Karnataka Working Journalists Association ಬೆಂಗಳೂರು ನಗರ ಘಟಕಕ್ಕೆ 20 ವರ್ಷಗಳ ಬಳಿಕ ಚುನಾವಣೆ | Hosa Suddi

ಚುನಾವಣೆ

Karnataka Working Journalists Association ಬೆಂಗಳೂರು ನಗರ ಘಟಕಕ್ಕೆ 20 ವರ್ಷಗಳ ಬಳಿಕ ಚುನಾವಣೆ

Published

on

ಬೆಂಗಳೂರು: Karnataka Working Journalists Association (ಕೆಯುಡಬ್ಲ್ಯುಜೆ) ಬೆಂಗಳೂರು ನಗರ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದೆ. ಬರುವ ಫೆಬ್ರವರಿ 22, 2026 ರಂದು ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಸಂಘದ ಕಚೇರಿಯಲ್ಲಿ ಮತದಾನ ನಡೆಯಲಿದೆ.

ಕಳೆದ 20 ವರ್ಷಗಳಿಂದ ಬೆಂಗಳೂರು ನಗರ ಜಿಲ್ಲಾ ಘಟಕದ 15 ಸದಸ್ಯರ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆದಿರಲಿಲ್ಲ. ಸಾಮಾನ್ಯವಾಗಿ ಅಷ್ಟೇ ಸಂಖ್ಯೆಯಲ್ಲಿ ನಾಮಪತ್ರಗಳು ಬಂದ ಕಾರಣ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ ಈ ಬಾರಿ 15 ಸ್ಥಾನಗಳಿಗೆ 22 ಮಂದಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿರುವುದರಿಂದ ಭಾರಿ ಪೈಪೋಟಿ ಕಂಡುಬಂದಿದೆ.

ಈ ಮಧ್ಯೆ ಒಬ್ಬ ಅಭ್ಯರ್ಥಿ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ತಡೆಯಾಜ್ಞೆ ಜಾರಿಯಾಗಿದ್ದು, ಚುನಾವಣೆ ಮುಂದೂಡಲ್ಪಟ್ಟಿತ್ತು. ಇದೀಗ ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 22ರಂದು ಮತದಾನ ನಡೆಯಲಿದೆ.

ಚುನಾವಣೆಯ ವಿವರ:

  • ಚುನಾವಣಾ ದಿನಾಂಕ: 22 ಫೆಬ್ರವರಿ 2026
  • ಸಮಯ: ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ
  • ಸ್ಥಳ: ಕೆಯುಡಬ್ಲ್ಯುಜೆ ಕಚೇರಿ, ಕಂದಾಯ ಭವನ, ಮೈಸೂರು ಬ್ಯಾಂಕ್ ವೃತ್ತ ಬಳಿ, Bengaluru

ಮತದಾನಕ್ಕೆ ಅರ್ಹತೆ:

ಇತ್ತೀಚಿನ ಸತತ ಎರಡು ವರ್ಷಗಳಿಂದ ಕೆಯುಡಬ್ಲ್ಯುಜೆ ಸದಸ್ಯತ್ವ ಹೊಂದಿರುವ ಪತ್ರಕರ್ತರು ಮಾತ್ರ ಮತದಾನಕ್ಕೆ ಅರ್ಹರು. ಯಾವುದೇ ಗೊಂದಲ ತಪ್ಪಿಸಲು ಕೆಯುಡಬ್ಲ್ಯುಜೆ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಜೊತೆಗೆ ಆಧಾರ್, ಡಿಎಲ್, ಪ್ಯಾನ್ ಸೇರಿದಂತೆ ಸರ್ಕಾರ ಮಾನ್ಯತೆ ಪಡೆದ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತರುವಂತೆ ಸೂಚಿಸಲಾಗಿದೆ.

ಈ ಬಾರಿ ಎರಡು ದಶಕಗಳ ಬಳಿಕ ನಡೆಯುತ್ತಿರುವ ಈ ಚುನಾವಣೆ ಸಂಘದ ಸದಸ್ಯರಿಗೆ ಅಪರೂಪದ ಅವಕಾಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತಚಲಾಯಿಸುವಂತೆ ಸಂಘ ಮನವಿ ಮಾಡಿದೆ.

Trending

Exit mobile version