DK ಶಿವಕುಮಾರ್ ಗರ್ಜನೆ: “RSS ಗೀತೆ ಬಗ್ಗೆ ಪ್ರಶ್ನೆ ಮಾಡುವವರು ಮೂರ್ಖರು!” | Hosa Suddi

ಬೆಂಗಳೂರು

DK ಶಿವಕುಮಾರ್ ಗರ್ಜನೆ: “RSS ಗೀತೆ ಬಗ್ಗೆ ಪ್ರಶ್ನೆ ಮಾಡುವವರು ಮೂರ್ಖರು!”

Published

on

ಬೆಂಗಳೂರು (ಆ.26): ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕಾಂಗ್ರೆಸ್ ಪಕ್ಷದ ಒಳಗೆಲ್ಲಾ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ,

“ನಾನು ಯಾರ ಮನಸ್ಸಿಗೂ ನೋವು ನೀಡಲು ಬಯಸುವುದಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ನನ್ನ ಮಾತು ಪ್ರಶ್ನೆ ಮಾಡುತ್ತಿರುವವರು ಮೂರ್ಖರು ಎಂದು ನಾನು ನಂಬುತ್ತೇನೆ,” ಎಂದು ಗಟ್ಟಿಯಾಗಿ ಸ್ಪಷ್ಟನೆ ನೀಡಿದರು.

🎯 ಕೆ.ಎನ್. ರಾಜಣ್ಣಗೆ ತಿರುಗೇಟು:

ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಪ್ರತಿಕ್ರಿಯಿಸಿದ ಡಿಕೆಶಿ,

“ಅವರು ಯಾರಿಗೆ ಸಲಹೆ ನೀಡಬೇಕೋ ಅವರಿಗೆ ನೀಡಲಿ. ನನಗೆ ಹೇಳಬೇಕಿಲ್ಲ. ನಾನು ನನ್ನ ಬದ್ದತೆಯಂತೆ ನಡೆದುಕೊಳ್ಳುತ್ತೇನೆ,” ಎಂದು ಟಾಂಗ್ ನೀಡಿದರು.

ಈ ವಿವಾದದ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಕೂಡ ಗಮನ ಹರಿಸಿದ್ದು, ಡಿಕೆಶಿ ಹೇಳಿಕೆಗಳು ಮುಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

Trending

Exit mobile version