‘ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ’: ಹೊಸ PRK ಆಪ್ ಸಂಚಲನ | Hosa Suddi

ದೇಶ

‘ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ’: ಹೊಸ PRK ಆಪ್ ಸಂಚಲನ

Published

on

Dr Puneeth Rajkumar

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಅಪ್ಪು ಅವರ ನಗು, ಅಭಿಮಾನ ಮತ್ತು ನೆನಪುಗಳು ಎಂದೆಂದಿಗೂ ಅಳಿಯದಂತಿವೆ. ಇದೀಗ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅಪ್ಪು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ — ‘PRK App’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್!

ಈ ಆಪ್ ಅಕ್ಟೋಬರ್ 25ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಲಾಂಚ್ ಆಗಲಿದೆ. ಟ್ರೈಲರ್ ಅಕ್ಟೋಬರ್ 18ರಂದು ಬೆಳಗ್ಗೆ 11:55ಕ್ಕೆ ಬಿಡುಗಡೆಯಾಗಲಿದ್ದು, ಈಗಾಗಲೇ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಪ್ರೀತಿಯಿಂದ ಅಪ್ಪು ಅಭಿಮಾನಿಗಳಿಗಾಗಿ” ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಆಪ್ ಕುತೂಹಲ ಕೆರಳಿಸಿದೆ.

ಅಶ್ವಿನಿ ಅವರು ಹೇಳುವಂತೆ, ಈ ಆಪ್ ಅಪ್ಪು ಅವರ ಜೀವನ, ಸಾಧನೆ ಮತ್ತು ಪ್ರೇರಣೆಯ ಕ್ಷಣಗಳನ್ನು ಒಂದೇ ಕಡೆ ಸೇರಿಸುವ ಪ್ರಯತ್ನವಾಗಿದೆ. ಆಪ್‌ನಲ್ಲಿ ‘ಅಪ್ಪು’, ‘ಸ್ಯಾಂಡಲ್‌ವುಡ್’, ‘ಕನೆಕ್ಟ್’, ‘ಪಾಡ್‌ಕಾಸ್ಟ್’, ‘ಫಿಟ್ನೆಸ್’, ‘ಕ್ವಿಜ್’, ‘ಕಿಡ್ಸ್ ಜೋನ್’ ಮತ್ತು ‘ಗ್ಯಾಲರಿ’ ವಿಭಾಗಗಳು ಇರಲಿವೆ.

ಅಶ್ವಿನಿ ಅವರೇ ಲಾಂಚ್ ಮಾಡಿದ ಟೀಸರ್‌ನಲ್ಲಿ ಪುನೀತ್ ಅವರ ನಗು, ಪಾಡ್‌ಕಾಸ್ಟ್ ಧ್ವನಿ ಮತ್ತು ಅಭಿಮಾನಿಗಳ ನೆನಪುಗಳು ಕಣ್ಣೀರಾಗುವಂತೆ ಮಾಡಿವೆ. ಫಿಟ್ನೆಸ್ ಚಾಲೆಂಜ್, ಮಕ್ಕಳಿಗಾಗಿ ಎಐ ಚೋಟಾ ಅಪ್ಪು ಮತ್ತು ಸಿನಿರಂಗದ ಹೊಸ ಅಪ್‌ಡೇಟ್‌ಗಳು ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿವೆ.

ಅಶ್ವಿನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು — “ಬರ್ತಿದೆ ಒಂದು ಪವರ್‌ಫುಲ್ ಟ್ರೈಲರ್… ಮತ್ತೆ ಅಪ್ಪುವನ್ನು PRK App ಮೂಲಕ ಕಣ್ಣುಂಬಿಕೊಳ್ಳಲು ರೆಡಿಯಾಗಿ!” ಎಂದು ತಿಳಿಸಿದ್ದಾರೆ.

Trending

Exit mobile version