ರಾಘು ಶಿವಮೊಗ್ಗ ನಿರ್ದೇಶನದ ‘ದಿ ಟಾಸ್ಕ್’ ಟೀಸರ್‌ ಬಿಡುಗಡೆ – ಆಕ್ಷನ್ ಥ್ರಿಲ್ಲರ್‌ಗೆ ಭರ್ಜರಿ ಆರಂಭ! | Hosa Suddi

ಬೆಂಗಳೂರು

ರಾಘು ಶಿವಮೊಗ್ಗ ನಿರ್ದೇಶನದ ‘ದಿ ಟಾಸ್ಕ್’ ಟೀಸರ್‌ ಬಿಡುಗಡೆ – ಆಕ್ಷನ್ ಥ್ರಿಲ್ಲರ್‌ಗೆ ಭರ್ಜರಿ ಆರಂಭ!

Published

on

ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಿರ್ದೇಶಕ ರಾಘು ಶಿವಮೊಗ್ಗ ಅವರ ಮೂರನೇ ಸಿನಿಮಾ ‘ದಿ ಟಾಸ್ಕ್’ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 21ರಂದು ಚಿತ್ರ ತೆರೆಗೆ ಬರುವ ಹಿನ್ನೆಲೆಯಲ್ಲಿ, ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಮೈಸೂರಿನ ಜಿಟಿ ಮಾಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ADGP ಎಂ. ಚಂದ್ರಶೇಖರ್, ಲಹರಿ ವೇಲು, ಪವನ್ ಒಡೆಯರ್, ಸಿಂಪಲ್ ಸುನಿ, ಚೇತನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಚಿತ್ರತಂಡಕ್ಕೆ ಶುಭಾಶಯ ಕೋರಿದರು.

ಟೀಸರ್ ಕುರಿತು ಮಾತನಾಡಿದ ಎಂ. ಚಂದ್ರಶೇಖರ್ ಅವರು, “ಟಾಸ್ಕ್ ಅಂದರೆ ಮಿಷನ್‌ ಅಥವಾ ಆಪರೇಷನ್‌. ಈ ಸಿನಿಮಾದಲ್ಲಿ ಕೇವಲ ಎಂಟರ್ಟೈನ್ಮೆಂಟ್ ಮಾತ್ರವಲ್ಲ, ಸಾಮಾಜಿಕ ಸಂದೇಶವೂ ಇದೆ” ಎಂದು ಹೇಳಿದರು.

ಪವನ್ ಒಡೆಯರ್ ಅವರು, “ಟೀಸರ್‌ ಪ್ರಾಮಿಸಿಂಗ್ ಆಗಿದೆ. ರಾಘು ಸರ್‌ ಅವರ ಬರವಣಿಗೆ ಮತ್ತು ಮೇಕಿಂಗ್‌ ಸ್ಟೈಲ್‌ ವಿಭಿನ್ನವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚೇತನ್ ಕುಮಾರ್ ಮಾತನಾಡಿ, “ಟೀಸರ್‌ ಟೆರಿಫಿಕ್ ಆಗಿದೆ! ಇಬ್ಬರು ಹೀರೋಗಳು ಸ್ಕ್ರೀನ್‌ನಲ್ಲಿ ಎರಡು ಹುಲಿಯಂತೆ ಕಾಣಿಸುತ್ತಾರೆ” ಎಂದು ಪ್ರಶಂಸಿಸಿದರು.

ನಿರ್ದೇಶಕ ರಾಘು ಶಿವಮೊಗ್ಗ ಹೇಳುವಂತೆ, “ದಿ ಟಾಸ್ಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ನೈಜ ಘಟನೆಗಳಿಂದ ಪ್ರೇರಿತ ಕಥೆಯಾಗಿದೆ. ಪ್ರತಿಯೊಬ್ಬ ಟೆಕ್ನಿಷಿಯನ್‌ ಮತ್ತು ಕಲಾವಿದರಿಂದ ಶತಪ್ರತಿಶತ ಸಹಕಾರ ದೊರೆತಿದೆ” ಎಂದು ತಿಳಿಸಿದರು.

ಚಿತ್ರದಲ್ಲಿ ಸಾಗರ್ ಮತ್ತು ಜಯಸೂರ್ಯ ಹೀರೋಗಳಾಗಿದ್ದು, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್, ಹರಿಣಿ ಶ್ರೀಕಾಂತ್ ಸೇರಿದಂತೆ ಬಲಿಷ್ಠ ತಾರಾ ಬಳಗವಿದೆ.

Trending

Exit mobile version