Rajamouli: ಒಟಿಟಿಯಲ್ಲಿ ಜಕ್ಕಣ್ಣನ ಜೀವನ ಕಥೆ! ನಿರ್ದೇಶಕ ಎಸ್ಎಸ್ ರಾಜಮೌಳಿ ಕುರಿತ ಡಾಕ್ಯುಮೆಂಟರಿ ಸ್ಟ್ರೀಮಿಂಗ್ ಯಾವಾಗ? | Hosa Suddi

ದೇಶ

Rajamouli: ಒಟಿಟಿಯಲ್ಲಿ ಜಕ್ಕಣ್ಣನ ಜೀವನ ಕಥೆ! ನಿರ್ದೇಶಕ ಎಸ್ಎಸ್ ರಾಜಮೌಳಿ ಕುರಿತ ಡಾಕ್ಯುಮೆಂಟರಿ ಸ್ಟ್ರೀಮಿಂಗ್ ಯಾವಾಗ?

Published

on

ಟಾಲಿವುಡ್ ನಿರ್ದೇಶಕ ಹೀರೋ ಎಸ್ಎಸ್ ರಾಜಮೌಳಿ ಅವರು ಬಾಹುಬಲಿ ಮತ್ತು ಆರ್ ಆರ್ ಆರ್ ಸಿನಿಮಾಗಳ ಮೂಲಕ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಜನಪ್ರಿಯರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಒಂದೇ ಒಂದು ಫ್ಲಾಪ್ ಸಿನಿಮಾ ನೀಡಿದ ನಿರ್ದೇಶಕರಿದ್ದರೆ ಅದು ರಾಜಮೌಳಿ ಎಂದರೆ ತಪ್ಪಾಗಲ್ಲ.

ತಮ್ಮ ಸಿನಿಮಾಗಳ ಮೂಲಕವೇ ವಿಶ್ವಾದ್ಯಂತ ಹೆಸರು ಮಾಡಿ ರಾಜಮೌಳಿ ಕುರಿತು ಸಾಕ್ಷ್ಯಚಿತ್ರದ ಸೀರಿಸ್ ಬರುತ್ತಿದೆ. ಜನಪ್ರಿಯ OTT ಕಂಪನಿ ನೆಟ್ಫ್ಲಿಕ್ಸ್ ನಲ್ಲಿ ಈ ಡಾಕ್ಯುಮೆಂಟರಿ ರಿಲೀಸ್ ಆಗ್ತಿದೆ.

ಮಾಡರ್ನ್ ಮಾಸ್ಟರ್ಸ್: ಎಸ್ಎಸ್ ರಾಜಮೌಳಿ’ ಟೈಟಲ್ ನ ಈ ವೆಬ್ ಸರಣಿಯು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಹಲವು ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ಸೋಲೇ ಇಲ್ಲದ ಸರದಾರನಾಗಲು ರಾಜಮೌಳಿ ಪಟ್ಟ ಶ್ರಮ ಎಂಥದ್ದು? ಸ್ಟಾರ್ ನಿರ್ದೇಶಕರಾಗಲು ಎಷ್ಟು ವರ್ಷ ತೆಗೆದುಕೊಂಡರು? ಎಂಬೆಲ್ಲಾ ಪ್ರಶ್ನೆಗಳಿಗೆ ಈ ಸೀರಿಸ್ ನಲ್ಲಿ ಉತ್ತರ ಸಿಗಲಿದೆ.

‘ಮಾಡರ್ನ್ ಮಾಸ್ಟರ್ಸ್’ ಆಗಸ್ಟ್ 2 ರಿಂದ ನೆಟ್ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ ಎಂದು ನೆಟ್ಫ್ಲಿಕ್ಸ್ ಕಂಪನಿ ಪೋಸ್ಟ್ ಮಾಡಿದೆ. ಈ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ. ಇದೇ ವೇಳೆ ಚಿತ್ರರಂಗದಲ್ಲಿ ರಾಜಮೌಳಿ ಹೇಗೆ ತಮ್ಮ ಛಾಪು ಮೂಡಿಸಿದ್ದಾರೆ ಎಂಬುದನ್ನು ‘ಮಾಡರ್ನ್ ಮಾಸ್ಟರ್ಸ್’ ಸಾಕ್ಷ್ಯಚಿತ್ರ ತೋರಿಸಲಿದೆ.

ಹಾಲಿವುಡ್ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಜೋ ರುಸ್ಸೋ, ಕರಣ್ ಜೋಹರ್ ಮುಂತಾದವರು ವಿವಿಧ ಸಂದರ್ಭಗಳಲ್ಲಿ ರಾಜಮೌಳಿ ಬಗ್ಗೆ ಹಂಚಿಕೊಂಡ ಅಭಿಪ್ರಾಯಗಳನ್ನು ಇಲ್ಲಿ ತೋರಿಸಲಾಗುತ್ತದೆ. ಟಾಲಿವುಡ್ ಮತ್ತು ಬಾಲಿವುಡ್ ಸ್ಟಾರ್ ಹೀರೋಗಳಾದ ಪ್ರಭಾಸ್, ಜೂನಿಯರ್ ಎನ್ ಟಿಆರ್, ರಾಮ್ ಚರಣ್, ರಾಣಾ ದಗ್ಗುಬಾಟಿ, ರಣಬೀರ್ ಕಪೂರ್ ಮುಂತಾದವರು ಕೂಡ ಈ ಸಾಕ್ಷ್ಯಚಿತ್ರದಲ್ಲಿ ಜಕ್ಕಣ್ಣನ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ತಿಳಿಸಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ಅನುಪಮಾ ಚೋಪ್ರಾ ಪ್ರಸ್ತುತಪಡಿಸಿದ್ದಾರೆ.

ರಾಜಮೌಳಿ ಸಿನಿಮಾಗಾಗಿ ಇಡೀ ದೇಶದ ಸಿನಿಪ್ರಿಯರು ಕಾಯ್ತಿದ್ದಾರೆ. ನಿರ್ದೇಶಕ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಸಾವಿರ ಕೋಟಿ ಬಜೆಟ್​ನಲ್ಲಿ ತಯಾರಾಗ್ತಿರುವ ರಾಜಮೌಳಿ ಹಾಗೂ ಮಹೇಶ್​ ಬಾಬು ಕಾಂಬಿನೇಷನ್ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ.

Trending

Exit mobile version