ದೇಶ
ಮೈಸೂರು ದಸರಾ 2025: ತಮಟೆ ಸದ್ದಿಗೆ ಶಿವರಾಜ್ ಕುಮಾರ್ ಸ್ಟೆಪ್, ಆನೆನಿಂದ ಸೆಲ್ಯೂಟ್!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಗುರುವಾರ ನಾಡಿನ ಖ್ಯಾತ ನಟ ಶಿವರಾಜ್ ಕುಮಾರ್ ಭಾಗವಹಿಸಿದ್ದು, ಅವರು ತಮಟೆಯ ಸದ್ದಿಗೆ ಸ್ಟೆಪ್ ಹಾಕಿದ ದೃಶ್ಯ ಭಕ್ತರನ್ನು ಆಕರ್ಷಿಸಿತು. ಮೆರವಣಿಗೆಯ ಹೈ ಸ್ಕೋರ್ ಪ್ರದೇಶದ ಹೋಟೆಲ್ ಮುಂಭಾಗ ಕುಟುಂಬ ಸಮೇತ ಕುಳಿತಿದ್ದ ಶಿವಣ್ಣ, ತಮಟೆಯ ತಂಡದ ಭರ್ಜರಿ ಬೀಟ್‌ಗೆ ಸ್ಪಂದನೆ ನೀಡಿ ನಿಂತಲ್ಲೇ ಡ್ಯಾನ್ಸ್ ಮಾಡಿದರು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿದ್ದು, ಅಭಿಮಾನಿಗಳು “ಶಿವಣ್ಣ ಒನ್ ಅಂಡ್ ಓನ್ಲಿ” ಎಂದು ಹೊಗಳುತ್ತಿದ್ದಾರೆ.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಧನಂಜಯ ಆನೆ, ನಟ ಶಿವರಾಜ್ ಕುಮಾರ್‌ಗೆ ಸೆಲ್ಯೂಟ್ ಮಾಡಿದ ಅಪರೂಪದ ಕ್ಷಣ ಕೂಡ ಕಂಡುಬಂತು. ಈ ದೃಶ್ಯವೂ ಜನರ ಮನಸೆಳೆಯಿತು.
ಈ ಬಾರಿ 6ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆ ಜಂಬೂ ಸವಾರಿ ನಡೆಸಿಕೊಟ್ಟಿದ್ದು, ಲಕ್ಷಾಂತರ ಜನರು ಅದನ್ನು ಕಣ್ತುಂಬಿಕೊಂಡರು. ರಾಜ್ಯದ ಸಂಸ್ಕೃತಿಯ ಗರಿಮೆಯನ್ನು ಪರಿಚಯಿಸಿದ ಈ ಮೆರವಣಿಗೆ ಭವ್ಯತೆ, ಶಿಸ್ತು ಮತ್ತು ಶ್ರದ್ಧೆಯ ಪ್ರತೀಕವಾಗಿಯೇ ಮೆರೆದಿತು.