“ಆರ್‌ಎಸ್‌ಎಸ್ ಟೀಕಿಸಿದ್ರೆ ಡಿಸಿಎಂ ಆಗ್ತಿನಿ ಅಂದ್ರೆ, ಸಿಎಂ ಯಾಕೆ ಆಗಬಾರದು?: ಖರ್ಗೆ ವ್ಯಂಗ್ಯ” | Hosa Suddi

ರಾಜಕೀಯ

“ಆರ್‌ಎಸ್‌ಎಸ್ ಟೀಕಿಸಿದ್ರೆ ಡಿಸಿಎಂ ಆಗ್ತಿನಿ ಅಂದ್ರೆ, ಸಿಎಂ ಯಾಕೆ ಆಗಬಾರದು?: ಖರ್ಗೆ ವ್ಯಂಗ್ಯ”

Published

on

ಕಲಬುರಗಿ: ಆರ್‌ಎಸ್‌ಎಸ್‌ನವರು ಪಥಸಂಚಲನ ವಿಷಯವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಥಸಂಚಲನದ ದಿನದ ಕುರಿತು ಹಲವು ಸಂಘಟನೆಗಳು ಅರ್ಜಿ ಸಲ್ಲಿಸಿವೆ. ಈ ವಿಚಾರ ಇದೀಗ ಹೈಕೋರ್ಟ್‌ನಲ್ಲಿದ್ದು, ತೀರ್ಪು ಬಂದ ಬಳಿಕ ಎಲ್ಲರೂ ಪಾಲಿಸಬೇಕಿದೆ,” ಎಂದರು.

ವಿದ್ಯಾರ್ಥಿಗಳಿಗೆ ಕರೆ ನೀಡಿದ ಆರ್‌ಎಸ್‌ಎಸ್‌ ಕ್ರಮವನ್ನು ಪ್ರಶ್ನಿಸಿದ ಖರ್ಗೆ, “ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ ಸರ್ಕಾರಿ ಜಾಗ ಬಳಸಬಾರದು ಎಂದು ಪತ್ರ ಬರೆದಿದ್ದೇನೆ. ಅದರಲ್ಲಿ ತಪ್ಪೇನಿದೆ?” ಎಂದು ಪ್ರತಿಪ್ರಶ್ನಿಸಿದರು.

ಹೈಕೋರ್ಟ್ ಆದೇಶದ ವಿರುದ್ಧವಾಗಿ ಸಾರ್ವಜನಿಕ ಸ್ಥಳದಲ್ಲಿ ಪಥಸಂಚಲನ ನಡೆಸಿದ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ನನ್ನ ವಿರುದ್ಧ ಜೀವ ಬೆದರಿಕೆ ಹಾಕಲಾಗಿದೆ, ಆದರೆ ಬಿಜೆಪಿಯವರು ಅದನ್ನು ಖಂಡಿಸಲಿಲ್ಲ,” ಎಂದು ಖರ್ಗೆ ಆರೋಪಿಸಿದರು.

ಆರ್‌ಎಸ್‌ಎಸ್‌ ನೋಂದಣಿ ವಿಚಾರದಲ್ಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. “ಚಿತ್ತಾಪುರದಲ್ಲಿ ಕಾನೂನು ಉಲ್ಲಂಘನೆ ನಡೆದಿದೆ. ವಿದ್ಯಾರ್ಥಿಗಳ ಭವಿಷ್ಯ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹೈಕೋರ್ಟ್ ಅನುಮತಿ ನೀಡಿದರೆ ಪಥಸಂಚಲನಕ್ಕೆ ನಮ್ಮದೇನು ವಿರೋಧವಿಲ್ಲ,” ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಲು ಆರ್‌ಎಸ್‌ಎಸ್‌ ಟೀಕಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಅದರಿಂದ ಡಿಸಿಎಂ ಆಗುವಂತಿದ್ದರೆ, ಸಿಎಂ ಯಾಕೆ ಆಗಬಾರದು?” ಎಂದು ಕಟಾಕ್ಷ ಹಾಸುಮಾತು ಹೇಳಿದರು.

Trending

Exit mobile version