ಹೇಗಿತ್ತು US–Israel ರಣತಂತ್ರ? ಮಿಸೈಲ್–ಬಾಂಬ್ ದಾಳಿಯ ವಿವರ | Hosa Suddi

ದೇಶ

ಹೇಗಿತ್ತು US–Israel ರಣತಂತ್ರ? ಮಿಸೈಲ್–ಬಾಂಬ್ ದಾಳಿಯ ವಿವರ

Published

on

ಟೆಹ್ರಾನ್:
ಇಸ್ರೇಲ್–ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ, ಇರಾನ್ ಸರ್ಕಾರ ಹಾಗೂ ಮಾಧ್ಯಮಗಳು ಸಾವನ್ನು ಅಧಿಕೃತವಾಗಿ ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಜಂಟಿ **Missile Strike**ನಲ್ಲಿ ಖಮೇನಿ ಮಾತ್ರವಲ್ಲದೆ ಅವರ ಮಗಳು ಮತ್ತು ಮೊಮ್ಮಕ್ಕಳೂ ಸಾವನ್ನಪ್ಪಿರುವುದು ದೃಢವಾಗಿದೆ. ಈ ಘಟನೆ ನಂತರ, ಖಮೇನಿ ಹತ್ಯೆಗೆ ಇಸ್ರೇಲ್–ಅಮೆರಿಕ ರೂಪಿಸಿದ್ದ ರಣತಂತ್ರದ ವಿವರಗಳು ಬೆಳಕಿಗೆ ಬಂದಿವೆ.

ಹೇಗಿತ್ತು ರಣತಂತ್ರ?

ಖಮೇನಿಯನ್ನು ಗುರಿಯಾಗಿಸಿಕೊಂಡು US Israel Strike ಮೊದಲ ಹಂತದಲ್ಲಿ 7 ಮಿಸೈಲ್‌ಗಳನ್ನು ಉಡಾಯಿಸಿತು. ಆ ವೇಳೆ ಟೆಹ್ರಾನ್ ಕಚೇರಿಯಿಂದ ಖಮೇನಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ. ನಂತರ, ಇಸ್ರೇಲ್ ಯುದ್ಧ ವಿಮಾನಗಳು ಇರಾನ್‌ಗೆ ನುಗ್ಗಿ ಖಮೇನಿ ಇರುವ ಸ್ಥಳದ ಮೇಲೆ 30 ಬಾಂಬ್‌ಗಳಿಂದ ದಾಳಿ ನಡೆಸಿವೆ. ದಾಳಿ ನಡೆದ ಕ್ಷಣದಲ್ಲಿ ಖಮೇನಿ, ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಕಾರ್ಯದರ್ಶಿ ಅಲಿ ಶಮ್ಖಾನಿ ಹಾಗೂ ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಜೊತೆ ಸಭೆಯಲ್ಲಿ ಭಾಗವಹಿಸುತ್ತಿದ್ದರು ಎನ್ನಲಾಗಿದೆ. ಅನಿರೀಕ್ಷಿತ ದಾಳಿಯಿಂದ ಖಮೇನಿ ಸ್ಥಳದಲ್ಲೇ ಹತ್ಯೆಗೀಡಾದರು ಎಂದು ವರದಿಗಳು ತಿಳಿಸುತ್ತವೆ.

ಇಸ್ರೇಲ್‌ನ ಮುಂದಿನ ಗುರಿ?

ಇಸ್ಲಾಮಿಕ್ ಮೂಲಭೂತವಾದದ ಕಟ್ಟಾ ಪ್ರತಿಪಾದಕರಾಗಿದ್ದ ಖಮೇನಿ ವರ್ಷಗಳಿಂದ ಅಧಿಕಾರದಲ್ಲಿದ್ದರು. ಅವರನ್ನು ಪದಚ್ಯುತಿಗೊಳಿಸಿ ಸರ್ವಾಧಿಕಾರ ಅಂತ್ಯಗೊಳಿಸಿ, ಇರಾನ್‌ನಲ್ಲಿ ಹೊಸ ಸರ್ಕಾರ ರಚಿಸುವುದು ಇಸ್ರೇಲ್ ಪ್ರಧಾನಿಯ ಉದ್ದೇಶವಾಗಿತ್ತು ಎನ್ನಲಾಗಿದೆ. 1979ರ ಆಡಳಿತ ಕ್ರಾಂತಿಯಲ್ಲಿ ಅಧಿಕಾರ ಕಳೆದುಕೊಂಡ ರಾಜಮನೆತನವನ್ನು ಪುನರ್ ಸ್ಥಾಪಿಸುವ ಭಾಗವಾಗಿ, ಆಯಾತೊಲ್ಲ ಸ್ಥಾನಕ್ಕೆ ರೇಜಾ ಪೆಹಲ್ವಿ ಅವರನ್ನು ಮುಂದಿಟ್ಟು ಹೊಸ ವ್ಯವಸ್ಥೆ ತರಲು ಇಸ್ರೇಲ್–ಅಮೆರಿಕ ಕೈಜೋಡಿಸಿದ್ದವು ಎಂಬ ಆರೋಪಗಳು ಕೇಳಿಬರುತ್ತಿವೆ.

Trending

Exit mobile version