ದೇಶ
Heeraben Modi Temple: ಹೀರಾಬೆನ್ ಮೋದಿ ಹೆಸರಿನಲ್ಲಿ ಭವ್ಯ ದೇವಾಲಯ ಆಂಧ್ರದಲ್ಲಿ ಶಂಕುಸ್ಥಾಪನೆ
ನವದೆಹಲ: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್ ಮೋದಿ(Heeraben Modi Temple) ಅವರ ಸ್ಮರಣಾರ್ಥ ಆಂಧ್ರಪ್ರದೇಶದಲ್ಲಿ ವಿಶೇಷ ದೇವಾಲಯವೊಂದನ್ನು ನಿರ್ಮಿಸಲಾಗುತ್ತಿದೆ. ಕರ್ನೂಲು ಜಿಲ್ಲೆಯ ಯಮ್ಮಿಗನೂರು ಮಂಡಲದ ಗುಡಿಕಲ್ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣಕ್ಕೆ ನವೆಂಬರ್ 15ರಂದು ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಹೀರಾಬೆನ್ ಅವರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯದ ಜವಾಬ್ದಾರಿಯನ್ನು ಮಾತಾ ಶ್ರೀ ಮಂದಿರಂ ಚಾರಿಟೇಬಲ್ ಸೊಸೈಟಿ ವಹಿಸಿಕೊಂಡಿದೆ. ಆದೋನಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ವಿ. ಪಾರ್ಥಸಾರಥಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಂಕುಸ್ಥಾಪನೆ ನೆರವೇರಿಸಿದರು.
ವಿಶೇಷವೆಂದರೆ, ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಮಾತ್ರವಲ್ಲದೆ ಜನಸೇನಾ ಪಕ್ಷ ಮತ್ತು ವೈಎಸ್ಆರ್ಸಿಪಿ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು.
also read: https://hosasuddi.in/siddaramaiah-delhi-high-command-fifth-row-2/
Heeraben Modi Temple: ಹೀರಾಬೆನ್ ವಿಗ್ರಹದ ಜೊತೆಗೆ ಹಲವು ದೇವಾಲಯಗಳು
ನಿರ್ಮಾಣವಾಗಲಿರುವ ದೇವಾಲಯ ಸಂಕೀರ್ಣದಲ್ಲಿ ಹೀರಾಬೆನ್ ಅವರ ವಿಗ್ರಹವನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಶಿವ, ದಕ್ಷಿಣಾಮೂರ್ತಿ, ಶ್ರೀರಾಮ ಮತ್ತು ಗಣಪತಿ ದೇವಾಲಯಗಳನ್ನೂ ನಿರ್ಮಿಸಲು ಯೋಜಿಸಲಾಗಿದೆ.
ಈಗಾಗಲೇ ಸುಮಾರು ₹3 ಲಕ್ಷ ವೆಚ್ಚದಲ್ಲಿ ಹೀರಾಬೆನ್ ಅವರ ಮಾರ್ಬಲ್ ವಿಗ್ರಹವನ್ನು ಸಿದ್ಧಪಡಿಸಲಾಗಿದೆ. ದೇವಾಲಯದ ನಿರ್ಮಾಣ ಪೂರ್ಣಗೊಂಡ ಬಳಿಕ ವಿಗ್ರಹವನ್ನು ಪ್ರತಿಷ್ಠಾಪಿಸುವ ಯೋಜನೆ ಇದೆ.
Heeraben Modi Temple ಮೊದಲು ಗೋಶಾಲೆ ನಿರ್ಮಾಣ
ದೇವಾಲಯ ಟ್ರಸ್ಟ್ ಮೊದಲು ದೇವಾಲಯದ ಆವರಣದಲ್ಲಿ ಗೋಶಾಲೆ ನಿರ್ಮಿಸಲು ಮುಂದಾಗಿದೆ. ಗೋಶಾಲೆಯ ಕಾಮಗಾರಿ ಪೂರ್ಣಗೊಂಡ ನಂತರ ಹೀರಾಬೆನ್ ಅವರ ದೇವಾಲಯದ ನಿರ್ಮಾಣ ಕಾರ್ಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ಮುಂದಿನ ಹಂತದಲ್ಲಿ ದಾನಿಗಳ ಸಹಕಾರದೊಂದಿಗೆ ದೇವಾಲಯ ಸಂಕೀರ್ಣದಲ್ಲೇ ಅನಾಥಾಶ್ರಮ ನಿರ್ಮಿಸುವ ಉದ್ದೇಶವನ್ನೂ ಮಾತಾ ಶ್ರೀ ಮಂದಿರಂ ಚಾರಿಟೇಬಲ್ ಸೊಸೈಟಿ ಹೊಂದಿದೆ. ಆದರೆ ಇಡೀ ದೇವಾಲಯ ಸಂಕೀರ್ಣ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದ ವಿವರಗಳನ್ನು ಟ್ರಸ್ಟ್ ಇನ್ನೂ ಬಹಿರಂಗಪಡಿಸಿಲ್ಲ.
2022ರಲ್ಲಿ ನಿಧನರಾಗಿದ್ದ ಹೀರಾಬೆನ್
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು 1923ರಲ್ಲಿ ಜನಿಸಿದ್ದರು. ಅವರು 99ನೇ ವಯಸ್ಸಿನಲ್ಲಿ, 2022ರ ಡಿಸೆಂಬರ್ 30ರಂದು ನಿಧನರಾಗಿದ್ದರು.
ತಾಯಿಯ ಮೇಲಿನ ಗೌರವ ಮತ್ತು ಸ್ಮರಣಾರ್ಥವಾಗಿ ದಕ್ಷಿಣ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಾಲಯ ಇದೀಗ ಗಮನ ಸೆಳೆಯುತ್ತಿದೆ. ದೇವಾಲಯದ ನಿರ್ಮಾಣ ಪೂರ್ಣಗೊಂಡ ಬಳಿಕ ಇದು ಹೀರಾಬೆನ್ ಅವರ ಸ್ಮರಣೆಯೊಂದಿಗೆ ಗುರುತಿಸಿಕೊಳ್ಳುವ ಪ್ರಮುಖ ಸ್ಥಳವಾಗುವ ನಿರೀಕ್ಷೆಯಿದೆ.