ದೇಶ
ಎಲ್.ಕೆ. ಅಡ್ವಾಣಿಗೆ 98ನೇ ಜನ್ಮದಿನ – ಪ್ರಧಾನಿ ಮೋದಿ ವಿಶೇಷ ಸಂದೇಶ
ನವದೆಹಲಿ: ಭಾರತೀಯ ರಾಜಕೀಯದ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ (L.K. Advani) ಅವರು ಇಂದು ತಮ್ಮ 98ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿಯವರಿಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಎಕ್ಸ್ (Twitter) ನಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿಗಳು, “ಅಡ್ವಾಣಿಯವರು ಒಬ್ಬ ಮೇದಾವಿ, ದೃಢ ನಿಷ್ಠೆಯ ರಾಜಕಾರಣಿ. ಅವರ ಜೀವನ ಭಾರತದ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಸಮರ್ಪಿತವಾಗಿದೆ” ಎಂದು ಬರೆದಿದ್ದಾರೆ.
ಮೋದಿಯವರು ಮತ್ತಷ್ಟು ಹೇಳಿ — “ಅಡ್ವಾಣಿಯವರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಗಳು ಭಾರತದ ಪ್ರಜಾಪ್ರಭುತ್ವ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಳಿಸಲಾಗದ ಗುರುತು ಮೂಡಿಸಿವೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಅಡ್ವಾಣಿಯವರು ಭಾರತೀಯ ಜನತಾ ಪಕ್ಷದ (BJP) ಸ್ಥಾಪಕ ನಾಯಕರಲ್ಲಿ ಒಬ್ಬರಾಗಿದ್ದು, ಅವರ ರಾಜಕೀಯ ಪಯಣವು ನಿಷ್ಠೆ, ಶಿಸ್ತು ಮತ್ತು ರಾಷ್ಟ್ರಪ್ರೇಮದ ನಿದರ್ಶನ ಎಂದು ಬಣ್ಣಿಸಲಾಗಿದೆ. ಪ್ರಧಾನಿ ಮೋದಿ ಅವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದ್ದಾರೆ.