ, ಅಡ್ಡಮತದಾನದ ಭೀತಿ ಇದೆ
  • ಟಿಎಂಸಿ: 29 ಸಂಸದರಲ್ಲಿ 20 ಬಂಡಾಯ ಸಂಸದರು ಎನ್‌ಡಿಎ ಬೆಂಬಲಿಸುವುದಾಗಿ ಹೇಳಿದ್ದಾರೆ. ಉಳಿದ 9 ಸಂಸದರು (ಅಮಾನತಾದ ಒಬ್ಬರನ್ನು ಹೊರತುಪಡಿಸಿ 8) ವಿರೋಧಿಸುತ್ತಿದ್ದಾರೆ
  • ಎಡಪಕ್ಷಗಳು (ಸಿಪಿಐ-ಎಂ, ಸಿಪಿಐ, ಸಿಪಿಐ-ಎಂಎಲ್): 8 ಸಂಸದರು
  • ಆರ್‌ಜೆಡಿ: 4 ಸಂಸದರು. ಗೈರು ಅಥವಾ ಸಭಾತ್ಯಾಗದ ವರದಿಗಳಿವೆ
  • ಶಿವಸೇನೆ (ಯುಬಿಟಿ): ಉಳಿದ 3 ಸಂಸದರು
  • ಆಮ್ ಆದ್ಮಿ ಪಕ್ಷ: 3 ಸಂಸದರು
  • ಇತರ ಸಣ್ಣ ಪಕ್ಷಗಳು (ಐಯುಎಂಎಲ್, ಎನ್‌ಸಿ, ವಿಸಿಕೆ, ಆರ್‌ಎಸ್‌ಪಿ, ಎಂಡಿಎಂಕೆ, ಕೆಇಸಿ, ಎಐಎಂಐಎಂ, ಎಎಸ್‌ಪಿ ಇತ್ಯಾದಿ): 11 ಸಂಸದರು

Lok Sabha 54ರಿಂದ 6ಕ್ಕೆ: ಮುಂದೇನು?

ಏಪ್ರಿಲ್‌ನಲ್ಲಿ 54 ಇದ್ದ ಕೊರತೆ ಈಗ ಕೇವಲ 6ಕ್ಕೆ ಇಳಿದಿದೆ. ಎನ್‌ಡಿಎ ಆ 6 ಮತಗಳನ್ನು ಹೇಗೆ ತುಂಬಿಕೊಳ್ಳುತ್ತದೆ? ಅಥವಾ ಸಂಸದರ ಗೈರಿನಿಂದ ಬೇಕಾದ ಮತಗಳ ಸಂಖ್ಯೆ ಕಡಿಮೆಯಾಗಿ ಮಸೂದೆ ಪಾಸ್ ಆಗುತ್ತಾ? ಈ ಪ್ರಶ್ನೆಗೆ ಮತದಾನದ ದಿನ ಉತ್ತರ ಸಿಗಲಿದೆ.

Continue Reading

ರಾಜ್ಯ

DK Shivakumar: ಜಾತಿಗಿಂತ ಮಾನವೀಯತೆಯೇ ಮುಖ್ಯ 40 ವರ್ಷಗಳ ರಾಜಕಾರಣದಲ್ಲಿ ಯಾರ ಜಾತಿಯನ್ನೂ ಕೇಳಿಲ್ಲ ಎಂದ ಸಿಎಂ ಡಿ.ಕೆ. ಶಿವಕುಮಾರ್

Published

on

DK Shivakumar addressing a public gathering in Kanakapura

ರಾಮನಗರ: ನನಗೆ ಜಾತಿಯ ಮೇಲೆ ನಂಬಿಕೆ ಇಲ್ಲ. ಮನುಷ್ಯತ್ವವೇ ಮುಖ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಹಾಗೂ ಬಸವಣ್ಣನವರ ಆಶಯಗಳನ್ನು ಮುಂದಿಟ್ಟುಕೊಂಡೇ ರಾಜಕಾರಣ ಮಾಡುತ್ತಿದ್ದೇನೆ. ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾರನ್ನೂ ನೀನು ಯಾವ ಜಾತಿ ಎಂದು ಕೇಳಿಲ್ಲ. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ ಎಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹೇಳಿದರು.

ಕನಕಪುರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪರಿಶಿಷ್ಟ ಜಾತಿ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಕೃತಜ್ಞತಾ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ರಾಜಕೀಯ ಜೀವನದಲ್ಲಿ ಕನಕಪುರ ಹಾಗೂ ಸಾತನೂರು ಜನರು ನೀಡಿದ ಬೆಂಬಲವನ್ನು ಸ್ಮರಿಸಿದ ಶಿವಕುಮಾರ್, ನನಗೆ ಸಿಕ್ಕಿರುವ ಅಧಿಕಾರ ನನ್ನದಲ್ಲ, ಅದು ನಿಮ್ಮದು. ಸಾತನೂರು ಮತ್ತು ಕನಕಪುರದ ಜನತೆ ನನ್ನನ್ನು 10 ಬಾರಿ ಆಯ್ಕೆ ಮಾಡಿ ಆಶೀರ್ವದಿಸಿದ್ದಾರೆ. ಇಂದು ನಡೆಯುತ್ತಿರುವ ಈ ಅಭಿಮಾನದ ಸನ್ಮಾನದ ಶ್ರೇಯಸ್ಸು ನಿಮಗೇ ಸಲ್ಲಬೇಕು. ಜನರ ಸೇವೆ ಮಾಡುವ ಅವಕಾಶವನ್ನು ನೀಡಿದ್ದೀರಿ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಕ್ಷೇತ್ರದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

DK Shivakumar ನಾನು ನಿಮ್ಮ ಮನೆ ಮಗ, ನುಡಿದಂತೆ ನಡೆಯುತ್ತೇನೆ

ಇಲ್ಲಿಯವರೆಗೆ ಜನರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಅದೇ ರೀತಿ ನಡೆದುಕೊಳ್ಳುತ್ತೇನೆ. ಕನಕಪುರ ಕ್ಷೇತ್ರದ ರಸ್ತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ. ಕನಕಪುರ ಎಂದಾಕ್ಷಣ ಇಡೀ ದೇಶವೇ ತಿರುಗಿ ನೋಡುವಂತೆ ಮಾಡುವುದು ನನ್ನ ಗುರಿ ಎಂದು ಹೇಳಿದರು.

ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಗೆ ವೈರಮುಡಿ ಅವರನ್ನು ಆಯ್ಕೆ ಮಾಡಿದ್ದನ್ನು ನೆನಪಿಸಿಕೊಂಡ ಶಿವಕುಮಾರ್, ನನ್ನ ನಿರ್ಧಾರವನ್ನು ನೋಡಿ ಹಲವರು ನಕ್ಕಿದ್ದರು. ನನ್ನನ್ನು ಆ ತೀರ್ಮಾನದಿಂದ ಹಿಂದೆ ಸರಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ನಾನು ಜಗ್ಗಲಿಲ್ಲ. ನನಗೆ ಜಾತಿ ಮುಖ್ಯವಲ್ಲ. ವ್ಯಕ್ತಿ ಮತ್ತು ಅವರ ಮೇಲಿನ ನಂಬಿಕೆ ಮುಖ್ಯ ಎಂದು ಹೇಳಿದರು.

ಮಳವಳ್ಳಿಯಿಂದ ಕುಣಿಗಲ್ ಗಡಿ ಹಾಗೂ ದೇವನಹಳ್ಳಿವರೆಗೆ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರೇ. ಈಗ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟ ಬಳಿಕ ಆಸ್ತಿಗಳ ಮೌಲ್ಯ ಹೆಚ್ಚಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಡಿ.ಕೆ. ಶಿವಕುಮಾರ್ ರಿಯಲ್ ಎಸ್ಟೇಟ್ ಮಾಡಲು ಜಿಲ್ಲೆಗೆ ಹೆಸರು ಬದಲಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ನಾನು ಎಂದಾದರೂ ನಿಮ್ಮ ಬಳಿ ಬಂದು ಭೂ ವ್ಯವಹಾರ ಮಾಡಿದ್ದೀನಾ ಎಂದು ಪ್ರಶ್ನಿಸಿದರು.

ನಾನು ನಿಮ್ಮ ಮನೆ ಮಗನಂತೆ. ನಿಮಗೆ ಗೌರವ ತರುವ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಆಗಿರಬಹುದು. ಆದರೆ ನಿಮ್ಮ ಬಳಿ ಮುಖ್ಯಮಂತ್ರಿ ಎಂದು ತೋರಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಹೇಳಿದರು.

ಚಂದ್ರಶೇಖರ್ ಮೂರ್ತಿ ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ಟಿಕೆಟ್ ತಪ್ಪಿದ್ದ ಘಟನೆಯನ್ನೂ ಅವರು ನೆನಪಿಸಿಕೊಂಡರು. ಆಗ ಕ್ಷೇತ್ರದ ಜನರು ತಮ್ಮ ಬೆಂಬಲಕ್ಕೆ ನಿಂತಿದ್ದರು. ಸೈಕಲ್ ಗುರುತಿನಡಿ ಚುನಾವಣೆ ಎದುರಿಸಿದಾಗ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಫೋಟೋಗಳನ್ನು ಇಟ್ಟುಕೊಂಡು ಜನರು ಪ್ರಚಾರ ಮಾಡಿದ್ದರು. ಪರಿಶಿಷ್ಟ ಜಾತಿ, ಧರ್ಮ ಹಾಗೂ ಹಿಂದುಳಿದ ವರ್ಗಗಳ ಜನರು ತಮ್ಮನ್ನು ಬೆಂಬಲಿಸಿದ್ದರು. ಆ ಚುನಾವಣೆಯಲ್ಲಿ ಕೇವಲ 3 ಸಾವಿರ ಮತಗಳನ್ನು ಪಡೆದಿದ್ದರೂ, ನಂತರದ ಚುನಾವಣೆಯಲ್ಲಿ ಜನರು ತುಂಬು ಹೃದಯದಿಂದ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟರು. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

DK Shivakumar ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ

ತಾವು ಶಿಕ್ಷಣದಿಂದ ವಂಚಿತವಾದಂತಹ ಪರಿಸ್ಥಿತಿ ಕ್ಷೇತ್ರದ ಮಕ್ಕಳಿಗೆ ಎದುರಾಗಬಾರದು ಎಂಬ ಉದ್ದೇಶದಿಂದ ಕನಕಪುರ ಕ್ಷೇತ್ರದಲ್ಲಿ ಸುಮಾರು 10 ಕಡೆ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಸಿಎಸ್ಆರ್ ಅನುದಾನದ ನೆರವಿನಿಂದ ಎಗ್ಗನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಹೊಸದುರ್ಗ, ಚಿಕ್ಕಮುದುವಾಡಿ ಸೇರಿದಂತೆ ಹಲವು ಕಡೆ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಕೆಮ್ಮಳೆ ಮತ್ತು ಸಾತನೂರು ಸಮೀಪವೂ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸುಮಾರು 26 ಲಕ್ಷ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಗ್ರಾಮೀಣ ಭಾಗದ ಯುವಕರಿಗೂ ತಂತ್ರಜ್ಞಾನ ಮತ್ತು ಕೌಶಲ್ಯ ಆಧಾರಿತ ಉದ್ಯೋಗಾವಕಾಶಗಳು ಸಿಗಬೇಕು. ಈ ಉದ್ದೇಶದಿಂದ ಶಿಕ್ಷಣ, ತಾಂತ್ರಿಕ ತರಬೇತಿ ಹಾಗೂ ಕೈಗಾರಿಕೆಗಳ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ವಿದ್ಯೆ ಯಾರೂ ಕಳ್ಳತನ ಮಾಡಲಾಗದ, ಅಗ್ನಿಯಲ್ಲಿ ಸುಡಲಾಗದ ಹಾಗೂ ನೀರಿನಲ್ಲಿ ನೆನೆಯಲಾಗದ ಗುಪ್ತನಿಧಿ ಎಂದು ಹಿರಿಯರು ಹೇಳುತ್ತಿದ್ದರು. ಅಂತಹ ಅಮೂಲ್ಯ ಸಂಪತ್ತನ್ನು ವಿದ್ಯಾರ್ಥಿ ಜೀವನದಲ್ಲಿ ಕಳೆದುಕೊಳ್ಳಬಾರದು. ತಾನು ಪದವಿ ಪಡೆಯಲು ಸಾಧ್ಯವಾಗದೆ 43ರಿಂದ 47ನೇ ವಯಸ್ಸಿನಲ್ಲಿ ಪದವಿ ಪೂರ್ಣಗೊಳಿಸಿದೆ. ಆದರೆ ನೀವು ಸಮಯಕ್ಕೆ ಸರಿಯಾಗಿ ಪದವಿ ಪಡೆದು ಉತ್ತಮ ವಿದ್ಯಾವಂತರಾಗಿ, ಬುದ್ಧಿವಂತರಾಗಿ ಕನಕಪುರಕ್ಕೆ ಮಾತ್ರವಲ್ಲ, ದೇಶಕ್ಕೆ ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

DK Shivakumar ಶಿಕ್ಷಣಕ್ಕೆ ಸೀಟು ಸಿಗದ ನೋವೇ ರಾಜಕೀಯಕ್ಕೆ ಬರಲು ಕಾರಣ

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಶಿವಕುಮಾರ್, ಕರಿಯಪ್ಪನವರು ಹಾಗೂ ತಮ್ಮ ಹಿರಿಯರು ಹೈಸ್ಕೂಲ್‌ಗೆ ಸೇರಿಸಲು ಪ್ರಯತ್ನಿಸಿದ್ದರು. ಅಂದಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನ ಸ್ವಾಮಿ ಅವರ ಬಳಿಗೂ ಕರೆದೊಯ್ದಿದ್ದರು. ಆದರೆ ಶಿಕ್ಷಣಕ್ಕೆ ಪ್ರವೇಶ ಸಿಗಲಿಲ್ಲ. ಅಂದೇ ರಾಜಕೀಯಕ್ಕೆ ಬಂದು ಶಾಸಕನಾಗಬೇಕು ಎಂದು ನಿರ್ಧರಿಸಿದ್ದೆ ಎಂದು ಹೇಳಿದರು.

ರಾಜಕೀಯದಲ್ಲಿ ಬೆಳೆದು ಇಂದು ರಾಜ್ಯದ ಪ್ರತಿನಿಧಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಆದರೆ ಬೆಂಗಳೂರಿನಲ್ಲಿ ಏನೇ ಇದ್ದರೂ ಕನಕಪುರ ಕ್ಷೇತ್ರಕ್ಕೆ ಬಂದಾಗ ನಾನು ನಿಮ್ಮ ಸೇವಕ, ನಿಮ್ಮ ಮನೆ ಮಗ. ನಿಮ್ಮ ತಂದೆ-ತಾಯಂದಿರು ಹಾಗೂ ಕಾರ್ಯಕರ್ತರ ಮುಂದೆ ಮುಖ್ಯಮಂತ್ರಿ ಎಂಬ ಸ್ಥಾನಕ್ಕಿಂತ ನನ್ನ ಕರ್ತವ್ಯವೇ ಮುಖ್ಯ ಎಂದು ಶಿವಕುಮಾರ್ ಹೇಳಿದರು.

DK Shivakumar ಐದು ಗ್ಯಾರಂಟಿಗಳಿಗಾಗಿ ₹52 ಸಾವಿರ ಕೋಟಿ ವೆಚ್ಚ

ಈ ಬಾರಿ ನಿಮ್ಮ ಬಳಿ ಮತ ಕೇಳಲು ಬರಲೇ ಇಲ್ಲ. ಸಿದ್ದರಾಮಯ್ಯ ಮತ್ತು ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೆವು. ಜನರು ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿದ್ದಾರೆ. ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಮನೆ ಯಜಮಾನಿಯ ಖಾತೆಗೆ ₹2 ಸಾವಿರ ನೀಡಲಾಗುತ್ತಿದೆ. ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ₹52 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.

DK Shivakumar ಮೇಕೆದಾಟು ಯೋಜನೆ ಪೂರ್ಣಗೊಳಿಸುವ ಭರವಸೆ

ನಮ್ಮ ಕ್ಷೇತ್ರದ ಜನರು ಕ್ಷೇತ್ರದಲ್ಲೇ ಉದ್ಯೋಗ ಪಡೆಯಬೇಕು. ಉದ್ಯೋಗಕ್ಕಾಗಿ ಯಾರೂ ವಲಸೆ ಹೋಗಬಾರದು ಎಂಬ ಉದ್ದೇಶದಿಂದ ಚನ್ನಪಟ್ಟಣ-ರಾಮನಗರದ ಮಧ್ಯೆ ಬೃಹತ್ ಡೈರಿ ನಿರ್ಮಿಸಲಾಗಿದೆ. ಹಾಲಿನ ಬೆಲೆಯನ್ನು ₹7 ಹೆಚ್ಚಿಸಿ ರೈತರ ಬದುಕಿಗೆ ನೆರವಾಗುವ ಪ್ರಯತ್ನ ಮಾಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಪ್ರತಿ ಹಳ್ಳಿಗೂ ಕಾವೇರಿ ನೀರು ಹರಿಸುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಎಂದು ಜಿಲ್ಲೆಗೆ ಹೆಸರು ಇಟ್ಟಿದ್ದೀರಿ. ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಕ್ಷೇತ್ರದ ಜನರು ಆದೇಶಿಸಿದ್ದಾರೆ. ಅದಕ್ಕೆ ತಲೆಬಾಗಿ ಯೋಜನೆ ರೂಪಿಸಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ನ್ಯಾಯ ಸಿಕ್ಕಿದೆ. ಈ ಯೋಜನೆ ನನ್ನ ಅವಧಿಯಲ್ಲೇ ಪೂರ್ಣಗೊಳ್ಳಬೇಕು. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

also read: https://hosasuddi.in/dk-shivakumar-japan-visit/

DK Shivakumar ಬೆಂಗಳೂರು ದಕ್ಷಿಣದಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ

ಬೆಂಗಳೂರು ದಕ್ಷಿಣ ಭಾಗದಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ ಎಂದು ಶಿವಕುಮಾರ್ ಹೇಳಿದರು. ಚನ್ನಪಟ್ಟಣದ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು, ರಾಮನಗರದ ವಿಶ್ವವಿದ್ಯಾಲಯ, ಹಾರೋಹಳ್ಳಿ ಹಾಗೂ ಕನಕಪುರದ ಮಧ್ಯೆ ದಯಾನಂದ ಸಾಗರ ಕಾಲೇಜು ಸೇರಿದಂತೆ ವೈದ್ಯಕೀಯ ಶಿಕ್ಷಣಕ್ಕೆ ಹಲವು ಅವಕಾಶಗಳು ಸೃಷ್ಟಿಯಾಗಿವೆ.

ಇಡೀ ಭಾರತದಲ್ಲಿ ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳು ಇರುವ ಉದಾಹರಣೆ ಇಲ್ಲ. ಆದರೆ ನಮ್ಮ ಕ್ಷೇತ್ರದಲ್ಲಿ ಈ ಅವಕಾಶ ಸಿಕ್ಕಿದೆ. ಕ್ಷೇತ್ರದ ಜನರ ಬದುಕಿನಲ್ಲಿ ಬದಲಾವಣೆ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಸಾತನೂರು-ಕೆಂಬಾಳ ಬಳಿ, ಕಲ್ಲಹಳ್ಳಿ, ಮರಿಯ್ಯನ ದೊಡ್ಡಿ ಸೇರಿದಂತೆ ಸುಮಾರು 10 ಕಡೆ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ನಾನು ಪಡೆದ ಶಿಕ್ಷಣಕ್ಕಿಂತ ನೀವು ಉತ್ತಮ ಶಿಕ್ಷಣ ಪಡೆಯಬೇಕು. ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.

DK Shivakumar ಸಾತನೂರು ಟ್ಯಾಲೆಂಟ್ ಪಾರ್ಕ್ ಆಗಿಸುವ ಗುರಿ

ಇದೇ ಸಂದರ್ಭದಲ್ಲಿ ಸಾತನೂರಿನಲ್ಲಿ ರೂರಲ್ ಎಜುಕೇಷನ್ ಸೊಸೈಟಿ ವತಿಯಿಂದ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಶಿವಕುಮಾರ್ ಉದ್ಘಾಟಿಸಿದರು.

ಸಾತನೂರನ್ನು ಟ್ಯಾಲೆಂಟ್ ಪಾರ್ಕ್ ಆಗಿ ರೂಪಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಯುವಕರಿಗೂ ನಗರ ಪ್ರದೇಶದ ಯುವಕರಿಗೆ ಸಿಗುವಂತಹ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾಧಾರಿತ ತರಬೇತಿ ದೊರೆಯಬೇಕು. ಈ ಮೂಲಕ ಗ್ರಾಮೀಣ ಯುವಕರಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂಬುದು ಸರ್ಕಾರದ ಆಶಯ ಎಂದು ಶಿವಕುಮಾರ್ ಹೇಳಿದರು.

Continue Reading

ದೇಶ

China Pakistan Space Cooperation: ಚೀನಾ ನೆರವಿನಿಂದ ಪಾಕಿಸ್ತಾನದ ಬಾಹ್ಯಾಕಾಶ ಸಾಮರ್ಥ್ಯ ಹೆಚ್ಚಳ ಭಾರತದ ತ್ರಿದಳಾಧಿಪತಿ ಎಚ್ಚರಿಕೆ

Published

on

India CDS General NS Raja Subramani discussing China's space support to Pakistan

ನವದೆಹಲಿ: ಚೀನಾ ನೆರವಿನೊಂದಿಗೆ ಪಾಕಿಸ್ತಾನ ತನ್ನ ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯವನ್ನು(China Pakistan Space Cooperation) ಮತ್ತಷ್ಟು ಸುಧಾರಿಸಿಕೊಳ್ಳುತ್ತಿದೆ ಎಂದು ಭಾರತದ ತ್ರಿದಳಾಧಿಪತಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಹೇಳಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾಕಿಸ್ತಾನ ಪಡೆಯುತ್ತಿರುವ ಹೊಸ ಸಾಮರ್ಥ್ಯಗಳನ್ನು ಭಾರತದ ಭವಿಷ್ಯದ ಕಾರ್ಯತಂತ್ರ ರೂಪಿಸುವಾಗ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ, ಪಾಕಿಸ್ತಾನವು ಚೀನಾದೊಂದಿಗೆ ಹೊಂದಿರುವ ಸಹಕಾರದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಇದು ಕೇವಲ ಬಾಹ್ಯಾಕಾಶ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ದೇಶದ ಭದ್ರತೆ ಮತ್ತು ಕಾರ್ಯತಂತ್ರಕ್ಕೆ ಸಂಬಂಧಿಸಿದ ಇತರ ಸಾಮರ್ಥ್ಯಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ಚೀನಾ Shenzhou-24 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿರುವ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ತ್ರಿದಳಾಧಿಪತಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾಹ್ಯಾಕಾಶ ಯಾನದಲ್ಲಿ ಪಾಕಿಸ್ತಾನದ ಪ್ರಜೆಯೂ ಸೇರಿದಂತೆ ಮೂವರು ಗಗನಯಾತ್ರಿಗಳು ಭಾಗವಹಿಸಿದ್ದರು ಎಂಬ ವಿಚಾರವನ್ನು ಉಲ್ಲೇಖಿಸಿ ಪ್ರಶ್ನೆ ಕೇಳಲಾಗಿತ್ತು.

ಅದಕ್ಕೆ ಉತ್ತರಿಸಿದ ಜನರಲ್ ರಾಜಾ ಸುಬ್ರಮಣಿ, ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಂದಿರುವ ಸಾಮರ್ಥ್ಯಗಳ ಪ್ರಯೋಜನವನ್ನು ಪಾಕಿಸ್ತಾನವೂ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಗುಪ್ತಚರ ಮತ್ತು ನ್ಯಾವಿಗೇಷನ್ ಸೇರಿದಂತೆ ಹಲವು ಪ್ರಮುಖ ಸೇವೆಗಳಲ್ಲಿ ಚೀನಾ ಹೊಂದಿರುವ ಸಾಮರ್ಥ್ಯಗಳನ್ನು ಪಾಕಿಸ್ತಾನ ಬಳಸಿಕೊಳ್ಳುವ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

China Pakistan Space Cooperation ಗುಪ್ತಚರ, ನ್ಯಾವಿಗೇಷನ್ ಸಾಮರ್ಥ್ಯಗಳ ಬಗ್ಗೆ ಎಚ್ಚರಿಕೆ

ಬಾಹ್ಯಾಕಾಶ ತಂತ್ರಜ್ಞಾನವು ಇಂದಿನ ಭದ್ರತಾ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಉಪಗ್ರಹಗಳ ಮೂಲಕ ಗುಪ್ತಚರ ಮಾಹಿತಿ ಸಂಗ್ರಹಿಸುವುದು, ನ್ಯಾವಿಗೇಷನ್ ಸೇವೆಗಳನ್ನು ಒದಗಿಸುವುದು ಹಾಗೂ ವಿವಿಧ ರೀತಿಯ ಕಾರ್ಯತಂತ್ರದ ಮಾಹಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಇಂತಹ ಕ್ಷೇತ್ರಗಳಲ್ಲಿ ಚೀನಾ ಈಗಾಗಲೇ ಹೊಂದಿರುವ ಸಾಮರ್ಥ್ಯಗಳನ್ನು ಪಾಕಿಸ್ತಾನ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಭಾರತ ಇದನ್ನು ತನ್ನ ರಕ್ಷಣಾ ಯೋಜನೆಗಳಲ್ಲಿ ಪರಿಗಣಿಸಬೇಕಾಗಿದೆ ಎಂಬ ಸಂದೇಶವನ್ನು ತ್ರಿದಳಾಧಿಪತಿ ನೀಡಿದ್ದಾರೆ.

ಪಾಕಿಸ್ತಾನವು ಚೀನಾದೊಂದಿಗೆ ರಕ್ಷಣಾ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸಹಕಾರ ಹೊಂದಿದೆ. ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲೂ ಈ ಸಹಕಾರ ಮುಂದುವರಿದಿರುವುದು ಭಾರತದ ಭದ್ರತಾ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆಯಾಗಿದೆ.

ಚೀನಾದ ಬಾಹ್ಯಾಕಾಶ ಸಾಮರ್ಥ್ಯವು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಅದರ ತಂತ್ರಜ್ಞಾನ ಮತ್ತು ಸೇವೆಗಳ ಲಭ್ಯತೆ ಹೆಚ್ಚಾದರೆ, ಅದು ಭಾರತದ ಭದ್ರತಾ ಲೆಕ್ಕಾಚಾರಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಎದುರಾಗಬಹುದಾದ ಹೊಸ ಸವಾಲುಗಳನ್ನು ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ಸೇರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ರಾಜಾ ಸುಬ್ರಮಣಿ ಹೇಳಿದ್ದಾರೆ.

also read: https://hosasuddi.in/karnataka-assembly-election-2029-st-somashekar/

Karnataka Assembly Election 2029: 2028ರಲ್ಲಿ ಚುನಾವಣೆ ನಡೆಯಲ್ಲ 2029ಕ್ಕೆ ಮುಂದೂಡಿಕೆ? ಎಸ್.ಟಿ. ಸೋಮಶೇಖರ್ ಅಚ್ಚರಿ ಹೇಳಿಕೆ

China Pakistan Space Cooperationಭಾರತದ ಕಾರ್ಯತಂತ್ರದಲ್ಲಿ  ಬಾಹ್ಯಾಕಾಶಕ್ಕೆ ಮಹತ್ವ

ಆಧುನಿಕ ಯುದ್ಧ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಬಾಹ್ಯಾಕಾಶ ಕ್ಷೇತ್ರದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉಪಗ್ರಹ ಆಧಾರಿತ ನ್ಯಾವಿಗೇಷನ್, ಸಂವಹನ ಮತ್ತು ಗುಪ್ತಚರ ವ್ಯವಸ್ಥೆಗಳು ಸೇನಾ ಕಾರ್ಯಾಚರಣೆಗಳಲ್ಲಿ ಪ್ರಮುಖವಾಗಿವೆ. ಈ ಹಿನ್ನೆಲೆಯಲ್ಲಿ ಎದುರಾಳಿ ರಾಷ್ಟ್ರಗಳು ಬಾಹ್ಯಾಕಾಶ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ ಎಂಬುದನ್ನು ನಿರಂತರವಾಗಿ ಗಮನಿಸುವುದು ಅಗತ್ಯವಾಗಿದೆ.

ಚೀನಾ ತನ್ನ ಬಾಹ್ಯಾಕಾಶ ಕಾರ್ಯಕ್ರಮವನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಪಾಕಿಸ್ತಾನದೊಂದಿಗೆ ಅದರ ಸಹಕಾರವೂ ಹೊಸ ಆಯಾಮ ಪಡೆಯುತ್ತಿದೆ. ಇಂತಹ ಬೆಳವಣಿಗೆಗಳನ್ನು ಕೇವಲ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳಾಗಿ ನೋಡದೆ, ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ದೃಷ್ಟಿಯಿಂದಲೂ ವಿಶ್ಲೇಷಿಸಬೇಕು ಎಂಬುದನ್ನು ತ್ರಿದಳಾಧಿಪತಿಯ ಹೇಳಿಕೆ ಸೂಚಿಸುತ್ತದೆ.

ಪಾಕಿಸ್ತಾನದ ಸಾಮರ್ಥ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ತನ್ನದೇ ಆದ ಬಾಹ್ಯಾಕಾಶ ಆಧಾರಿತ ರಕ್ಷಣಾ ಮತ್ತು ಗುಪ್ತಚರ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವೂ ಎದುರಾಗಿದೆ. ವಿಶೇಷವಾಗಿ ಚೀನಾ ಹೊಂದಿರುವ ಗುಪ್ತಚರ ಹಾಗೂ ನ್ಯಾವಿಗೇಷನ್ ಸಾಮರ್ಥ್ಯಗಳನ್ನು ಪಾಕಿಸ್ತಾನ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಭವಿಷ್ಯದ ಭದ್ರತಾ ಯೋಜನೆಗಳಲ್ಲಿ ಈ ಅಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಒಟ್ಟಿನಲ್ಲಿ, ಚೀನಾ ನೆರವಿನಿಂದ ಪಾಕಿಸ್ತಾನ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವುದು ಭಾರತದ ಭದ್ರತಾ ಕಾರ್ಯತಂತ್ರಕ್ಕೆ ಹೊಸ ಸವಾಲಾಗಬಹುದು ಎಂದು ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರ ಹೇಳಿಕೆ ಸ್ಪಷ್ಟಪಡಿಸಿದೆ. ಬಾಹ್ಯಾಕಾಶ, ಗುಪ್ತಚರ ಮತ್ತು ನ್ಯಾವಿಗೇಷನ್ ಕ್ಷೇತ್ರಗಳಲ್ಲಿ ಎದುರಾಗುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಕಾರ್ಯತಂತ್ರವನ್ನು ರೂಪಿಸಬೇಕಾದ ಅಗತ್ಯವಿದೆ.

Continue Reading
Advertisement

Trending