ದೇಶ

AI ಸೇರಿದಂತೆ ಹೊಸ ತಂತ್ರಜ್ಞಾನಗಳತ್ತ ಶಿಕ್ಷಣ ಕ್ಷೇತ್ರ: ಸಂಸದರ ಮಹತ್ವದ ಸಮಾಲೋಚನೆ

Published

on

ನವದೆಹಲಿ: India ದ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ಪಾತ್ರ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಮಹತ್ವದ ದುಂಡು ಮೇಜಿನ ಸಮಾಲೋಚನಾ ಸಭೆ ನವದೆಹಲಿಯಲ್ಲಿ ನಡೆಯಿತು. NFPRC ಮತ್ತು PANJ ಫೌಂಡೇಶನ್‌ಗಳ ಸಂಯುಕ್ತಾಶ್ರಯದಲ್ಲಿ 2026ರ ಆಗಸ್ಟ್ 10ರಂದು ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ‘ಭಾರತದ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವಲ್ಲಿ ಉದಯೋನ್ಮುಖ ತಂತ್ರಜ್ಞಾನಗಳು’ ಎಂಬ ವಿಷಯದ ಕುರಿತು ಈ ಸಮಾಲೋಚನೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಸಂಸದರು, ನೀತಿ ನಿರೂಪಕರು, ತಂತ್ರಜ್ಞಾನ ತಜ್ಞರು, ಕೈಗಾರಿಕಾ ಕ್ಷೇತ್ರದ ವೃತ್ತಿಪರರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಮತ್ತು ಅದರ ಸಾಧ್ಯತೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳು ಶಿಕ್ಷಣದ ಗುಣಮಟ್ಟ, ಲಭ್ಯತೆ ಹಾಗೂ ಭವಿಷ್ಯದ ಕಲಿಕಾ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳ ಕುರಿತು ಪ್ರಮುಖ ಅಭಿಪ್ರಾಯಗಳು ವ್ಯಕ್ತವಾದವು

ಚರ್ಚೆಯಲ್ಲಿ ಗೌರವಾನ್ವಿತ ಸಂಸದರಾದ ಮನೀಶ್ ತಿವಾರಿ, ಅತುಲ್ ಗರ್ಗ್, ಕಾರ್ತಿ ಚಿದಂಬರಂ, ಸುಜೀತ್ ಕುಮಾರ್ ಹಾಗೂ ಕೊಂಡ ವಿಶ್ವೇಶ್ವರ ರೆಡ್ಡಿ ಭಾಗವಹಿಸಿ ತಮ್ಮ ಮಹತ್ವದ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಸರ್ಕಾರದ ಪರವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) NIELIT India ಹಾಗೂ ಶಿಕ್ಷಣ ಸಚಿವಾಲಯದ ಹಿರಿಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಅವಕಾಶಗಳನ್ನು ಸಮಗ್ರವಾಗಿ ಪರಿಶೀಲಿಸುವುದು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಭವಿಷ್ಯನೋಟದ ದೃಷ್ಟಿಕೋನಗಳನ್ನು ರೂಪಿಸುವುದು ಹಾಗೂ ಚರ್ಚೆಯಿಂದ ಹೊರಬಂದ ಪ್ರಮುಖ ಒಳನೋಟಗಳು ರಾಷ್ಟ್ರೀಯ ಮಟ್ಟದ ನೀತಿ ರೂಪಿಸುವಿಕೆಗೆ ಪೂರಕವಾಗುವಂತೆ ಮಾಡುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಭಾರತದ ಶಿಕ್ಷಣ ಕ್ಷೇತ್ರವು ವೇಗವಾಗಿ ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಇಂತಹ ಸಮಾಲೋಚನೆಗಳು ಸರ್ಕಾರ, ತಂತ್ರಜ್ಞಾನ ಕ್ಷೇತ್ರ ಮತ್ತು ಶಿಕ್ಷಣ ತಜ್ಞರ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

Trending

Exit mobile version