ಹೋಸಬೂದನೂರು ಗ್ರಾಮದಲ್ಲಿ ಸ್ಮಶಾನ ವಾಪಸ್ ಪಡೆಯಲು ಬೀದಿಗಿಳಿದ ಗ್ರಾಮಸ್ಥರು | Hosa Suddi

ಅಪರಾಧ

ಹೋಸಬೂದನೂರು ಗ್ರಾಮದಲ್ಲಿ ಸ್ಮಶಾನ ವಾಪಸ್ ಪಡೆಯಲು ಬೀದಿಗಿಳಿದ ಗ್ರಾಮಸ್ಥರು

Published

on

ಮಂಡ್ಯ, ಹೋಸಬೂದನೂರು: ಹೋಸಬೂದನೂರು ಗ್ರಾಮದಲ್ಲಿ ಕಳೆದ 1963 ರಿಂದ 2017ರವರೆಗೆ ಸರ್ವೇ ನಂಬರ್ 313ರಲ್ಲಿ 1 ಎಕರೆ 13 ಗುಂಟೆ ಜಾಗವು ಹಿಂದೂಗಳಿಗೆ ಸರ್ಕಾರಿ ಸ್ಮಶಾನ ಆಗಿತ್ತು. ಆದರೆ 2017 ರ ನಂತರ ವಕ್ಫ್ ಬೋರ್ಡ್ ಆಸ್ತಿ ಆಗಿದ್ದು, ಈ ಜಾಗ ಈಗ ಮುಸ್ಲಿಂ ಸಮುದಾಯದ ಮಕಾನ್ ಆಗಿದೆ.

ಗ್ರಾಮದಲ್ಲಿ ವಿಶೇಷ ಅಂಶ:
ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಕೂಡ ಇಲ್ಲ. ಹೀಗಿರುವಾಗ, ಮುಸ್ಲಿಂ ಸಮುದಾಯಕ್ಕೆ ಹಿಂದೂ ಸ್ಮಶಾನ ಜಾಗವನ್ನು ಬಿಟ್ಟು ಕೊಟ್ಟಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ಈಗ ಹಿಂದೂಗಳು ಸಾವನ್ನಪ್ಪಿದರೆ ಸ್ಮಶಾನ ಇಲ್ಲದ ಸಮಸ್ಯೆ ಎದುರಿಸಬೇಕಾಗಿದೆ.

ಪರಿಸ್ಥಿತಿ ಮತ್ತು ಪ್ರತಿಭಟನೆ:
ವಿಭಾಗ, ಜಿಲ್ಲಾಡಳಿತ ಮತ್ತು ಶಾಸಕರಿಗೆ ಮನವಿ ಮಾಡಿದ ನಂತರ, 24 ಗುಂಟೆ ಜಾಗವನ್ನು ಹಿಂದೂ ಸ್ಮಶಾನಕ್ಕಾಗಿ ಬಿಟ್ಟುಕೊಡಲಾಗಿತ್ತು. ಆದರೆ ಈಗ ಆ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ತಡೆ ಹಾಕಲಾಗಿದೆ. ಗ್ರಾಮ ಪಂಚಾಯ್ತಿ ಹಾಗೂ ತಹಶೀಲ್ದಾರ್ ಕ್ರಮದಿಂದ ಸ್ಮಶಾನ ಅಭಿವೃದ್ಧಿಗೆ ತಡೆ ಇರುವುದರಿಂದ, ಗ್ರಾಮಸ್ಥರು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮಸ್ಥರು ಒಪ್ಪಿಸಬೇಕಾದಂತೆ ಮುಸ್ಲಿಂ ಮಕಾನ್ ಮಾಡಿರುವ ಹಿಂದೂ ಸ್ಮಶಾನವನ್ನು ವಾಪಸ್ ಹಿಂದೂಗಳಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Trending

Exit mobile version