ದೇಶ
Breaking ಆಪರೇಷನ್ ಸಿಂಧೂರ್: ಐದು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಐಎಎಫ್ ಮಿಸ್ 400 ಮಿಸೈಲ್‌ಗಳಿಂದ ನಾಶಮಾಡಿದ ಭಾರತದ ವಾಯುಸೇನೆ
ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವ ಅಧಿಕೃತ ಮಾಹಿತಿ ಇದೀಗ ವಾಯುಸೇನೆಯ ಮುಖ್ಯಸ್ಧರು ನೀಡಿದ್ದು, ಐದು ಪಾಕಿಸ್ತಾನಿ ಫೈಟರ್ ಜೆಟ್‌ಗಳನ್ನು ಐಎಎಫ್ ಮಿಸ್ 400 ಮಿಸೈಲ್ ಬಳಸಿ ನಾಶಮಾಡಲಾಗಿದೆ ಎಂದು ಖಚಿತಪಡಿಸಿದ್ದಾರೆ.
ಭಾರತದ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಈ ಕುರಿತು ಮಾತನಾಡಿ, ಈ ಕಾರ್ಯಾಚರಣೆಯ ಯಶಸ್ಸಿಗೆ ಮತ್ತು ಯಾವುದೇ ಪ್ರಮಾದಗಳಿಗೆ ವಾಯುಸೇನೆ ತನ್ನ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದು, ಸಮಯ ಬಂದಾಗ ಇನ್ನಷ್ಟು ವಿವರಗಳನ್ನು ಬಹಿರಂಗಪಡಿಸುವ ಬಗ್ಗೆ ಸಿದ್ಧತೆ ಇದ್ದಾರೆ ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ಘಟನೆಯ ಸಂದರ್ಭದಲ್ಲಿ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದವರ ಬಗ್ಗೆ ವಿವರಣೆ ನೀಡಿದ ಅವರು, ಈ ಘಟನೆಯ ವಿರುದ್ಧ ಸ್ಪಷ್ಟ ಹಾಗೂ ಘೋರ ಪ್ರತಿಕ್ರಿಯೆಯನ್ನು ಪಾಕಿಸ್ತಾನಕ್ಕೆ ನೀಡಬೇಕಾಗಿದ್ದು, ಉಗ್ರರ ಶಿಬಿರಗಳನ್ನು ನಾಶಮಾಡುವುದರ ಜೊತೆಗೆ ಅವರ ನಾಯಕತ್ವವನ್ನು ಪ್ರಶ್ನಿಸುವುದು ಮುಖ್ಯವಾಗಿತ್ತು ಎಂದು ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಮೂರು ಸೇನಾ ದಳಗಳು ಹಾಗೂ ಹಲವು ತನಿಖಾ ಸಂಸ್ಥೆಗಳು ಸಮನ್ವಯವಾಗಿ ಕಾರ್ಯನಿರ್ವಹಿಸಿ, ಗಡಿಯಲ್ಲಿ ಉಗ್ರರ ಕೇಂದ್ರಗಳು ಪಾಕಿಸ್ತಾನ ಸೈನಿಕರ ನಿರ್ವಹಣೆಯಲ್ಲಿದ್ದುದರಿಂದ ಹೋರಾಟ ಸವಾಲಿನಾಯಕವಾಗಿತ್ತು. ಹವಾಮಾನ ಮತ್ತು ಕಾರ್ಯಚಟುವಟಿಕೆಗಳಿಗೆ ಅನುಗುಣವಾಗಿ ಕಾರ್ಯಾಚರಣೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು ಎಂದು ವಿವರಿಸಿದರು.