ಡಿಕೆಶಿ ಅಭಿಮಾನಿಗಳ ಹಾರೈಕೆ: “ನಮ್ಮ ಸಿಎಂ ಡಿಕೆಶಿಯೇ” | Hosa Suddi

ದೇಶ

ಡಿಕೆಶಿ ಅಭಿಮಾನಿಗಳ ಹಾರೈಕೆ: “ನಮ್ಮ ಸಿಎಂ ಡಿಕೆಶಿಯೇ”

Published

on

ಕೋಲಾರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅವರ ಅಭಿಮಾನಿಗಳು ಕೋಲಾರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೋಲಾರ ನಗರದ ಕೋಟೆ ಬಡಾವಣೆಯಲ್ಲಿರುವ ಶಕ್ತಿ ದೇವತೆ ಕೋಲಾರಮ್ಮ ದೇವಸ್ಥಾನದಲ್ಲಿ ಹತ್ತಾರು ಅಭಿಮಾನಿಗಳು ಜಮಾವಣೆಗೊಂಡು ವಿಶೇಷ ಪೂಜೆ ನೆರವೇರಿಸಿದರು.

ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಹಾರೈಕೆಯೊಂದಿಗೆ ದೇವಿಗೆ ಹೂ, ಹಣ್ಣು, ಅರ್ಚನೆ ಸಲ್ಲಿಸಿದ ನಂತರ, ಅಭಿಮಾನಿಗಳು ಭಿತ್ತಿಪತ್ರಗಳನ್ನು ಹಿಡಿದು “ಡಿಕೆಶಿ ಸಿಎಂ ಆಗಲಿ” ಎಂದು ಜೈಕಾರ ಕೂಗಿದರು. ಈ ವೇಳೆ ದೇವಾಲಯದ ಆವರಣದಲ್ಲಿ ಈಡುಗಾಯಿಯನ್ನೂ ಹೊಡೆದು ವಿಶೇಷ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಸುಜಿತ್ ಗೌಡ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿ, “ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿಗೆ ಮುಖ್ಯಮಂತ್ರಿಗಳ ಸ್ಥಾನವನ್ನು ಒಪ್ಪಿಸಲಿ” ಎಂದು ದೇವರಲ್ಲಿ ಪ್ರಾರ್ಥಿಸಿದರು. ಡಿಕೆಶಿ ಸಿಎಂ ಆದರೆ ಸಮುದಾಯ ಮತ್ತು ಸಾರ್ವಜನಿಕರ ಹಲವು ಬೇಡಿಕೆಗಳು ಈಡೇರುವ ವಿಶ್ವಾಸವಿದೆ ಎಂದೂ ಅವರು ಹೇಳಿದರು।

ಪೂಜಾ ಕಾರ್ಯಕ್ರಮದಿಂದ ದೇವಾಲಯದ ಆವರಣದಲ್ಲಿ ಸಾಕಷ್ಟು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

Trending

Exit mobile version