ದೇಶ
ಸೆಪ್ಟೆಂಬರ್ 1ರಿಂದ ಹಣಕಾಸು ಕ್ಷೇತ್ರದಲ್ಲಿ ಐದು ಪ್ರಮುಖ ಬದಲಾವಣೆಗಳು: ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ
ನವದೆಹಲಿ:
ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರ ಹಾಗೂ ಬ್ಯಾಂಕುಗಳು ಹೊಸ ನೀತಿಗಳನ್ನು ಜಾರಿಗೆ ತರುತ್ತಿರುತ್ತವೆ. ಸೆಪ್ಟೆಂಬರ್ 1, 2025ರಿಂದ ದೇಶದಾದ್ಯಂತ ಐದು ಪ್ರಮುಖ ಹಣಕಾಸು ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ನೇರವಾಗಿ ಸಾಮಾನ್ಯ ನಾಗರಿಕರ ದೈನಂದಿನ ಜೀವನ ಮತ್ತು ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
1. ಬೆಳ್ಳಿ ಖರೀದಿಗೆ ಹಾಲ್‍ಮಾರ್ಕ್ ಕಡ್ಡಾಯ?
ಕೇಂದ್ರ ಸರ್ಕಾರವು ಬೆಳ್ಳಿ ಮಾರಾಟ ಮತ್ತು ಖರೀದಿಯಲ್ಲಿ ಪಾರದರ್ಶಕತೆಯನ್ನು ತರಲು ಹೊಸ ಮಾರ್ಗಸೂಚಿ ಜಾರಿಗೆ ತರಲಿದೆ. ಇದರ ಭಾಗವಾಗಿ ಬೆಳ್ಳಿ ಆಭರಣಗಳಿಗೆ ಹಾಲ್‍ಮಾರ್ಕ್ ಕಡ್ಡಾಯವಾಗುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಆಭರಣ ಖರೀದಿಗೆ ಭರವಸೆ ಸಿಗಬಹುದು, ಆದರೆ ಬೆಲೆ ಏರಿಕೆಯಾಗುವ ಸಾಧ್ಯತೆವಿದೆ.
2. ಎಸ್‌ಬಿಐ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ
ಎಸ್‌ಬಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರುತ್ತಿದೆ. ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಸರ್ಕಾರಿ ಪಾವತಿಗಳು ಮತ್ತು ಕೆಲವು ವ್ಯಾಪಾರಿಗಳ ಖರ್ಚುಗಳಿಗೆ ಈಗ ರಿವಾರ್ಡ್ ಪಾಯಿಂಟ್‌ಗಳಿಲ್ಲ. ಇದರಿಂದ ಕಾರ್ಡ್ ಬಳಕೆದಾರರಿಗೆ ಪ್ರತಿದಿನದ ಖರ್ಚುಗಳಲ್ಲಿ ನಷ್ಟವಾಗಬಹುದು.
3. ಎಲ್‍ಪಿಜಿ ಸಿಲಿಂಡರ್ ದರ ಪ್ರತಿಮಾಸ ಪರಿಷ್ಕರಣೆ
ಸೆಪ್ಟೆಂಬರ್ 1ರಿಂದ ಪ್ರತಿ ತಿಂಗಳ ಮೊದಲ ದಿನ ಎಲ್‍ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಲಿದೆ. ತೈಲ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ದರದ ಆಧಾರದಲ್ಲಿ ಈ ಬದಲಾವಣೆ ಜರುಗಲಿದೆ. ಬೆಲೆ ಏರಿದರೆ ಅಡುಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಇಳಿದರೆ ಸಣ್ಣ ಪರಿಹಾರ ಸಿಕ್ಕಂತಾಗುತ್ತದೆ.
4. ಅಂಚೆ ಸೇವೆ ಬದಲಾವಣೆ – ರಿಜಿಸ್ಟರ್ ಪೋಸ್ಟ್ ಇಲ್ಲ
ಇನ್ನು ಮುಂದೆ ರಿಜಿಸ್ಟರ್ ಪೋಸ್ಟ್‌ನ್ನು ಸ್ಪೀಡ್ ಪೋಸ್ಟ್‌ನಲ್ಲೇ ವಿಲೀನಗೊಳಿಸಲಾಗುತ್ತದೆ. ಅಂದರೆ ನಾಳೆಯಿಂದ ಯಾವ ಪತ್ರವನ್ನಾದರೂ ಕಳುಹಿಸುವುದಾದರೆ, ಅದು ಸ್ಪೀಡ್ ಪೋಸ್ಟ್ ಮುಖಾಂತರವೇ ಸಾಗಲಿದೆ. ಇದರಿಂದ ಸೇವೆಯ ವೇಗ ಹೆಚ್ಚಾದರೂ, ವೆಚ್ಚ ಹಾಗೂ ಸೌಲಭ್ಯದಲ್ಲಿ ವ್ಯತ್ಯಾಸ ಆಗಬಹುದಾಗಿದೆ.
5. ಎಟಿಎಂ ಮೂಲಕ ಹಣ ತೆಗೆಯುವ ಮಿತಿಗೆ ಮಿತಿ!
ಕೆಲವು ಬ್ಯಾಂಕುಗಳು ATM Withdrawal ನಿಯಮಗಳಲ್ಲಿ ಬದಲಾವಣೆ ತಂದಿದ್ದು, ನಿಗದಿತ ಮಿತಿಯ ಮೇಲೆ ಹಣ ತೆಗೆದರೆ ಹೆಚ್ಚುವರಿ ಶುಲ್ಕ ವಿಧ ಮಾಡಲಿದೆ. ಇದರಿಂದ UPI ಮತ್ತು ಡಿಜಿಟಲ್ ಪಾವತಿಗೆ ಹೆಚ್ಚಿನ ಒತ್ತುವರಿ ಬರಲಿದೆ.