ಬೆಂಗಳೂರು

6th ಗ್ಯಾರಂಟಿ ಯಾಗಿ ಹಾಲಿನ ಪ್ರೋತ್ಸಾಹ ಧನವನ್ನು 15 ರೂ.ಗೆ ಏರಿಸಿ:Union Minister HD Kumaraswamy ಒತ್ತಾಯ!

Published

on

ಬೆಂಗಳೂರು: ರಾಜ್ಯ ಸರ್ಕಾರವು ಹಾಲಿನ ದರವನ್ನು ಏರಿಕೆ ಮಾಡುವ ನಿರ್ಧಾರದ ವಿರುದ್ಧ Union Minister HD Kumaraswamy ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಾಗಲೇ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನವನ್ನು 15 ರೂ.ಗೆ ಏರಿಕೆ ಮಾಡಬೇಕೆ ಹೊರತು, ಸಾರ್ವಜನಿಕರ ಮೇಲೆ ಹಾಲಿನ ದರ ಏರಿಕೆಯ ಹೊರೆ ಹಾಕಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನೀವು ಬಡವರು ಹಾಲು ಕೊಂಡುಕೊಳ್ಳದಂತೆ ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ. ಈಗಾಗಲೇ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೀರಿ, ಅದೇ ರೀತಿ 6ನೇ ಗ್ಯಾರಂಟಿ ಎಂಬಂತೆ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು 15 ರೂಪಾಯಿಗೆ ಹೆಚ್ಚಿಸಿ, ಇದರಿಂದ ರೈತರಿಗೂ ತೊಂದರೆಯಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

ಇಲ್ಲಿಯವರೆಗೆ ಲೂಟಿ ಮಾಡಿರೋದು ಸಾಕು, ಈಗಲಾದರೂ ಜನರ ಪರವಾಗಿ ಕೆಲಸ ಮಾಡಿ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನುಬದ್ಧವಾಗಿ ನಾಡನ್ನು ಉಳಿಸುವ ಕೆಲಸ ಮಾಡಿದರೆ ಇನ್ನೂ 10 ವರ್ಷ ನೀವೇ ಅಧಿಕಾರದಲ್ಲಿರಿ, ನಾನೇ 50 ಸಾವಿರ ಜನರನ್ನು ಸೇರಿಸಿ ಅದ್ದೂರಿಯಾಗಿ ಸನ್ಮಾನ ಮಾಡುತ್ತೇನೆ ಎಂದು ಲೇವಡಿ ಮಾಡಿದ್ದಾರೆ. ದೇಶದಲ್ಲಿ ಶ್ರೀಮಂತ ಹಾಗೂ ಬಡ ವರ್ಗಗಳಿದ್ದು, ಬಡ ವರ್ಗದ ಜನರಿಗೆ ಹಾಲಿನ ದರ ಜಾಸ್ತಿ ಮಾಡಿ ಸಮಸ್ಯೆ ಉಂಟು ಮಾಡಬೇಡಿ ಎಂದು ಅವರು ಎಚ್ಚರಿಸಿದ್ದಾರೆ

Trending

Exit mobile version