ಕ್ರೀಡೆ

Asian Games ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಇರಾನ್ ವಿರುದ್ಧ 37-34ರ ರೋಚಕ ಗೆಲುವು ಸಾಧಿಸಿದ ಮಹಿಳಾ ಕಬಡ್ಡಿ ತಂಡ

Published

on

ಚಿ-ನಗೋಯಾ (ಜಪಾನ್): 2026ರ Asian Games ನಲ್ಲಿ (Asian Games 2026) ಭಾರತದ ಮಹಿಳಾ ಕಬಡ್ಡಿ ತಂಡ (India Women’s Kabaddi Team) ಚಿನ್ನದ ಪದಕ ಗೆದ್ದಿದೆ. ಫೈನಲ್‌ನಲ್ಲಿ ಇರಾನ್ ತಂಡವನ್ನು 37-34 ಅಂಕಗಳಿಂದ ಮಣಿಸಿದ ಭಾರತ, ತನ್ನ ಏಷ್ಯನ್ ಗೇಮ್ಸ್ ಕಬಡ್ಡಿ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.

ಐಚಿ-ನಗೋಯಾದ ಟೋಕೈ ಸಿಟಿಜನ್ಸ್ ಜಿಮ್ನಾಷಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯ ಆರಂಭದಿಂದಲೂ ರೋಚಕವಾಗಿತ್ತು. ಮೊದಲಾರ್ಧದಲ್ಲಿ ಭಾರತ 22-16 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್ ಭರ್ಜರಿ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ಪಂದ್ಯ ಕೊನೆಯವರೆಗೂ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಂತಿಮವಾಗಿ ಭಾರತ 37-34 ಅಂತರದಿಂದ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಭಾರತ ಮಹಿಳಾ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. 2010ರಲ್ಲಿ ಮಹಿಳಾ ಕಬಡ್ಡಿ ಏಷ್ಯನ್ ಗೇಮ್ಸ್‌ಗೆ ಸೇರ್ಪಡೆಯಾದ ಬಳಿಕ, 2018ರ ಜಕಾರ್ತಾ ಆವೃತ್ತಿಯನ್ನು ಹೊರತುಪಡಿಸಿ ಉಳಿದ ಆವೃತ್ತಿಗಳಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. 2018ರಲ್ಲಿ ಇರಾನ್ ಭಾರತವನ್ನು ಸೋಲಿಸಿ ಚಿನ್ನ ಗೆದ್ದಿತ್ತು.

2026ರ ಟೂರ್ನಿಯಲ್ಲೂ ಭಾರತ ಅಜೇಯವಾಗಿ ಫೈನಲ್ ತಲುಪಿತ್ತು. ಗುಂಪು ಹಂತದಲ್ಲಿ ಬಾಂಗ್ಲಾದೇಶವನ್ನು 42-21, ಇರಾನ್‌ನ್ನು 37-23 ಮತ್ತು ಜಪಾನ್‌ನ್ನು 50-25 ಅಂಕಗಳಿಂದ ಮಣಿಸಿತ್ತು. ಸೆಮಿಫೈನಲ್‌ನಲ್ಲಿ ನೇಪಾಳವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಈ ಚಿನ್ನದ ಪದಕವು 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮೂರನೇ ಚಿನ್ನವಾಗಿದೆ. ಮಹಿಳಾ ಕಬಡ್ಡಿ ತಂಡದ ಈ ಗೆಲುವಿನಿಂದ ಭಾರತದ ಪದಕ ಬೇಟೆ ಮತ್ತಷ್ಟು ಬಲಗೊಂಡಿದೆ.

Trending

Exit mobile version