ದೇಶ
BENGALURU : “ಟೈಮ್ ಬಂದಾಗ ಸಿದ್ದರಾಮಯ್ಯ ಹೇಳ್ತಾರೆ” – ಡಿಕೆಶಿ ಹೊಸ ಗೂಗ್ಲಿ
ಬೆಂಗಳೂರು, ಫೆಬ್ರವರಿ 17: ಕಾಂಗ್ರೆಸ್ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರ್ ಚರ್ಚೆ ನಡುವೆ ಉಪ ಮುಖ್ಯಮಂತ್ರಿ D. K. Shivakumar ಹೊಸ ಗೂಗ್ಲಿ ಬಿಟ್ಟಿದ್ದಾರೆ. “ಸಮಯ ಬಂದಾಗ ಸಿಎಂ Siddaramaiah ಅವರೇ ರಾಜ್ಯದ ಜನತೆಗೆ ಹೇಳ್ತಾರೆ” ಎಂದು ಹೇಳುವ ಮೂಲಕ ಚೆಂಡನ್ನು ಸಿಎಂ ಅಂಗಳಕ್ಕೆ ಎಸೆದಿದ್ದಾರೆ.
ಸಚಿವ H. C. Mahadevappa ನೀಡಿದ್ದ ‘ನಾಯಿ ಬಾಲ ಅಲ್ಲಾಡಿಸಬಾರದು’ ಹೇಳಿಕೆಗೆ ನಯವಾಗಿ ತಿರುಗೇಟು ನೀಡಿದ ಡಿಕೆಶಿ, “ನಾನು ಯಾರಿಗೂ ಉತ್ತರ ಕೊಡೋದಕ್ಕೆ ತಯಾರಿಲ್ಲ. ನಾಯಕತ್ವ ವಿಚಾರದಲ್ಲಿ ನಾನು ಮತ್ತು ಸಿದ್ದರಾಮಯ್ಯ ಮಾತನಾಡಿದ್ದೇವೆ. ಹೈಕಮಾಂಡ್ ಮಟ್ಟದಲ್ಲೂ ತೀರ್ಮಾನವಾಗಿದೆ. ಟೈಮ್ ಬಂದಾಗ ಸ್ಪಷ್ಟತೆ ಸಿಗುತ್ತದೆ” ಎಂದು ಹೇಳಿದರು.
“ಇದು ಯಾವುದೇ ಗುಟ್ಟು ವ್ಯವಹಾರವಲ್ಲ. ಕದ್ದು ಮುಚ್ಚಿ ಏನೂ ಮಾಡಿಲ್ಲ. ಸೂಕ್ತ ಸಮಯದಲ್ಲಿ ಸಿಎಂ ಸ್ಪಷ್ಟಪಡಿಸುತ್ತಾರೆ” ಎಂದು ಅವರು ಪುನರುಚ್ಚರಿಸಿದರು. ಬೆಳಗ್ಗೆ ಆಪ್ತ ಶಾಸಕ ಬಸವರಾಜ ಶಿವಗಂಗಾ ಸಿಎಂ ಸ್ಪಷ್ಟನೆ ನೀಡಲಿ ಎಂದಿದ್ದರೆ, ಮಧ್ಯಾಹ್ನ ಡಿಕೆಶಿಯ ಹೇಳಿಕೆ ರಾಜಕೀಯ ಚದುರಂಗದಾಟಕ್ಕೆ ಹೊಸ ತಿರುವು ನೀಡಿದೆ.
ಶಾಸಕರ ಫಾರಿನ್ ಟೂರ್ ಬಗ್ಗೆ ‘ನನಗೆ ಗೊತ್ತಿಲ್ಲ’
ಕಾಂಗ್ರೆಸ್ನ ಕೆಲ ಶಾಸಕರ ವಿದೇಶ ಪ್ರವಾಸ ಕುರಿತು ಕೇಳಿದ ಪ್ರಶ್ನೆಗೆ ಡಿಕೆಶಿ, “ಯಾವ ಟೂರ್ ಬಗ್ಗೆ ನನಗೆ ಗೊತ್ತಿಲ್ಲ. ಯಾರಾದರೂ ಸ್ಪಾನ್ಸರ್ ಮಾಡ್ತಿದ್ದಾರೋ ಗೊತ್ತಿಲ್ಲ. ನಾನು ಪಕ್ಷದ ಅಧ್ಯಕ್ಷ, ಆದರೆ ನನಗೆ ಮಾಹಿತಿ ಇಲ್ಲ. ಮಧ್ಯಪ್ರವೇಶ ಮಾಡಲ್ಲ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ನಾಯಕತ್ವ ಬದಲಾವಣೆ ಮತ್ತು ಶಾಸಕರ ಟೂರ್ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ.