ನನಗೆ ಸಹಾನುಭೂತಿ ಬೇಡ": ಭರ್ಜರಿ ಕಮ್‌ಬ್ಯಾಕ್ ಮಾಡಿದ ಪೃಥ್ವಿ ಶಾ ಬ್ಯಾಟ್ | Hosa Suddi

ಕ್ರೀಡೆ

ನನಗೆ ಸಹಾನುಭೂತಿ ಬೇಡ”: ಭರ್ಜರಿ ಕಮ್‌ಬ್ಯಾಕ್ ಮಾಡಿದ ಪೃಥ್ವಿ ಶಾ ಬ್ಯಾಟ್

Published

on

ನವದೆಹಲಿ: ರಾಷ್ಟ್ರೀಯ ತಂಡಕ್ಕೆ ಮರುಪ್ರವೇಶದ ಹಾದಿಯಲ್ಲಿ ನಿರಂತರ ಪರಿಶ್ರಮವನ್ನು ಮುಂದುವರೆಸಿರುವ ಪೃಥ್ವಿ ಶಾ (Prithvi Shaw) ಈಗ ತಮ್ಮ ಆಟದ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಮುಂಬೈ ತಂಡದಿಂದ ಹೊರದಾದ ನಂತರ ಮಹಾರಾಷ್ಟ್ರ ತಂಡದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಅವರು, ಬುಚಿ ಬಾಬು ಆಹ್ವಾನಿತ ಟೂರ್ನಿಯಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.

ಛತ್ತೀಸಗಢ ವಿರುದ್ಧದ ಪಂದ್ಯದಲ್ಲಿ ಶತಕದ ಬ್ಲಾಸ್ಟ್ ನೀಡಿದ ಪೃಥ್ವಿ ಶಾ, “ಯಾರ ಸಹಾನುಭೂತಿ ಬೇಡ. ನಾನು ನನ್ನ ಆಟದ ಮೂಲಕ ಎಲ್ಲಕ್ಕೂ ಉತ್ತರ ಕೊಡುತ್ತೇನೆ,” ಎಂದು ಸ್ಪಷ್ಟಪಡಿಸಿದರು. ಮಹಾರಾಷ್ಟ್ರ ಪರ ಆಡುತ್ತಿರುವ ಶಾ, ತಮ್ಮ ಶೈಲಿಯ ಬ್ಯಾಟಿಂಗ್ ಮೂಲಕ ಕಮ್‌ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳಿವೆ. ನಾನು ಮತ್ತೆ ಮೇಲೆ ಬರಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ನನ್ನ ಮೇಲೆ ನಾನೇ ವಿಶ್ವಾಸವಿಟ್ಟಿದ್ದೇನೆ. ಈ ಸೀಸನ್ ನನಗೂ, ತಂಡಕ್ಕೂ ಅದ್ಭುತವಾಗಿರಲಿದೆ,” ಎಂದು ಅವರು ಹೇಳಿದರು.

ಅವರ ಅಭ್ಯಾಸ ಶಿಸ್ತಿನ ಬಗ್ಗೆ ಮಾತನಾಡಿದ ಶಾ, “ನಾನು ನನ್ನ ಮೂಲಭೂತ ಅಂಶಗಳಿಗೆ ಮರಳುತ್ತಿದ್ದೇನೆ. ಅಂಡರ್ 19 ಕಾಲದಲ್ಲಿ ಮಾಡಿದಂತೆಯೇ ಈಗಲೂ ಜಿಮ್‌, ಓಟ, ಅಭ್ಯಾಸ ಮಾಡುತ್ತಿದ್ದೇನೆ. ಇದು ನನಗೆ ಹೊಸದೇನೂ ಅಲ್ಲ,” ಎಂದರು.

ಸಾಮಾಜಿಕ ಮಾಧ್ಯಮದ ಬಗ್ಗೆ ತಮ್ಮ ದೃಷ್ಟಿಕೋಣವನ್ನು ಹಂಚಿಕೊಂಡ ಶಾ, “ಸಾಮಾಜಿಕ ಮಾಧ್ಯಮದಿಂದ ದೂರವಿರುವುದು ನನಗೆ ಶಾಂತಿಯನ್ನು ನೀಡುತ್ತದೆ. ಇಂತಹ ಗೊಂದಲಗಳಿಂದ ದೂರವಿರುವುದು ಉತ್ತಮ,” ಎಂದು ಹೇಳಿದರು.

Trending

Exit mobile version