ಪ್ರಧಾನಿ ಮೋದಿ ತಾಯಿಗೆ ಅಪಮಾನ - ಏಕನಾಥ ಶಿಂಧೆ ಕಿಡಿ! | Hosa Suddi

ದೇಶ

ಪ್ರಧಾನಿ ಮೋದಿ ತಾಯಿಗೆ ಅಪಮಾನ – ಏಕನಾಥ ಶಿಂಧೆ ಕಿಡಿ!

Published

on

Narendra Modi Eknath shindhe

ಪ್ರಧಾನಿ ನರೇಂದ್ರ ಮೋದಿ (Narendra Modi ಅವರ ತಾಯಿಯವರ ಬಗ್ಗೆ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಎಐ ಬಳಸಿ ಕೃತಕ ವಿಡಿಯೋ ತಯಾರಿಸಿ ಅವಹೇಳನ ಮಾಡಿರುವುದನ್ನು ಶಿವಸೇನೆ ಮುಖ್ಯಸ್ಥ ಮಾಜಿ ಸಿಎಂ ಏಕನಾಥ ಶಿಂಧೆ ಖಂಡಿಸಿದ್ದಾರೆ. ಮಂಗಳವಾರ ಈ ಕುರಿತು ಮಾಧ್ಯಮಗಳೊಂದಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಗೆ ಅಪಮಾನ ಮಾಡಿಲ್ಲ. ಇಡೀ ದೇಶದ ಎಲ್ಲಾ ತಾಯಂದಿರಿಗೆ ಅಪಮಾನ ಮಾಡಿದ್ದಾರೆಂದು ಏಕನಾಥ ಶಿಂಧೆ ಹೇಳಿದ್ದಾರೆ. ನಮ್ಮ ದೇಶವು ತಾಯಿಗೆ ಅಪಮಾನ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನರು ಕಾಂಗ್ರೆಸ್ ಪಕ್ಷಕ್ಕೆ ಖಂಡಿತಾ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಿಂಧೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಹಗರಣಗಳನ್ನು ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ದೇಶ ಮೊದಲು ಎಂಬ ಸೂತ್ರವನ್ನು ಅಳವಡಿಸಿಕೊಂಡಿದ್ದರೆ ಕಾಂಗ್ರೆಸ್ ಭ್ರಷ್ಟಾಚಾರ ಮೊದಲು ಎಂಬ ಸೂತ್ರವನ್ನು ಅಳವಡಿಸಿಕೊಂಡಿದೆ ಎಂದು ಏಕನಾಥ ಶಿಂಧೆ ಹೇಳಿದ್ದಾರೆ.

Trending

Exit mobile version