ರಾಜಣ್ಣ ವಜಾ: ನನಗೆ ಯಾವುದೇ ವಿಷಾದವಿಲ್ಲ – ಸಿಎಂ ಸಿದ್ದರಾಮಯ್ಯ | Hosa Suddi

ಬೆಂಗಳೂರು

ರಾಜಣ್ಣ ವಜಾ: ನನಗೆ ಯಾವುದೇ ವಿಷಾದವಿಲ್ಲ – ಸಿಎಂ ಸಿದ್ದರಾಮಯ್ಯ

Published

on

ಬೆಂಗಳೂರು: ರಾಜ್ಯ ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿರುವುದಕ್ಕೆ ನನಗೆ ಯಾವುದೇ ವಿಷಾದವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಅವರು “ರಾಜಣ್ಣ ಅವರನ್ನು ಪದಚ್ಯುತಗೊಳಿಸಿದ ಬಳಿಕ ಸಿಎಂ ಮಂಕಾಗಿದ್ದಾರೆ” ಎಂದು ಟೀಕಿಸಿದ ವೇಳೆ, ಸಿಎಂ ಪ್ರತಿಕ್ರಿಯಿಸಿ “ನಾನು ಯಾವಾಗಲೂ ಸಮಚಿತ್ತದಿಂದ ಇರುತ್ತೇನೆ” ಎಂದರು.

ವಿಪಕ್ಷ ನಾಯಕ ಆರ್. ಅಶೋಕ್ ಅವರು RCB ಸನ್ಮಾನ, ಡಿಪಿಆರ್ ಕಾರ್ಯದರ್ಶಿಯ ಹೇಳಿಕೆ, ಹಾಗೂ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಎತ್ತಿದರು. ಇದಕ್ಕೆ ಸಿಎಂ, “ನನಗೂ ನಿಮ್ಮ ಪಕ್ಷದ ಕೆಲ ಶಾಸಕರು ಅಶೋಕ್ ವಿರೋಧಿಯಾಗಬೇಕೆಂದಿದ್ದರು” ಎಂದು ತಿರುಗೇಟು ನೀಡಿದರು.

ಅಶೋಕ್ ಅವರು “ಪವರ್ ಸೆಂಟರ್ ಎರಡು ಕಡೆ ಇರುವುದರಿಂದ ರಾಜಣ್ಣ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಆಗಿಲ್ಲ” ಎಂದು ಲೇವಡಿ ಮಾಡಿದರೆ, ಸಿಎಂ “ರಾಜಣ್ಣ ವಜಾದಿಂದ ನನಗೆ ಬೇಸರವಿಲ್ಲ” ಎಂದು ಪುನರುಚ್ಚರಿಸಿದರು.

ವಿಧಾನಸಭೆಯಲ್ಲಿ ನಡೆದ ಈ ವಾಗ್ವಾದ ರಾಜ್ಯ ರಾಜಕೀಯದ ತೀವ್ರತೆ ಮತ್ತಷ್ಟು ಹೆಚ್ಚಿಸಿದೆ.

Trending

Exit mobile version