ಕಾರಿನ ಮೇಲೆ ಹತ್ತಿ ಗದ್ದಲಿ: ಟ್ರಾಫಿಕ್ ಪೊಲೀಸರ ಮೇಲೂ ದಾಳಿ ಮಾಡಿದ ಯುವಕ | Hosa Suddi

ಅಪರಾಧ

ಕಾರಿನ ಮೇಲೆ ಹತ್ತಿ ಗದ್ದಲಿ: ಟ್ರಾಫಿಕ್ ಪೊಲೀಸರ ಮೇಲೂ ದಾಳಿ ಮಾಡಿದ ಯುವಕ

Published

on

ಬೆಂಗಳೂರು: ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿ, ಕಾರಿನ ಮೇಲೆ ಹತ್ತಿ ನಡು ರಸ್ತೆಯಲ್ಲಿ ಹುಚ್ಚಾಟ ನಡೆಸಿದ ಘಟನೆ ಮೇಕ್ರಿ ಸರ್ಕಲ್‌ (Mekhri Circle) ಬಳಿ ನಡೆದಿದೆ.

ಸೂಪರ್ ಮಾರ್ಕೆಟ್‌ನಲ್ಲಿ ಮ್ಯಾನೇಜರ್ ಆಗಿದ್ದ ಸಂತೋಷ್ ಎಂಬಾತ ಮೈಸೂರಿನಿಂದ (Mysuru) ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ (Bengaluru Airport) ಹೋಗಲು ಕ್ಯಾಬ್ ಬುಕ್ ಮಾಡಿಕೊಂಡಿದ್ದ. ಮೇಕ್ರಿ ಸರ್ಕಲ್ ಬಳಿ ಚಾಲಕನ (Driver) ಜೊತೆ ಮಾತನಾಡುವ ವೇಳೆ ಜಗಳ ಶುರುವಾಗಿದೆ.

ಜಗಳ ತೀವ್ರಗೊಂಡಂತೆ ಸಂತೋಷ್ ಕಾರಿನ ಮೇಲೆ ಹತ್ತಿ ಅಸಭ್ಯವಾಗಿ ಕೂಗಾಡಲು ಶುರು ಮಾಡಿದ್ದಾನೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಮಧ್ಯೆ ಪ್ರವೇಶಿಸಲು ಯತ್ನಿಸಿದರೂ, ಅವರ ಮೇಲೂ ಹಲ್ಲೆ ನಡೆಸಿದ್ದಾರೆ.

ಸ್ತಿತಿ ಹದಗೆಟ್ಟ ಕಾರಣ, ಮತ್ತಾರ ಮೇಲೂ ಹಲ್ಲೆ ಮಾಡದಂತೆ ಪೊಲೀಸರು ಸಂತೋಷ್‌ನ ಕೈಕಾಲು ಕಟ್ಟಿ ರಸ್ತೆಯಲ್ಲೇ ಮಲಗಿಸಿ ಹಿಡಿದಿಟ್ಟಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸಂತೋಷ್ ಕಳೆದ ಆರು ತಿಂಗಳಿಂದ ಕೆಲಸ ಕಳೆದುಕೊಂಡಿದ್ದು, ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದಾನೆ. ದಾಂಪತ್ಯ ಜೀವನದಲ್ಲೂ ಸಮಸ್ಯೆಗಳು ಇದ್ದವು ಎನ್ನಲಾಗಿದೆ. ಇದೀಗ ಸದಾಶಿವನಗರ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.

Trending

Exit mobile version