ಲೋಕಾಯುಕ್ತ ದೊಡ್ಡ ಕ್ರಮ: 10 ಜಿಲ್ಲೆಗಳಲ್ಲಿ ಭರ್ಜರಿ ಶೋಧ, ದಾಖಲೆ ವಶ | Hosa Suddi

ದೇಶ

ಲೋಕಾಯುಕ್ತ ದೊಡ್ಡ ಕ್ರಮ: 10 ಜಿಲ್ಲೆಗಳಲ್ಲಿ ಭರ್ಜರಿ ಶೋಧ, ದಾಖಲೆ ವಶ

Published

on

ಬೆಂಗಳೂರು: ಇಂದು ಬೆಳ್ಳಂಬೆಳ್ಳಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಲವು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ. ರಾಜ್ಯದ 10 ಜಿಲ್ಲೆಗಳಲ್ಲಿ ಒಟ್ಟು 10 ಅಧಿಕಾರಿಗಳ ವಿರುದ್ಧ ಈ ಶೋಧ ಕಾರ್ಯ ನಡೆದಿದೆ.

ಲೋಕಾಯುಕ್ತ ಪಡೆ ನಡೆಸುತ್ತಿರುವ ದಾಳಿಯಲ್ಲಿ, ದಾಖಲೆಗಳು, ಆಸ್ತಿ ವಿವರಗಳು ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆ ಮುಂದುವರಿದಿದ್ದು, ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಲೋಕಾ ದಾಳಿಗೆ ಒಳಗಾದ ಅಧಿಕಾರಿಗಳ ಪಟ್ಟಿ

  • ಬೆಂಗಳೂರು (ಇಲೆಕ್ಟ್ರಾನಿಕ್ ಸಿಟಿ) – RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ
  • ಮಂಡ್ಯ – ನಗರ ಪಾಲಿಕೆ CAO ಪುಟ್ಟಸ್ವಾಮಿ
  • ಬೀದರ್ – ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್
  • ಮೈಸೂರು – ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಸ್ವಾಮಿ C
  • ಧಾರವಾಡ – ಕರ್ನಾಟಕ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ
  • ಧಾರವಾಡ – ಪ್ರಾ. ಪಶು ಕ್ಲಿನಿಕ್ ಹಿರಿಯ ಪರೀಕ್ಷಕ ಸತೀಶ್
  • ಶಿವಮೊಗ್ಗ – SIMS ಮೆಡಿಕಲ್ ಕಾಲೇಜ್ FDA ಲಕ್ಷ್ಮೀಪತಿ C.N
  • ದಾವಣಗೆರೆ – APMC ಸಹ ನಿರ್ದೇಶಕ ಪ್ರಭು J
  • ಮೈಸೂರು / ಮಡಿಕೇರಿ PWD – ಸ.ಅ. ಇಂಜಿನಿಯರ್ ಗಿರೀಶ್ D.M
  • ಹಾವೇರಿ – ಯೋಜನಾ ನಿರ್ದೇಶಕ ಕಚೇರಿ ಇಇ ಶೇಕಪ್ಪ

ಲೋಕಾಯುಕ್ತ ತನಿಖಾ ಅಧಿಕಾರಿಗಳ ತಂಡವು ಆರೋಪಿತ ಅಧಿಕಾರಿಗಳಿಗೆ ಸಂಬಂಧಿಸಿದ ಮನೆಗಳು, ಕಚೇರಿಗಳು ಹಾಗೂ ಅವರ ಆಪ್ತರ ಸ್ಥಳಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಇದಕ್ಕೂ ಮೊದಲು 38.10 ಕೋಟಿ ಮೌಲ್ಯದ ಆಸ್ತಿಪತ್ತೆ

ಇದಕ್ಕೂ ಮುನ್ನ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯದ 12 ಅಧಿಕಾರಿಗಳ ಮನೆ-ಕಚೇರಿ ಸೇರಿ 48 ಕಡೆಗಳಲ್ಲಿ ದಾಳಿ ನಡೆಸಿ, ಸುಮಾರು ₹38.10 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿತ್ತು. ಸಂಬಂಧಿತ ಪ್ರಕರಣಗಳ ಬಗ್ಗೆ ಪ್ರಕಟಣೆ ಮೂಲಕ ಲೋಕಾಯುಕ್ತ ಇಲಾಖೆ ಮಾಹಿತಿ ನೀಡಿತ್ತು.

ಕಳೆದ ಬಾರಿ ದಾಖಲಾಗಿರುವ ಪ್ರಕರಣಗಳು:

  • ಬೆಂಗಳೂರು ನಗರ-2
  • ಬೆಂಗಳೂರು ಗ್ರಾಮಾಂತರ-1
  • ಚಿತ್ರದುರ್ಗ-1
  • ದಾವಣಗೆರೆ-2
  • ಹಾವೇರಿ-2
  • ಬೀದರ್-1
  • ಉಡುಪಿ-1
  • ಬಾಗಲಕೋಟೆ-1
  • ಹಾಸನ-1

ಈ ಸರ್ಕಾರೀ ಅಧಿಕಾರಿಗಳು ತಮ್ಮ ಆದಾಯ ಮೂಲಗಳಿಗೆ ಅನುಗುಣವಾಗಿ ವಿವರಿಸದ ಅಸಮತೋಲನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣಗಳು ದಾಖಲಾಗಿವೆ.

Trending

Exit mobile version