ಬೆಂಗಳೂರು
D. K. Shivakumar ಕಿಡಿ: ಬಿಜೆಪಿ ಶಾಸಕರು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ; ಎಸ್ಮಾ ಅಡಿಯಲ್ಲಿ ಕ್ರಮದ ಎಚ್ಚರಿಕೆ
ಬೆಂಗಳೂರು: ನಗರದ ಕಸ ವಿಲೇವಾರಿ ವಿಚಾರವಾಗಿ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಬೆಂಗಳೂರಿನ ಕಸವನ್ನು Doddaballapuraಗೆ ನಿಯಮಬಾಹಿರವಾಗಿ ಸಾಗಿಸಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ D. K. Shivakumar ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿಯ ಎಲ್ಲಾ ಶಾಸಕರು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ. ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಅಂತ ಅಪಘಾತ ವಿಚಾರ ಮುಂದಿಟ್ಟುಕೊಂಡು ಒತ್ತಡ ತರುತ್ತಿದ್ದಾರೆ. ಗೌರವದಿಂದ ವರ್ತಿಸಿದ್ರೆ ಸರಿ, ಇಲ್ಲದಿದ್ರೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತೆ,” ಎಂದು ಎಚ್ಚರಿಸಿದರು.
ಕಸ ಎಲ್ಲಾದರೂ ಒಂದೇ ಕಡೆ ಹಾಕಬೇಕಲ್ಲವೇ? ಅಲ್ಲೂ ಬೇಡ, ಇಲ್ಲೂ ಬೇಡ ಅಂದ್ರೆ ಎಲ್ಲಿಗೆ ಹಾಕಬೇಕು? ಅಗತ್ಯವಿದ್ದರೆ ಅಶೋಕ್, ವಿಜಯೇಂದ್ರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಮುಂದೆ ಕಸ ಹಾಕಿಸಬೇಕಾಗುತ್ತೆ ಎಂದು ಡಿಕೆಶಿ ವಾರ್ನಿಂಗ್ ನೀಡಿದರು. ನಿನ್ನೆ ಲಿಂಬಾವಳಿ ಪ್ರತಿಭಟನೆ ಮಾಡಿದ್ದಾರೆ, ಇವತ್ತು ದೊಡ್ಡಬಳ್ಳಾಪುರದ ಶಾಸಕ ಪ್ರಶ್ನೆ ಮಾಡ್ತಿದ್ದಾರೆ. ಇವರೆಲ್ಲ ತಮ್ಮ ಕ್ಷೇತ್ರಕ್ಕೆ ಅನುದಾನಕ್ಕಾಗಿ ರಾಜಕೀಯ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ದೊಡ್ಡಬಳ್ಳಾಪುರದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಮಾತನಾಡಿದ ಅವರು, ಘಟನೆ ನಡೆಯಬಾರದಿತ್ತು, ಆದರೂ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.