ಡಾಲರ್ ಬಲ, ರೂಪಾಯಿ ದುರ್ಬಲ: ಭಾರತೀಯ ಕರೆನ್ಸಿ ಹೊಸ ಕನಿಷ್ಠಕ್ಕೆ | Hosa Suddi

ದೇಶ

ಡಾಲರ್ ಬಲ, ರೂಪಾಯಿ ದುರ್ಬಲ: ಭಾರತೀಯ ಕರೆನ್ಸಿ ಹೊಸ ಕನಿಷ್ಠಕ್ಕೆ

Published

on

ಮುಂಬೈ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಅನಿಶ್ಚಿತತೆ ಹಾಗೂ ವಿದೇಶಿ ನಿಧಿಗಳ ನಿರಂತರ ಹೊರಹರಿವು ಭಾರತೀಯ ಹಣಕಾಸು ಮಾರುಕಟ್ಟೆಗೆ ಹೊಡೆತ ನೀಡಿದ್ದು, ಇಂದು ರೂಪಾಯಿ ಮೌಲ್ಯ ಆರಂಭಿಕ ವಹಿವಾಟಿನಲ್ಲಿ 24 ಪೈಸೆ ಕುಸಿದು ಡಾಲರ್ ಎದುರು 90.56ಕ್ಕೆ ತಲುಪಿದೆ. ಅಂದರೆ ಈಗ ಒಂದು ಅಮೆರಿಕನ್ ಡಾಲರ್ ಖರೀದಿಸಲು 90 ರೂಪಾಯಿ 56 ಪೈಸೆ ಅಗತ್ಯವಾಗಿದೆ.

ಇಂಟರ್ ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ಮೊದಲು 90.43ಕ್ಕೆ ದಾಖಲಾಗಿದ್ದು, ನಂತರ ಗ್ರೀನ್‌ಬ್ಯಾಕ್ ಬಲವರ್ಧನೆಯ ನಡುವೆ 90.56ಕ್ಕೆ ತಗ್ಗಿದೆ. ಇದು ಹಿಂದಿನ ಮುಕ್ತಾಯಕ್ಕಿಂತ ಗಮನಾರ್ಹ ಕುಸಿತ ಎಂದು ಫಾರೆಕ್ಸ್ ಟ್ರೇಡರ್‌ಗಳು ತಿಳಿಸಿದ್ದಾರೆ.

ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು?

  • ಜಾಗತಿಕ ಅಮೂಲ್ಯ ಲೋಹಗಳ ಬೆಲೆ ಏರಿಕೆ
  • ಆಮದುದಾರರಿಂದ ಹೆಚ್ಚಿದ ಡಾಲರ್ ಬೇಡಿಕೆ
  • ಭಾರತ–ಅಮೆರಿಕ ವ್ಯಾಪಾರ ಮಾತುಕತೆಯ ಸುತ್ತಲಿನ ಅನಿಶ್ಚಿತತೆ
  • ಜಾಗತಿಕ ಅಪಾಯದ ಮನೋಭಾವ

ಗುರುವಾರ ರೂಪಾಯಿ 38 ಪೈಸೆ ಕುಸಿದು 90.32ಕ್ಕೆ ಮುಕ್ತಾಯಗೊಂಡಿತ್ತು. ಇಂದು ಮಾರುಕಟ್ಟೆ ತೆರೆಯುತ್ತಿದ್ದಂತೆ 90.00–90.60ರ ಶ್ರೇಣಿಯಲ್ಲಿ ವಹಿವಾಟು ಗಮನಿಸಲಾಯಿತು.

ಇಂದು ಭಾರತ–ಅಮೆರಿಕ ನಿಯೋಗಗಳ ಮಧ್ಯೆ ನಡೆಯುತ್ತಿರುವ ಮಾತುಕತೆಯ ಕೊನೆಯ ದಿನವಾಗಿದ್ದು, ಒಪ್ಪಂದ ಘೋಷಣೆಯ ನಿರೀಕ್ಷೆಯಿದೆ ಎಂದು ಫಿನ್‌ರೆಕ್ಸ್ ಟ್ರೆಷರಿ ಸಂಸ್ಥೆಯ ಅನಿಲ್ ಕುಮಾರ್ ಬನ್ಸಾಲಿ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆ ಚಲನವಲನ:

  • ಡಾಲರ್ ಸೂಚ್ಯಂಕ 6 ಕರೆನ್ಸಿಗಳ ಎದುರು ಬಲವರ್ಧನೆ
  • ಬ್ರೆಂಟ್ ಕಚ್ಚಾ ತೈಲ ಭವಿಷ್ಯ ವಹಿವಾಟಿನಲ್ಲಿ 0.02% ಏರಿಕೆ – ಪ್ರತಿ ಬ್ಯಾರೆಲ್ $61.69

ದೇಶೀಯ ಷೇರು ಮಾರುಕಟ್ಟೆ:

  • ಸೆನ್ಸೆಕ್ಸ್: 170.40 ಪಾಯಿಂಟ್ ಏರಿಕೆ – 84,988.53
  • ನಿಫ್ಟಿ: 98.40 ಪಾಯಿಂಟ್ ಏರಿಕೆ – 25,996.95
  • ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ₹2,020.94 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Trending

Exit mobile version