“ಗೋಕಳ್ಳರಿಗೆ ಬೆಂಬಲವೇ?” – ಕಾಮತ್ ಆಕ್ರೋಶ | Hosa Suddi

ದೇಶ

“ಗೋಕಳ್ಳರಿಗೆ ಬೆಂಬಲವೇ?” – ಕಾಮತ್ ಆಕ್ರೋಶ

Published

on

ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ತಿದ್ದುಪಡಿ ಯತ್ನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ, ಶಾಸಕ ವೇದವ್ಯಾಸ ಕಾಮತ್ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮತ್ ಅವರು, ಹಿಂದಿನ ಬಿಜೆಪಿ ಸರ್ಕಾರ ತರಿಸಿದ ಗೋಹತ್ಯೆ ನಿಷೇಧ ಕಾಯ್ದೆ ಅಕ್ರಮ ಗೋ ಸಾಗಾಟಕ್ಕೆ ದೊಡ್ಡ ಮಟ್ಟದಲ್ಲಿ ತಡೆ ನೀಡಿತ್ತು ಎಂದು ನೆನಪಿಸಿದರು. ವಾಹನ ಮುಟ್ಟುಗೋಲು ಹಾಗೂ ಬ್ಯಾಂಕ್ ಗ್ಯಾರಂಟಿ ನಿಯಮದಿಂದ ಗೋ ಸಾಗಾಟ ಜಾಲಗಳಿಗೆ ಬ್ರೇಕ್ ಬಿದ್ದಿತ್ತು ಎಂದು ಹೇಳಿದರು.

“ಗೋಕಳ್ಳರ ಪರ ನಿಲುವೇ?” ಎಂದು ಪ್ರಶ್ನಿಸಿದ ಕಾಮತ್, ತಿದ್ದುಪಡಿ ಯತ್ನವು ಗೋಕಳ್ಳರು ಮತ್ತು ಅಕ್ರಮ ಸಾಗಾಟಗಾರರಿಗೆ ಪರೋಕ್ಷ ಬೆಂಬಲ ನೀಡುವಂತಾಗಿದೆ ಎಂದು ಆರೋಪಿಸಿದರು. “ಈ ಸರ್ಕಾರಕ್ಕೆ ಗೋಕಳ್ಳರ ಮೇಲೆ ಇಷ್ಟೊಂದು ಪ್ರೀತಿ ಯಾಕೆ?” ಎಂದು ಪ್ರಶ್ನಿಸಿ ತಿದ್ದುಪಡಿ ಯತ್ನ ಸಂಶಯಾಸ್ಪದವಾಗಿದೆ ಎಂದರು.

ಕರಾವಳಿಯಲ್ಲಿ ರಾತ್ರಿ ವೇಳೆಯ ದಾಳಿ, ತಲವಾರು ಹಿಡಿದು ಮನೆ ಬಾಗಿಲು ಒಡೆದು ಗೋ ಕಳ್ಳತನ ಮಾಡುವ ತಂಡಗಳು ಸಕ್ರಿಯವಾಗಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಈ ದಾಳಿ ಹೆಚ್ಚಾದರೆ, ಶಾಂತಿ ಕದಡಿದರೆ, ಗೋ ಸಾಕಾಣಿಕಾರರಿಗೆ ತೊಂದರೆ ಉಂಟಾದರೆ ಅದರ ಜವಾಬ್ದಾರಿ ಸರ್ಕಾರದ್ದೇ ಎಂದು ಎಚ್ಚರಿಸಿದರು.

ತಿದ್ದುಪಡಿ ಯತ್ನವನ್ನು ಓಲೈಕೆ ರಾಜಕೀಯದ ಭಾಗವೆಂದು ಕಾಮತ್ ಖಂಡಿಸಿದರು. “ಗೋಸಂಗೋಪನಾ ಸಂಸ್ಕೃತಿಗೆ ಇದು ದೊಡ್ಡ ಹೊಡೆತ,” ಎಂದು ಕಳವಳ ವ್ಯಕ್ತಪಡಿಸಿದರು.

Trending

Exit mobile version