Connect with us

ದೇಶ

ಸಭೆಯಲ್ಲಿ ಜಾರಿ ಬಿದ್ದ ಪಾಕಿಸ್ತಾನ ಉಪಪ್ರಧಾನಿ: ವಿಡಿಯೋ ವೈರಲ್

Published

on

ಇಸ್ಲಾಮಾಬಾದ್: ಸಾರ್ವಜನಿಕ ಕಾರ್ಯಕ್ರಮದ ವೇಳೆ Ishaq Dar ಅವರು ರೆಡ್ ಕಾರ್ಪೆಟ್ ಮೇಲೆ ಕಾಲು ಜಾರಿ ಬಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಣ್ಯರನ್ನು ಸ್ವಾಗತಿಸಲು ಧಾವಿಸುತ್ತಿದ್ದಾಗ ಈ ಅನಾಹುತ ಸಂಭವಿಸಿದ್ದು, ಕೆಲ ಕ್ಷಣಗಳ ಕಾಲ ಅಲ್ಲಿ ಮುಜುಗರದ ವಾತಾವರಣ ನಿರ್ಮಾಣವಾಯಿತು.

ಮಧ್ಯಪ್ರಾಚ್ಯ ಸಂಘರ್ಷ ತಗ್ಗಿಸುವ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಲು ಈಜಿಪ್ಟ್ ವಿದೇಶಾಂಗ ಸಚಿವ Badr Abdelatty ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ತೆರಳುತ್ತಿದ್ದ ವೇಳೆ ಇಶಾಕ್ ದಾರ್ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ.

ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದೆ. ಕೆಲವರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಘಟನೆಯ ನಂತರ ತಕ್ಷಣವೇ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಧಾವಿಸಿ, ಇಶಾಕ್ ದಾರ್ ಅವರನ್ನು ಎಬ್ಬಿಸಿದರು. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಬಳಿಕ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕರ್ತವ್ಯ ಮುಂದುವರಿಸಿದರು.

ಈ ಸಭೆಯಲ್ಲಿ ಅಮೆರಿಕಾ-ಇರಾನ್ ನಡುವಿನ ಸಂಘರ್ಷ ತಗ್ಗಿಸುವ ಕುರಿತು ಚರ್ಚೆ ನಡೆಯಿತು. ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು. ಯುದ್ಧವು ಯಾರಿಗೂ ಲಾಭಕರವಲ್ಲ, ಶಾಂತಿ ಮತ್ತು ಏಕತೆ ಅಗತ್ಯ ಎಂದು ಇಶಾಕ್ ದಾರ್ ಅಭಿಪ್ರಾಯಪಟ್ಟಿದ್ದಾರೆ.

Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕ್ರೀಡೆ

ವಿಶ್ವ ಚೆಸ್‌ನಲ್ಲಿ Praggnanandhaa ಹೊಸ ಇತಿಹಾಸ; ಕರುವಾನಾಗೆ ಶಾಕ್ ನೀಡಿ ಐತಿಹಾಸಿಕ ಪ್ರಶಸ್ತಿ ಗೆಲುವು

Published

on

By

ಸೆಂಟ್ ಲೂಯಿಸ್: ಭಾರತದ ಯುವ ಗ್ರಾಂಡ್‌ಮಾಸ್ಟರ್ ಆರ್. Praggnanandhaa ಅವರು ವಿಶ್ವ ಚೆಸ್‌ ರಂಗದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೆಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರಾಂಡ್ ಚೆಸ್ ಟೂರ್ 2026 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಭರ್ಜರಿ ಪುನರಾಗಮನ ಸಾಧಿಸಿದ ಪ್ರಜ್ಞಾನಂದ, ತಮ್ಮ 2026ರ ಅದ್ಭುತ ಪ್ರದರ್ಶನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರಿಸಿದ್ದಾರೆ.

6 ಅಂಕಗಳ ಹಿನ್ನಡೆಯಿಂದ ರೋಚಕ ಕಮ್‌ಬ್ಯಾಕ್

ಕ್ಲಾಸಿಕಲ್ ಪಂದ್ಯಗಳ ಅಂತ್ಯದಲ್ಲಿ ಪ್ರಜ್ಞಾನಂದ ಅವರು ಕರುವಾನಾ ವಿರುದ್ಧ 3-9 ಅಂಕಗಳಿಂದ ಆರು ಅಂಕಗಳ ಹಿನ್ನಡೆಯಲ್ಲಿದ್ದರು. ಹೀಗಾಗಿ ಪ್ರಶಸ್ತಿ ಗೆಲ್ಲುವ ಅವಕಾಶ ಕ್ಷೀಣಿಸಿತ್ತು. ಆದರೆ ಅಂತಿಮ ದಿನ ರ್ಯಾಪಿಡ್ ಪಂದ್ಯಗಳಲ್ಲಿ ಅದ್ಭುತ ಆಟವಾಡಿದ ಪ್ರಜ್ಞಾನಂದ ಸತತ ಎರಡು ಗೆಲುವು ದಾಖಲಿಸಿ 11-9 ಅಂಕಗಳ ಮುನ್ನಡೆ ಪಡೆದರು.

ಬಳಿಕ ನಡೆದ ಬ್ಲಿಟ್ಸ್ ಪಂದ್ಯದಲ್ಲಿ ಮೊದಲ ಪಂದ್ಯ ಡ್ರಾಗೊಂಡರೆ, ಎರಡನೇ ಪಂದ್ಯವನ್ನು ಕರುವಾನಾ ಗೆದ್ದು 12-12ರಲ್ಲಿ ಸಮಬಲ ಸಾಧಿಸಿದರು. ಆದರೆ ಮೂರನೇ ಬ್ಲಿಟ್ಸ್ ಪಂದ್ಯದಲ್ಲಿ ಪ್ರಜ್ಞಾನಂದ ಮತ್ತೆ ಗೆದ್ದು ನಿರ್ಣಾಯಕ ಮುನ್ನಡೆ ಪಡೆದುಕೊಂಡರು.

‘ತ್ರೀಫೋಲ್ಡ್ ರಿಪಿಟಿಷನ್’ ಮೂಲಕ ಪ್ರಶಸ್ತಿ ಖಚಿತ

ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಪ್ರಶಸ್ತಿ ತನ್ನದಾಗುವ ಪರಿಸ್ಥಿತಿಯಲ್ಲಿದ್ದ ಪ್ರಜ್ಞಾನಂದ, ಯಾವುದೇ ಅನಗತ್ಯ ಅಪಾಯ ತೆಗೆದುಕೊಳ್ಳಲಿಲ್ಲ. ಮೂರು ಬಾರಿ ಒಂದೇ ಸ್ಥಾನ ಪುನರಾವರ್ತನೆಯಾಗುವ ‘ತ್ರೀಫೋಲ್ಡ್ ರಿಪಿಟಿಷನ್’ ನಿಯಮವನ್ನು ಚಾಣಾಕ್ಷವಾಗಿ ಬಳಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡರು. ಇದರೊಂದಿಗೆ ಪ್ರಶಸ್ತಿ ಅವರ ಪಾಲಾಯಿತು.

ಫೈನಲ್‌ನ ಒಟ್ಟು ಆರು ಪಂದ್ಯಗಳಲ್ಲಿ ಪ್ರಜ್ಞಾನಂದ ಮೂರು ಗೆಲುವು ದಾಖಲಿಸಿದರೆ, ಎರಡು ಪಂದ್ಯಗಳು ಡ್ರಾಗೊಂಡವು. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದರು.

2026ರಲ್ಲಿ ಮುಂದುವರಿದ ಪ್ರಜ್ಞಾನಂದ ಗೆಲುವಿನ ಓಟ

ಈ ಗೆಲುವಿನೊಂದಿಗೆ 2026ರಲ್ಲಿ ಪ್ರಜ್ಞಾನಂದ ಅವರ ಯಶಸ್ಸಿನ ಪಯಣ ಮತ್ತಷ್ಟು ಗಟ್ಟಿಯಾಗಿದೆ. ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಹಿನ್ನಡೆ ಕಂಡಿದ್ದರೂ, ನಂತರ ಅದ್ಭುತವಾಗಿ ಚೇತರಿಸಿಕೊಂಡ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಎರಡು ಬಾರಿ ಮಣಿಸಿ ಪ್ರಶಸ್ತಿ ಗೆದ್ದಿದ್ದರು.

ಇದೀಗ ಗ್ರಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನೂ ಗೆಲ್ಲುವ ಮೂಲಕ ವಿಶ್ವದ ಅಗ್ರ ಚೆಸ್ ಆಟಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಕೇವಲ 21ನೇ ವಯಸ್ಸಿನಲ್ಲೇ ಪ್ರಜ್ಞಾನಂದ ಸಾಧಿಸುತ್ತಿರುವ ಈ ಸರಣಿ ಗೆಲುವುಗಳು ಭಾರತೀಯ ಚೆಸ್‌ನ ಭವಿಷ್ಯದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿವೆ.

Continue Reading

ಬೆಂಗಳೂರು

Badminton ಕೋರ್ಟ್‌ನಲ್ಲಿ ಮಹಾ ಕದನ; Make My Propertyz, MRCL, Hosa Suddi, ಗೌರೀಶ್, ಆಂಜನಪ್ಪ, ಹರೀಶ್, ಶಿವಕುಮಾರ್ ಕೈಜೋಡಿಕೆ!

Published

on

By

ಬೆಂಗಳೂರು: ಕ್ರೀಡಾಭಿಮಾನಿಗಳು ಹಾಗೂ ಬ್ಯಾಡ್ಮಿಂಟನ್ ಪ್ರೇಮಿಗಳಿಗಾಗಿ ಬೆಂಗಳೂರಿನಲ್ಲಿ ಆಗಸ್ಟ್ 29ರಂದು ‘MMP ಶಟಲ್ ಟೂರ್ನಮೆಂಟ್ 2026’ ನಡೆಯಲಿದೆ. ಕ್ರೀಡೆಯನ್ನು ಉತ್ತೇಜಿಸುವುದರ ಜೊತೆಗೆ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ.

ಮೇಕ್ ಮೈ ಪ್ರಾಪರ್ಟೀಸ್ (Make My Propertyz) ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ 16 ತಂಡಗಳ ಒಟ್ಟು 32 ಆಟಗಾರರು ಭಾಗವಹಿಸಲಿದ್ದಾರೆ. ಗೋಲ್ಡನ್ ಫೆದರ್ಸ್‌ನಲ್ಲಿ ನಾಲ್ಕು ಅಂಕಣಗಳಲ್ಲಿ 21 ಅಂಕಗಳ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ Make My Propertyz, ಕ್ರೀಡೆ ಮತ್ತು ಯುವಜನರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಟೂರ್ನಮೆಂಟ್‌ಗೆ ಬೆಂಬಲ ನೀಡಿದೆ. ಪ್ಲಾಟಿನಂ ಪ್ರಾಯೋಜಕರಾಗಿ MRCL Infrastructure Pvt Ltd ಕೈಜೋಡಿಸಿದೆ. ಮೋಹನ್ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಮಾಜಿ ಕಾರ್ಪೊರೇಟರ್ ಆರ್. ಆಂಜನಪ್ಪ ಅವರು ಗೋಲ್ಡ್ ಸ್ಪಾನ್ಸರ್ ಆಗಿ ಪಂದ್ಯಾವಳಿಗೆ ಬೆಂಬಲ ನೀಡಿದ್ದಾರೆ. ಸ್ಥಳೀಯವಾಗಿ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅವರು ಸಾರ್ವಜನಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಎಂ. ಹರೀಶ್ ಕುಮಾರ್ ಅವರು ಕೂಡ ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಮುಂಬರುವ GBA ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿರುವ ಹರೀಶ್, ಬಡವರು ಹಾಗೂ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದೊಂದಿಗೆ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗುವ ಆಶಯ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಗೋಲ್ಡನ್ ಫೆದರ್ಸ್ ಮೂಲಕ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಪ್ರೋತ್ಸಾಹ

ಪಂದ್ಯಾವಳಿ ನಡೆಯಲಿರುವ ಗೋಲ್ಡನ್ ಫೆದರ್ಸ್ ಸಂಸ್ಥೆಯ ಸಂಸ್ಥಾಪಕ ಗೌರೀಶ್ ಮತ್ತು ಲೋಕೇಶ್ ಅವರು ತಮ್ಮ ಕ್ಲಬ್ ಮೂಲಕ ಬ್ಯಾಡ್ಮಿಂಟನ್ ಆಟಗಾರರನ್ನು ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಯುವ ಆಟಗಾರರಿಗೆ ತರಬೇತಿ, ಅಭ್ಯಾಸ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ವಿಶೇಷವಾಗಿ ನಾಗದೇವನಹಳ್ಳಿಯಲ್ಲಿ ಗೌರೀಶ್ ಅವರು ಸಮಾಜ ಸೇವಾ ಕಾರ್ಯಗಳಲ್ಲೂ ಸಕ್ರಿಯರಾಗಿದ್ದು, ಸ್ಥಳೀಯವಾಗಿ ವಿವಿಧ ಸಮಾಜಮುಖಿ ಚಟುವಟಿಕೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.

Hosa Suddi ಮತ್ತು ಶಿವಕುಮಾರ್‌ರಿಂದ ಬೆಂಬಲ

ಕನ್ನಡ ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿರುವ Hosasuddi.in (Hosa Suddi) ಕೂಡ ಈ ಪಂದ್ಯಾವಳಿಗೆ ಸಿಲ್ವರ್ ಪ್ರಾಯೋಜಕರಾಗಿ ಬೆಂಬಲ ನೀಡುತ್ತಿದೆ. ಸ್ಥಳೀಯ ಕ್ರೀಡಾ ಪ್ರತಿಭೆಗಳು, ಯುವಜನರ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ Hosasuddi.in ನಿರಂತರವಾಗಿ ಬೆಂಬಲ ನೀಡುತ್ತಿದೆ.

ಇದೇ ವೇಳೆ ಶಿವಕುಮಾರ್ ಅವರು ಕೂಡ ಸಿಲ್ವರ್ ಸ್ಪಾನ್ಸರ್ ಆಗಿ ಪಂದ್ಯಾವಳಿಗೆ ಕೈಜೋಡಿಸಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿವಕುಮಾರ್ ಅವರು ಕ್ರೀಡೆ ಹಾಗೂ ಯುವಜನರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ.

ಒಟ್ಟಿನಲ್ಲಿ, ‘One Team, One Dream, One Champion’ ಹಾಗೂ ‘Smash Limits, Create Legends’ ಎಂಬ ಘೋಷವಾಕ್ಯಗಳೊಂದಿಗೆ ನಡೆಯಲಿರುವ MMP ಶಟಲ್ ಟೂರ್ನಮೆಂಟ್ 2026 ಕೇವಲ ಬ್ಯಾಡ್ಮಿಂಟನ್ ಪಂದ್ಯಾವಳಿಯಾಗಿರದೆ, ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಬೆಳೆಸುವುದು, ಯುವಕರನ್ನು ಉತ್ತೇಜಿಸುವುದು ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಬೆಂಬಲ ನೀಡುವ ವೇದಿಕೆಯಾಗಲಿದೆ.

Continue Reading

ಸಿನಿಮಾ

‘Toxic’ ವಿರುದ್ಧ ಮಾತನಾಡಿದವರಿಗೆ ಕಾನೂನು ನೋಟಿಸ್? ಚಿತ್ರತಂಡದ ನಡೆಗೆ ಕಾರಣವೇನು?

Published

on

By

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಕಿಯಾರಾ ಅಡ್ವಾಣಿ ಹಾಗೂ ರುಕ್ಮಿಣಿ ವಸಂತ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್ ಮಾತ್ರವಲ್ಲದೆ ಕಾನೂನು ವಿಚಾರದಿಂದಲೂ ಸುದ್ದಿಯಾಗಿದೆ. ಚಿತ್ರದ ಕುರಿತು ಸುಳ್ಳು, ಮಾನಹಾನಿಕರ ಅಥವಾ ನಿಂದನಾತ್ಮಕ ವಿಷಯಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳದಂತೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.

ಯೂಟ್ಯೂಬರ್ ಸೂರಜ್ ಕುಮಾರ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ತಮಗೆ ಬಂದಿರುವ ಕಾನೂನು ನೋಟಿಸ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಐಪ್ಲೆಕ್ಸ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ ಈ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಪರವಾಗಿ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.

ನೋಟಿಸ್‌ನಲ್ಲಿ, ‘ಟಾಕ್ಸಿಕ್’ ಸಿನಿಮಾಗೆ ಸಂಬಂಧಿಸಿದಂತೆ ಡಿಜಿಟಲ್ ಮತ್ತು ಆನ್‌ಲೈನ್ ಮಾಧ್ಯಮಗಳಲ್ಲಿ ಕಂಟೆಂಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪಿಟಿಐ ವರದಿ ಪ್ರಕಾರ, ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಆಗಸ್ಟ್ 22ರಂದು ವಿವಿಧ ಪ್ರತಿವಾದಿಗಳ ವಿರುದ್ಧ ಎಕ್ಸ್-ಪಾರ್ಟಿ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚಿತ್ರದ ಕುರಿತು ಸುಳ್ಳು ಅಥವಾ ಮಾನಹಾನಿಕರ ವಿಷಯಗಳ ಪ್ರಕಟಣೆ ಮತ್ತು ಪ್ರಸಾರವನ್ನು ತಡೆಯುವಂತೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದು ವರದಿಯಾಗಿದೆ. ಚಿತ್ರದ ಕುರಿತು ವಿಮರ್ಶೆಗಳು ಮತ್ತು ಸಾಮಾಜಿಕ ಮಾಧ್ಯಮ ಚರ್ಚೆಗಳು ಮುಂದುವರಿದಿರುವ ಬೆನ್ನಲ್ಲೇ ಈ ಕಾನೂನು ಬೆಳವಣಿಗೆ ಗಮನ ಸೆಳೆದಿದೆ.

Continue Reading

Trending