ದೇಶ
ನೀರಿನಲ್ಲೇ ನಡೆದುಕೊಂಡು ದರ್ಶನ: ಹಂಪಿಯ ಭಕ್ತರ ಸಂಕಷ್ಟ!
ಬಳ್ಳಾರಿ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಆವರಣವೇ ನೀರಿನಲ್ಲಿ ಮುಳುಗಿದೆ. ಐತಿಹಾಸಿಕ ಮತ್ತು ಪವಿತ್ರ ತಾಣವಾದ ಹಂಪಿಯ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಮೊಣಕಾಲು ಎತ್ತರದಷ್ಟು ಮಳೆನೀರು ನಿಂತಿದ್ದು, ಭಕ್ತರು ಮತ್ತು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆನೀರು ಹೊರಹೋಗುವ ವ್ಯವಸ್ಥೆ ಸರಿಯಾಗಿಲ್ಲದ ಕಾರಣ, ದೇವಾಲಯದ ಆವರಣದಲ್ಲಿ ಜಮೀನಾದ ನೀರಿನಲ್ಲಿ ಜನರು ಬರೆಕಾಲು ನಡೆದುಕೊಂಡು ದರ್ಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರು ಪಾದರಕ್ಷೆಗಳು ಬಿಚ್ಚಿ, ನೀರಿನಲ್ಲಿಯೇ ದೇವಾಲಯದ ಒಳಭಾಗದತ್ತ ತೆರಳಿದ್ದಾರೆ.
ಪ್ರತಿ ವರ್ಷ ಸಾವಿರಾರು ದೇಶಿ ಹಾಗೂ ವಿದೇಶಿ ಪ್ರವಾಸಿಗರು ಭೇಟಿ ನೀಡುವ ಈ ಯುನೆಸ್ಕೋ ವಿಶ್ವ ಪರಂಪರೆ ತಾಣದಲ್ಲಿ ಇಂತಹ ಸ್ಥಿತಿ ಕಂಡುಬಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. “ಮಳೆಗಾಲ ಬಂದರೂ ನೀರು ಹೊರಹೋಗುವ ನಿಕಾಶ ವ್ಯವಸ್ಥೆ ಸರಿಪಡಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯ” ಎಂದು ಭಕ್ತರು ಕಿಡಿಕಾರಿದ್ದಾರೆ.
ಸ್ಥಳೀಯ ಆಡಳಿತ ಮತ್ತು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪ್ರವಾಸಿಗರು ಆಗ್ರಹಿಸಿದ್ದಾರೆ. ವಿರೂಪಾಕ್ಷ ದೇಗುಲದ ಸುತ್ತಮುತ್ತ ನೀರು ಹೊರಹೋಗುವ ಚರಂಡಿ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಹಂಪಿಯ ಪ್ರವಾಸೋದ್ಯಮದ ಗೌರವಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.