ದೇಶ
ಚಾಮುಂಡಿ ರಥೋತ್ಸವಕ್ಕೆ ಜಿಟಿಡಿ ಚಾಲನೆ- ಮಹಾರಾಜರೇ ಗೈರು!
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು, ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾ ಕಾರ್ಯಕ್ರಮ ಮಾಡಲಾಯ್ತು.
ತಾಯಿ ಚಾಮುಂಡೇಶ್ವರಿ ರಥೋತ್ಸವಕ್ಕೆ ಶಾಸಕ ಜಿಟಿ ದೇವೇಗೌಡ ಚಾಲನೆ ನೀಡಿದರು, ನವರಾತ್ರಿ ಬಳಿಕ ನಡೆಯುವ ರಥೋತ್ಸವ ಬುಧವಾರ ಬೆಳಗ್ಗೆ 9.15 ಕ್ಕೆ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಚಾಮುಂಡಿ ಬೆಟ್ಟ ದೇವಾಲಯ ಅವರಣದಲ್ಲಿ ಒಂದು ಸುತ್ತು ಮೆರವಣಿಗೆ ಮಾಡಲಾಯ್ತು, ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಜಿಟಿ ದೇವೇಗೌಡ ವಿಶೇಷ ಪೂಜೆ ನೆರವೇರಿಸಿದರು,
ಚಾಮುಂಡಿ ಬೆಟ್ಟದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಅಮ್ಮನ ದರ್ಶನ ಪಡೆದು ಪುನೀತರಾದರು, ರಾಜವಂಶಸ್ಧ ಯದುವೀರ್ ಗೆ ಪುತ್ರ ಸಂತಾನ ಹಿನ್ನೆಲೆ ಸೂತಕದಿಂದಾಗಿ ರಥೋತ್ಸವಕ್ಕೆ ಗೈರು ಹಾಜರಾಗಿದ್ರು, ರಥೋತ್ಸವಕ್ಕೆ ಚಾಲನೆ ನೀಡ್ತಿದ್ದ ಹಾಗೆ ಭಕ್ತರ ಸಂಭ್ರಮ ಮುಗಿಲುಮುಟ್ಟಿತ್ತು, ಎಲ್ಲರೂ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಜೈ ಕಾರ ಕೂಗಿದರು,