ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳಿದ್ದಾರೆ! ಕುಮಾರಸ್ವಾಮಿ ತೀವ್ರ ವಾಗ್ದಾಳಿ | Hosa Suddi

ದೇಶ

ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳಿದ್ದಾರೆ! ಕುಮಾರಸ್ವಾಮಿ ತೀವ್ರ ವಾಗ್ದಾಳಿ

Published

on

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ನಡುವೆಯೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಸಿಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪರಪ್ಪನ ಅಗ್ರಹಾರದಲ್ಲಿ ಅಪರಾಧಿಗಳನ್ನು ರಕ್ಷಿಸಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಕಳೆದ 3–4 ದಿನಗಳಿಂದ ವಿಡಿಯೋಗಳು ವೈರಲ್ ಆಗುತ್ತಿವೆ. ಇದು ಹೊಸದಲ್ಲ. ಇದೇ ರೀತಿಯ ಘಟನೆಗಳು ಹಿಂದೆ ನಡೆದಿವೆ,” ಎಂದರು.

ಇದಕ್ಕೂ ಹೆಚ್ಚು ವಿವಾದ ಸೃಷ್ಟಿಸಿದ ಅವರ ಹೇಳಿಕೆ ಹೀಗಿತ್ತು — “ವಿಧಾನಸೌಧದಲ್ಲೇ ಟೆರೆರಿಸ್ಟ್‌ಗಳನ್ನ ಇಟ್ಟುಕೊಂಡು, ಪರಪ್ಪನ ಅಗ್ರಹಾರದ ಟೆರೆರಿಸ್ಟ್‌ಗಳ ಬಗ್ಗೆ ಏನು ಚರ್ಚೆ ಮಾಡ್ತೀರಾ?” ಎಂದು ಕಿಡಿಕಾರಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಘಟನೆ ಕುರಿತು ತನಿಖೆ ಮಾಡುವುದಾಗಿ ಹೇಳಿದ್ದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, “ಜೈಲಿನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನ ಪರಮೇಶ್ವರ್ ಅವರಿಗೆ ಗೊತ್ತಿಲ್ಲವಾ? ಜನತೆಗೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ. ತನಿಖೆ ಮಾಡಿ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.

ಮುಂದುವರಿದು, “ಸಿಎಂ ಮತ್ತು ಗೃಹ ಸಚಿವರ ವೈಫಲ್ಯದಿಂದಲೇ ಈ ಅಸ್ಥಿರ ಪರಿಸ್ಥಿತಿ. ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದರೆ ಇಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಸಿಎಂಗೆ ಇಂಟಲಿಜೆನ್ಸ್ ಮಾಹಿತಿ ಸಿಗುವುದಿಲ್ಲವಾ? ದಿನವೂ ವರದಿ ಬರುತ್ತಿದೆ. ಆದರೆ ಎಲ್ಲವನ್ನು ಲೈಟ್ ಆಗಿ ತೆಗೆದುಕೊಳ್ಳುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಬೇಡಿಕೆ ಮಾಡಿರುವ ಗೃಹ ಸಚಿವರ ರಾಜೀನಾಮೆ ಕುರಿತು ಕುಮಾರಸ್ವಾಮಿ ಹೇಳಿದರು, “ಇದು ರಾಜೀನಾಮೆ ಕೊಡುವ ಕಾಲ ಅಲ್ಲ. ಈ ಸರ್ಕಾರದಲ್ಲಿ ನೈತಿಕತೆ ಅಥವಾ ಜವಾಬ್ದಾರಿಯ ಬುದ್ದಿ ಉಳಿದಿಲ್ಲ,” ಎಂದು ಟೀಕಿಸಿದರು.

ತಮ್ಮ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, “ನಾನು ಹೇಳಿದ್ದು ವಿಧಾನಸೌಧದ ಟೆರೆರಿಸ್ಟ್‌ಗಳ ಬಗ್ಗೆ. ಅಂದರೆ, ಅಲ್ಲಿ ಕುಳಿತಿರುವ ಕೆಲವರು ಜನರ ಭಯದ ಕಾರಣವಾಗಿದ್ದಾರೆ. ಪರಪ್ಪನ ಅಗ್ರಹಾರದ ಕೈದಿಗಳಿಗಿಂತ ಇವರೇ ಹೆಚ್ಚು ಡೇಂಜರ್,” ಎಂದು ಹೇಳಿದರು.

Trending

Exit mobile version