ಅಪ್ಪು ಎಐ ಮೂಲಕ ಮರಳಿ ಬಂದರು: ಡಿಕೆಶಿ ಬಿಡುಗಡೆ ಮಾಡಿದ “ಕನ್ನಡದ ಅಪ್ಪು ಪಿಆರ್ಕೆ” ಆ್ಯಪ್ | Hosa Suddi

ಬೆಂಗಳೂರು

ಅಪ್ಪು ಎಐ ಮೂಲಕ ಮರಳಿ ಬಂದರು: ಡಿಕೆಶಿ ಬಿಡುಗಡೆ ಮಾಡಿದ “ಕನ್ನಡದ ಅಪ್ಪು ಪಿಆರ್ಕೆ” ಆ್ಯಪ್

Published

on

ಬೆಂಗಳೂರು: ನಟ ದಿ.ಡಾ. ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಇದೇ ಅಕ್ಟೋಬರ್ 29ಕ್ಕೆ ನಾಲ್ಕು ವರ್ಷ ಪೂರ್ತಿಯಾಗುತ್ತಿದೆ. ಈ ಸಂದರ್ಭದಲ್ಲಿ “ಕನ್ನಡದ ಅಪ್ಪು ಪಿಆರ್ಕೆ” ಎಂಬ ಹೊಸ ಮೊಬೈಲ್ ಆ್ಯಪ್ ಅನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಅಭಿಮಾನಿಗಳಿಗೆ ಪರಿಚಯಿಸುವ ಉದ್ದೇಶದಿಂದ ಸ್ಟಾರ್ ಫ್ಯಾನ್ಡಮ್ ಸಂಸ್ಥೆ ರೂಪಿಸಿದೆ. ಶನಿವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆ್ಯಪ್‌ನ್ನು ಅನಾವರಣಗೊಳಿಸಿದರು.

ಡಿಕೆಶಿ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಪುನೀತ್ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ತರಲು ನಾನು ಹಲವಾರು ಬಾರಿ ಪ್ರಯತ್ನಿಸಿದ್ದೆ. ಆದರೆ ಅವರು ಸದಾ ತಮ್ಮ ಹಾದಿಯಲ್ಲೇ ನಿಂತಿದ್ದರು. ಅವರ ಪತ್ನಿ ಅಶ್ವಿನಿಯವರೂ ಸಹ ಅದೇ ದಾರಿ ಹಿಡಿದರು” ಎಂದರು.

“ರಾಮಾಯಣ, ಮಹಾಭಾರತಗಳಂತೆ ಅಪ್ಪು ಅವರ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ಸದಾಕಾಲ ಜೀವಂತವಾಗಿರುತ್ತವೆ. ಕೃತಕ ಬುದ್ಧಿಮತ್ತೆ ಮೂಲಕ ಬಾಲ್ಯದಿಂದ ಕೊನೆಯ ದಿನದವರೆಗಿನ ಪುನೀತ್ ಅವರ ಜೀವನ ಕ್ಷಣಗಳು ಈ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತವೆ” ಎಂದು ಹೇಳಿದರು.

“ಅಪ್ಪು ಅವರು ಮನುಷ್ಯತ್ವದ ಮಾದರಿ. ಸಮಾಜಕ್ಕೆ ಕೊಡುಗೆ ನೀಡಿದವರು. ಅವರ ಹೆಸರಿನಲ್ಲಿ ನಿರ್ಮಿತವಾದ ಈ ಆ್ಯಪ್ ಯುವ ಪೀಳಿಗೆಗೆ ಸ್ಫೂರ್ತಿ ನೀಡಲಿದೆ. ತಂತ್ರಜ್ಞಾನದಿಂದ ದೂರವಿದ್ದರೂ ಅದರ ಮಹತ್ವವನ್ನು ಈಗ ಅರಿಯುತ್ತಿದ್ದೇನೆ” ಎಂದರು.

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಸ್ಟಾರ್ ಫ್ಯಾನ್ಡಮ್ ಸಂಸ್ಥೆಯ ಅಧ್ಯಕ್ಷ ಡಾ. ಸಮರ್ಥ ರಾಘವ ನಾಗಭೂಷಣಂ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Trending

Exit mobile version