ದೇಶ
₹8 ಲಕ್ಷ ಪ್ರತಿರಾತ್ರಿ ಸೂಟ್ ಏನು ವಿಶೇಷ? ಪುಟಿನ್ ವಾಸ್ತವ್ಯಕ್ಕೆ ಮೂಡಿದ ಕುತೂಹಲ
ನವದೆಹಲಿ: ಎರಡು ದಿನಗಳ ಭಾರತದ ಪ್ರವಾಸಕ್ಕೆ ಬಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೆಹಲಿಯ ಐಟಿಸಿ ಮೌರ್ಯ ಹೋಟೆಲಿನ ಅತಿಥಿ ಸೂಟ್ನಲ್ಲಿ ತಂಗಲಿದ್ದಾರೆ. 4,700 ಚದರ ಅಡಿ ವಿಸ್ತೀರ್ಣದ ‘ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್’ನಲ್ಲಿ ಪುಟಿನ್ ಮತ್ತು ಅವರ ಅಧಿಕೃತ ನಿಯೋಗ ಬುಧವಾರ ರಾತ್ರಿ ವಾಸ್ತವ್ಯ ಹೂಡಿದೆ. ವಿದೇಶಿ ರಾಷ್ಟ್ರಾಧ್ಯಕ್ಷರು, ಜಾಗತಿಕ ಗಣ್ಯರಿಗೆಂದೇ ವಿನ್ಯಾಸಗೊಂಡಿರುವ ಈ ವಿಶೇಷ ಸೂಟ್ಗೆ ಈಗ ಭಾರತ–ರಷ್ಯಾ ಭದ್ರತಾ ಪಡೆಗಳು ಭಾರೀ ತನಿಖಾ ಮತ್ತು ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಿದ್ದವೆ.
ಇದೇ ಸೂಟ್ನಲ್ಲಿ ಈ ಹಿಂದೆ ಡೊನಾಲ್ಡ್ ಟ್ರಂಪ್, ಜೋ ಬೈಡನ್, ಬಿಲ್ ಕ್ಲಿಂಟನ್ ಸೇರಿದಂತೆ ಅನೇಕ ರಾಷ್ಟ್ರಾಧ್ಯಕ್ಷರು ತಂಗಿರುವುದು ಇಲ್ಲಿ ನೀಡಲಾಗುವ ಅಗ್ರಮಟ್ಟದ ಅತಿಥಿ ಸತ್ಕಾರಕ್ಕೆ ಸಾಕ್ಷಿ.
ಸೂಟ್ನ ಆಕರ್ಷಕ ವೈಶಿಷ್ಟ್ಯಗಳು
ಮೌರ್ಯ ಸಾಮ್ರಾಜ್ಯದಿಂದ ಸ್ಫೂರ್ತಿ ಪಡೆದು ನಿರ್ಮಿಸಿದ ಈ ‘ಮಿನಿ ಅರಮನೆ’ ಶೈಲಿಯ ಸೂಟ್ನಲ್ಲಿ ಖಾಸಗಿ ಜಿಮ್, ಜೋಡಿಗಳ ಸ್ಪಾ, ಬೆಳ್ಳಿಯ ಕಲಾಕೃತಿಗಳು, ಎರಡು ದೊಡ್ಡ ಮಲಗುವ ಕೋಣೆಗಳು, ವಿಶಾಲ ಸ್ನಾನಗೃಹ ಹಾಗೂ ರೆಸೆಪ್ಶನ್ ಪ್ರದೇಶ ಒಂದಕ್ಕಿಂತ ಒಂದು ವಿಶೇಷವಾಗಿ ಹೆಬ್ಬಾಗಿಲಾಗಿದೆ. ಲಗ್ಜುರಿ ಮತ್ತು ಭದ್ರತೆಯ ಸಮನ್ವಯ ಹೊಂದಿರುವ ಈ ಅಧ್ಯಕ್ಷೀಯ ಸೂಟ್ನಲ್ಲಿ ಒಂದು ರಾತ್ರಿಯ ವಾಸಕ್ಕೆ ₹7.5 ರಿಂದ ₹8 ಲಕ್ಷಗಳವರೆಗೆ ವೆಚ್ಚವಾಗುತ್ತದೆ ಎಂಬ ಮಾಹಿತಿ ಲಭ್ಯ.
ದೆಹಲಿಯ ಐಷಾರಾಮಿ ಹೋಟೆಲ್ಗಳಲ್ಲಿ ಪೂರ್ಣ ಬುಕ್ಕಿಂಗ್
ಪುಟಿನ್ ನಿಯೋಗದ ಕೆಲವು ಸದಸ್ಯರಿಗೆ ಪಕ್ಕದ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಕೊಠಡಿಗಳು ಕಾಯ್ದಿರಿಸಲಾಗಿದೆ. ಜೊತೆಗೆ ತಾಜ್ ಮಹಲ್, ಒಬೆರಾಯ್, ಲೀಲಾ, ITC ಮೌರ್ಯ ಸೇರಿದಂತೆ ದೆಹಲಿಯ ಪ್ರಮುಖ ಫೈವ್-ಸ್ಟಾರ್ ಹೋಟೆಲ್ಗಳ ಎಲ್ಲಾ ರೂಮ್ಗಳು ಈಗಾಗಲೇ ಬುಕ್ ಆಗಿವೆ.
ಡಿಸೆಂಬರ್ ತಿಂಗಳ ಮದುವೆ ಕಾಲ, ಜೊತೆಗೆ ಭಾರತ್ ಮಂಟಪ ಮತ್ತು ಯಶೋಭೂಮಿ ಕನ್ವೆನ್ಷನ್ ಕೇಂದ್ರಗಳಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಕಾರ್ಯಕ್ರಮಗಳ ಕಾರಣ ದೆಹಲಿಯ ಟಾಪ್ ಹೋಟೆಲ್ಗಳಲ್ಲಿ ರೂಮ್ಗಳ ಬೇಡಿಕೆ ಗರಿಷ್ಠ ಮಟ್ಟದಲ್ಲಿದೆ.