ಬೆಂಗಳೂರು
ಕರ್ನಾಟಕ ವಿಧಾನಸಭೆ: ಬಿಜೆಪಿಯ 18 ಶಾಸಕರ ಅಮಾನತು ವಾಪಸ್ – ಸದನದಲ್ಲಿ ಕಾನೂನು ಸಚಿವರ ಘೋಷಣೆ
ಬೆಂಗಳೂರು: ವಿಧಾನಸಭೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಕ್ಕಾಗಿ ಅಮಾನತ್ತುಗೊಳಿಸಲಾದ ಬಿಜೆಪಿಯ 18 ಶಾಸಕರ ಅಮಾನತು ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದಿದೆ. ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಸೋಮವಾರ ಸದನದಲ್ಲಿ ಈ ಕುರಿತು ಮಾಹಿತಿ ನೀಡಿದರು.
ಕೆಲ ತಿಂಗಳ ಹಿಂದೆ ಸ್ಪೀಕರ್ ಯು.ಟಿ. ಖದರ್ ಅವರ ಜೊತೆ ನಡೆದ ಮಾತುಕತೆಯಲ್ಲಿ ಅಮಾನತನ್ನು ಹಿಂಪಡೆಯುವ ಸಾಧ್ಯತೆ ವ್ಯಕ್ತವಾಗಿತ್ತು. ಇದೀಗ ಸಂತಾಪ ಸೂಚನಾ ನಿರ್ಣಯದ ನಂತರ ಕಾನೂನು ಸಚಿವರು ಸ್ಥಿರೀಕರಣ ಪ್ರಸ್ತಾವವನ್ನು ಮಂಡಿಸಿ, ಡೊಡ್ಡನಗೌಡ ಪಾಟೀಲ್, ಡಾ.ಸಿ.ಎನ್. ಆಶ್ವತ್ಥನಾರಾಯಣ, ಮುನಿರತ್ನ, ಬೈರತಿ ಬಸವರಾಜ್, ಎಸ್.ಆರ್. ವಿಶ್ವನಾಥ್, ಜನನ ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಎಂ.ಆರ್. ಪಾಟೀಲ್, ಡಾ.ಭರತ್ ಶೆಟ್ಟಿ, ಬಿ.ಪಿ. ಹರೀಶ್, ದೀರಜ್ ಮುನಿರಾಜು, ಡಾ.ಚಂದ್ರುಲಮಾಣಿ, ಶರಣು ಸಲಗಾರ್, ಬಸವರಾಜ್ ಮತ್ತಿಮೋಡ್ ಸೇರಿದಂತೆ 18 ಶಾಸಕರ ಅಮಾನತು ವಾಪಸ್ ಮಾಡುವ ಪ್ರಸ್ತಾವ ಮಂಡಿಸಿದರು.
ಮೇ 25 ರಂದು ಜಾರಿಯಾಗಿದ್ದ ಅಮಾನತು ನಿರ್ಣಯವನ್ನು ಹಿಂತೆಗೆದು, 18 ಮಂದಿ ಶಾಸಕರು ಕಲಾಪದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಸಭಾಧ್ಯಕ್ಷ ಯು.ಟಿ. ಖದರ್ ಧ್ವನಿಮತದ ಮೂಲಕ ಪ್ರಸ್ತಾವನೆಗೆ ಅನುಮೋದನೆ ನೀಡಿದರು.