ದೇಶ
PhonePe : ಒಂದೇ ಕ್ಲಿಕ್‌ನಲ್ಲಿ ಕಾರ್ಡ್ ಪಾವತಿ – CVV ಬೇಡ!
ಹೈದರಾಬಾದ್: ಡಿಜಿಟಲ್ ಪಾವತಿ ಕ್ಷೇತ್ರದ ದೈತ್ಯ PhonePe ತನ್ನ ಬಳಕೆದಾರರಿಗೆ ಮತ್ತೊಂದು ಮಹತ್ವದ ಅಪ್‌ಡೇಟ್ ನೀಡಿದೆ. ಆನ್‌ಲೈನ್ ಪಾವತಿಗಳನ್ನು ಇನ್ನಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿ ಮಾಡಲು ‘PhonePe PG Bolt’ ಎಂಬ ಹೊಸ ವೈಶಿಷ್ಟ್ಯವನ್ನು ಕಂಪನಿ ಪರಿಚಯಿಸಿದೆ. ಈ ಹೊಸ ತಂತ್ರಜ್ಞಾನದಿಂದ Visa ಹಾಗೂ MasterCard ಕಾರ್ಡ್ ಬಳಕೆದಾರರು ಇನ್ನುಮುಂದೆ ಪ್ರತಿಬಾರಿ CVV ಸಂಖ್ಯೆ ನಮೂದಿಸುವ ಅಗತ್ಯವಿಲ್ಲ. ಒಂದೇ ಕ್ಲಿಕ್‌ನಲ್ಲಿ ಪಾವತಿ ಪೂರ್ಣಗೊಳಿಸಬಹುದಾಗಿದೆ.
PhonePe PG Bolt ವ್ಯವಸ್ಥೆ ‘ಡಿವೈಸ್ ಟೋಕನೈಸೇಶನ್’ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ವಿಧಾನದಲ್ಲಿ ಬಳಕೆದಾರರ ಕಾರ್ಡ್ ವಿವರಗಳನ್ನು ಸುರಕ್ಷಿತ ಡಿಜಿಟಲ್ ಟೋಕನ್‌ಗಳಾಗಿ ಪರಿವರ್ತಿಸಲಾಗುತ್ತದೆ. ಬಳಕೆದಾರರು PhonePe ಅಪ್ಲಿಕೇಶನ್‌ನಲ್ಲಿ ಒಮ್ಮೆ ಮಾತ್ರ ತಮ್ಮ ಕಾರ್ಡ್ ವಿವರಗಳನ್ನು ಉಳಿಸಿದರೆ ಸಾಕು. ನಂತರ PhonePe ಪಾವತಿ ಗೇಟ್‌ವೇ ಬಳಸುವ ಯಾವುದೇ ವ್ಯಾಪಾರಿ ಅಪ್ಲಿಕೇಶನ್‌ನಲ್ಲಿ ಮತ್ತೆ ಕಾರ್ಡ್ ಸಂಖ್ಯೆ ಅಥವಾ CVV ನಮೂದಿಸುವ ಅಗತ್ಯವಿಲ್ಲ.
ಸಾಮಾನ್ಯವಾಗಿ ಆನ್‌ಲೈನ್ ಕಾರ್ಡ್ ಪಾವತಿಯಲ್ಲಿ ಹಲವು ಹಂತಗಳು, ಬೇರೆ ಪುಟಗಳಿಗೆ ಮರುನಿರ್ದೇಶನ ಹಾಗೂ ಬ್ಯಾಂಕ್ ಸರ್ವರ್ ವಿಳಂಬದಿಂದ ಪಾವತಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಆದರೆ PG Bolt ಮೂಲಕ ವ್ಯಾಪಾರಿ ಅಪ್ಲಿಕೇಶನ್‌ನಲ್ಲಿಯೇ ಕೆಲವೇ ಸೆಕೆಂಡುಗಳಲ್ಲಿ ವಹಿವಾಟು ಪೂರ್ಣಗೊಳ್ಳುತ್ತದೆ. ಇದರಿಂದ ಪಾವತಿ ವೈಫಲ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ.
ಈ ಕುರಿತು PhonePe ಮುಖ್ಯ ವ್ಯವಹಾರ ಅಧಿಕಾರಿ ಯುವರಾಜ್ ಸಿಂಗ್ ಶೇಖಾವತ್ ಮಾತನಾಡಿ, “ಕೋಟ್ಯಂತರ ಭಾರತೀಯರಿಗೆ ಡಿಜಿಟಲ್ ಪಾವತಿಯನ್ನು ಸುಲಭಗೊಳಿಸುವ ನಮ್ಮ ಪ್ರಯಾಣದಲ್ಲಿ ಇದು ಮಹತ್ವದ ಹೆಜ್ಜೆ. ಟೋಕನೈಸೇಶನ್ ಆಧಾರಿತ ಒಂದೇ ಕ್ಲಿಕ್ ಪಾವತಿ ಗ್ರಾಹಕರಿಗೂ ವ್ಯಾಪಾರಿಗಳಿಗೂ ದೊಡ್ಡ ಲಾಭ ತರುತ್ತದೆ” ಎಂದಿದ್ದಾರೆ.
ಈ ವೈಶಿಷ್ಟ್ಯವು ವ್ಯಾಪಾರಿಗಳಿಗೆ ಕೂಡ ವರದಾನವಾಗಿದೆ. ಪಾವತಿ ಪ್ರಕ್ರಿಯೆ ಸರಳವಾಗಿರುವುದರಿಂದ ಗ್ರಾಹಕರು ಮಧ್ಯದಲ್ಲೇ ವಹಿವಾಟು ರದ್ದುಗೊಳಿಸುವ ಸಾಧ್ಯತೆ ಕಡಿಮೆಯಾಗುತ್ತದೆ. PhonePe ಸ್ಥಳೀಯ SDK ಬಳಕೆಯಿಂದ ವಹಿವಾಟು ಯಶಸ್ಸಿನ ಪ್ರಮಾಣ ಹೆಚ್ಚಾಗಿ, ಆನ್‌ಲೈನ್ ಶಾಪಿಂಗ್ ಮತ್ತು ಬಿಲ್ ಪಾವತಿಗಳ ಅನುಭವ ಸಂಪೂರ್ಣವಾಗಿ ಬದಲಾಗಲಿದೆ.
ದೇಶ
Nepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
ಬಹ್ರೈಚ್: Nepal flood ದಲ್ಲಿ ಉಂಟಾದ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿದ್ದ 5 ಕಾಡಾನೆಗಳ ಹಿಂಡು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯ ಗಿರ್ಜಾಪುರಿ ಬ್ಯಾರೇಜ್ ಸಮೀಪ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿದೆ. ಆಗಸ್ಟ್ 25ರಂದು ನಡೆದ ಈ ಘಟನೆಯಲ್ಲಿ ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಗಳು ಪ್ರವಾಹದ ಸುಳಿಗೆ ಸಿಲುಕಿದ್ದವು.
ಕೌಡಿಯಾಲ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಸಂಕಷ್ಟಕ್ಕೆ ಸಿಲುಕಿತ್ತು. ನೀರಿನ ರಭಸ ಹೆಚ್ಚಿದ್ದರಿಂದ ಆನೆ ಮರಿಗಳಿಗೆ ತೇಲುವುದು ಕಷ್ಟವಾಗಿತ್ತು. ಈ ವೇಳೆ ವಯಸ್ಕ ಆನೆಗಳು ಮರಿಗಳನ್ನು ಸುತ್ತುವರಿದು ನಿಂತು, ಅವುಗಳನ್ನು ಪ್ರವಾಹದ ರಭಸದಿಂದ ರಕ್ಷಿಸಲು ಪ್ರಯತ್ನಿಸಿರುವುದು ಗಮನ ಸೆಳೆದಿದೆ.
ಮರಿಗಳನ್ನು ಬಿಟ್ಟು ಕದಲದ ದೊಡ್ಡ ಆನೆಗಳು
ಪ್ರವಾಹದ ನೀರು ಅಪಾಯಕಾರಿಯಾಗಿ ಹರಿಯುತ್ತಿದ್ದರೂ ವಯಸ್ಕ ಆನೆಗಳು ಮರಿಗಳನ್ನು ಏಕಾಂಗಿಯಾಗಿ ಬಿಡಲಿಲ್ಲ. ಅವುಗಳ ಸುತ್ತಲೂ ನಿಂತು ಮರಿಗಳಿಗೆ ರಕ್ಷಣೆ ನೀಡುವ ಮೂಲಕ ಸುರಕ್ಷಿತವಾಗಿ ದಡ ಸೇರುವಂತೆ ನೆರವಾದವು.
ಈ ದೃಶ್ಯ ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೂ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.
ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿದ ಅಧಿಕಾರಿಗಳು
ಆನೆಗಳ ಹಿಂಡು ಅಪಾಯದಲ್ಲಿರುವುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಳಿಕ ಗಿರ್ಜಾಪುರಿ ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚಲಾಗಿದ್ದು, ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ನೀರಿನ ರಭಸ ಕಡಿಮೆಯಾದ ಬಳಿಕ ವಯಸ್ಕ ಆನೆಗಳು ಚೇತರಿಸಿಕೊಂಡಿವೆ. ನಂತರ ಅವು ಎರಡು ಆನೆ ಮರಿಗಳನ್ನು ಸುರಕ್ಷಿತವಾಗಿ ದಂಡೆಯತ್ತ ಕರೆದೊಯ್ದಿವೆ.
ಸುರಕ್ಷಿತವಾಗಿ ಕಾಡಿಗೆ ಮರಳಿದ ಆನೆಗಳು
ಆನೆಗಳ ಹಿಂಡು ದಡ ತಲುಪಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ಬ್ಯಾರೇಜ್ ಪ್ರದೇಶದಿಂದ ದೂರಕ್ಕೆ ಕಳುಹಿಸಿ ಸುರಕ್ಷಿತವಾಗಿ ಕಾಡಿನತ್ತ ಸಾಗುವಂತೆ ಮಾಡಿದ್ದಾರೆ.
ಆಪತ್ತಿನ ಸಮಯದಲ್ಲೂ ಮರಿಗಳನ್ನು ಬಿಟ್ಟು ಹೋಗದೆ ಅವುಗಳನ್ನು ಸುತ್ತುವರಿದು ರಕ್ಷಿಸಿದ ಆನೆಗಳ ವರ್ತನೆ ಸಾರ್ವಜನಿಕರ ಗಮನ ಸೆಳೆದಿದೆ. ಮತ್ತೊಂದೆಡೆ, ಪರಿಸ್ಥಿತಿಯನ್ನು ತ್ವರಿತವಾಗಿ ಅರಿತು ನೀರಾವರಿ ಇಲಾಖೆಯ ಸಹಕಾರದೊಂದಿಗೆ ಬ್ಯಾರೇಜ್ ಗೇಟ್‌ಗಳನ್ನು ಬಂದ್ ಮಾಡಿ ಆನೆಗಳ ಜೀವ ಉಳಿಸಿದ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೂ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯ
Mysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ ಇದೀಗ Mysuru ಜಿಲ್ಲೆಯಲ್ಲೂ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 165 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದ್ದು, ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಲಾಗಿದೆ. ಈ ಪ್ರದೇಶದ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಿವಿಧ ವಾಣಿಜ್ಯ ಹಾಗೂ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಫಲವತ್ತಾದ ಜಮೀನು ಕೈಗಾರಿಕೆಗೆ?
ತಮ್ಮ ಜೀವನಾಧಾರವಾಗಿರುವ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.
ವಿಮಾನ ನಿಲ್ದಾಣದ ಸಮೀಪವಿರುವ ಮರಸೆ-ಮದರಗಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಉದ್ದೇಶದಿಂದ KIADB ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದಾಗಿ ತಿಳಿದುಬಂದಿದೆ. ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದರೆ ತಮ್ಮ ಕೃಷಿ ಮತ್ತು ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಡದಿ ಮಾದರಿಯಲ್ಲಿ ಮೈಸೂರಲ್ಲೂ ಹೋರಾಟ?
ಬೆಂಗಳೂರು ಸಮೀಪದ ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಮಾದರಿಯಲ್ಲೇ ಮೈಸೂರಿನಲ್ಲೂ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ಹಾಗೂ ಭೂಮಾಲೀಕರು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
165 ಎಕರೆ ಕೃಷಿ ಭೂಮಿ ಸ್ವಾಧೀನದ ವಿಚಾರ ಇದೀಗ ವರುಣಾ ಕ್ಷೇತ್ರದಲ್ಲಿ ರಾಜಕೀಯ ಹಾಗೂ ರೈತ ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸರ್ಕಾರದ ಭೂಸ್ವಾಧೀನ ಪ್ರಸ್ತಾವನೆಗೆ ರೈತರ ಪ್ರತಿಕ್ರಿಯೆ ಮತ್ತು ಮುಂದಿನ ಕ್ರಮಗಳತ್ತ ಇದೀಗ ಗಮನ ಹರಿದಿದೆ
ಬೆಂಗಳೂರು
Bengaluru ಪಾರ್ಕ್ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ
ಬೆಂಗಳೂರು: ರಾಜ್ಯ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ Bengaluru ರಿನ ಉದ್ಯಾನವನ ಹಾಗೂ ಉದ್ಯಾನಗಳ ಜಾಗವನ್ನು ಬಳಸಿಕೊಳ್ಳುವ ಸಚಿವ ಸಂಪುಟದ ನಿರ್ಧಾರಕ್ಕೆ ನಾಗರಿಕರು ಮತ್ತು ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಪಾರ್ಕ್‌ಗಳ ಭೂಮಿಯನ್ನು ಇತರ ಕಾಮಗಾರಿಗಳಿಗೆ ಬಳಸುವುದರಿಂದ ನಗರದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಲಾಲ್‌ಬಾಗ್‌ನಲ್ಲಿ ಬೃಹತ್ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ನಾಗರಿಕರು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಮುಖ್ಯಮಂತ್ರಿ ಅವರಿಗೆ ಜಂಟಿ ಮನವಿ ಸಲ್ಲಿಸಿ, ಉದ್ಯಾನವನಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನಾಗರಿಕ ಸಂಘಟನೆಗಳ ಪ್ರಕಾರ, ಉದ್ಯಾನವನಗಳು ಖಾಲಿ ಜಾಗವಲ್ಲ. ಅವು ನಗರದ ಉಷ್ಣಾಂಶ ನಿಯಂತ್ರಣ, ಮಳೆನೀರು ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ಮೂಲಸೌಕರ್ಯಗಳಾಗಿವೆ.
ಸಂಶೋಧನೆಗಳನ್ನು ಉಲ್ಲೇಖಿಸಿರುವ ಸಂಘಟನೆಗಳು, ಬೆಂಗಳೂರಿನ ಹಸಿರು ಪ್ರದೇಶಗಳು ಸುತ್ತಮುತ್ತಲಿನ ಪ್ರದೇಶಗಳಿಗಿಂತ ಸರಾಸರಿ 2.23 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿರುತ್ತವೆ ಎಂದು ಹೇಳಿದ್ದಾರೆ. ಉದ್ಯಾನವನಗಳಿಂದ ಉಂಟಾಗುವ ಈ ತಂಪಿನ ಪರಿಣಾಮ ಸುಮಾರು 347 ಮೀಟರ್ ವ್ಯಾಪ್ತಿಯವರೆಗೆ ಕಂಡುಬರುತ್ತದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಶೇ.28ರಷ್ಟು ವಾರ್ಡ್‌ಗಳಲ್ಲಿ ಪಾರ್ಕ್‌ಗಳೇ ಇಲ್ಲ!
ಐಐಹೆಚ್‌ಎಸ್ ಸಂಶೋಧನೆಯನ್ನು ಉಲ್ಲೇಖಿಸಿರುವ ನಾಗರಿಕ ಗುಂಪುಗಳು, ಬೆಂಗಳೂರಿನ ಸುಮಾರು 28 ಪ್ರತಿಶತ ವಾರ್ಡ್‌ಗಳಲ್ಲಿ ಒಂದೇ ಒಂದು ಉದ್ಯಾನವನ ಅಥವಾ ಸೂಕ್ತ ಹಸಿರು ಪ್ರದೇಶವಿಲ್ಲ ಎಂದು ಹೇಳಿದ್ದಾರೆ. ಈಗಿರುವ ಉದ್ಯಾನವನಗಳ ಜಾಗವನ್ನೂ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಂಡರೆ ಪರಿಸರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆ
ನಾಗರಿಕ ಸಂಘಟನೆಗಳು ಸರ್ಕಾರದ ಮುಂದೆ ಪ್ರಮುಖವಾಗಿ ಆರು ಬೇಡಿಕೆಗಳನ್ನು ಇಟ್ಟಿವೆ.
- ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ಕಾಯ್ದೆಗೆ ಉದ್ದೇಶಿಸಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು.
- ಅಸ್ತಿತ್ವದಲ್ಲಿರುವ ಉದ್ಯಾನವನಗಳನ್ನು ನಿರ್ಮಾಣ ಕಾಮಗಾರಿಗಳಿಗೆ ಬಳಸುವುದನ್ನು ತಡೆಯಬೇಕು.
- ಯೋಜನೆಗಳಿಗೆ ಉದ್ಯಾನವನಗಳನ್ನು ಹೊರತುಪಡಿಸಿ ಪರ್ಯಾಯ ಜಾಗಗಳನ್ನು ಮೊದಲು ಪರಿಶೀಲಿಸಬೇಕು.
- ಹಸಿರು ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು.
- ಪರಿಸರ, ಸಾಮಾಜಿಕ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಯೋಜನೆಗಳ ಪರಿಣಾಮದ ಸಮಗ್ರ ಅಧ್ಯಯನ ನಡೆಸಬೇಕು.
- ನಗರ ಯೋಜನೆಯಲ್ಲಿ ಉದ್ಯಾನವನಗಳನ್ನು ಅತ್ಯಗತ್ಯ ಸಾರ್ವಜನಿಕ ಆಸ್ತಿಯಾಗಿ ಗುರುತಿಸಿ ರಕ್ಷಿಸಬೇಕು.
ಬೆಂಗಳೂರು ನಗರಕ್ಕೆ ಇನ್ನಷ್ಟು ಹಸಿರು ಪ್ರದೇಶಗಳ ಅಗತ್ಯವಿದೆ. ಇರುವ ಉದ್ಯಾನವನಗಳ ಜಾಗವನ್ನು ಕಡಿಮೆ ಮಾಡುವ ಬದಲು ಅವುಗಳನ್ನು ಮತ್ತಷ್ಟು ಸಂರಕ್ಷಿಸಿ ವಿಸ್ತರಿಸಬೇಕು ಎಂದು ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
-
ಬೆಂಗಳೂರು21 ಗಂಟೆಗಳು agoVande Mataram ಸಂಪೂರ್ಣ ಹಾಡುವ ವಿಚಾರಕ್ಕೆ ರಾಜಕೀಯ ರಂಪಾಟ; CM ಡಿಕೆಶಿ ಹೇಳಿದ್ದೇನು?
-
ರಾಜಕೀಯ23 ಗಂಟೆಗಳು agoValmiki ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
-
ರಾಜಕೀಯ23 ಗಂಟೆಗಳು agoValmiki Corporation Scam: ‘ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಸಿಎಂ ಮಾಡಿಕೊಳ್ಳಿ’ ಎಂದ ವಿಜಯೇಂದ್ರ
-
ದೇಶ21 ಗಂಟೆಗಳು agoBJP ಶಾಸಕರ ಖಾಸಗಿ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ? ವಿಡಿಯೋ ವೈರಲ್, ಭಾರೀ ಆಕ್ರೋಶ
-
ದೇಶ24 ಗಂಟೆಗಳು agoONAM ಸದ್ಯ ಸವಿಯಲು ಸಾಲಿನಲ್ಲಿ ಕುಳಿತ ಕೋತಿಗಳು! 53 ವರ್ಷಗಳ ಅಪರೂಪದ ಸಂಪ್ರದಾಯ
-
ರಾಜ್ಯ23 ಗಂಟೆಗಳು agoOnline ತರಕಾರಿಗಳಿಗೆ ಕೆಮಿಕಲ್ ಸ್ಪ್ರೇ? ಸಚಿವ ಖಾದರ್ ಸ್ಫೋಟಕ ಹೇಳಿಕೆ, ಶೀಘ್ರದಲ್ಲೇ ಕ್ರಮ
-
ಕ್ರೀಡೆ23 ಗಂಟೆಗಳು agoIndia vs Panama: ವಿಶ್ವಕಪ್ ಆಡಿದ ಪನಾಮ ವಿರುದ್ಧ ಭಾರತ ಸೆಣಸು; ಪಂದ್ಯಕ್ಕೆ ದಿನಾಂಕ ಫಿಕ್ಸ್
-
ದೇಶ23 ಗಂಟೆಗಳು agoPM Narendra Modi ಥರ್ಡ್ ಪಾರ್ಟಿ ಆಡಿಟ್ ಇದ್ದರೂ ಕಳಪೆ ಕಾಮಗಾರಿ ಏಕೆ? ಅಧಿಕಾರಿಗಳಿಗೆ ಮೋದಿ ನೇರ ಪ್ರಶ್ನೆ
