ದೇಶ
Samsung One UI 9.5 Beta ಬಿಡುಗಡೆ; Galaxy S26 ಬಳಕೆದಾರರಿಗೆ ಸಿಕ್ಕ ಹೊಸ ಫೀಚರ್ಸ್
ನವದೆಹಲಿ: ಸ್ಯಾಮ್ಸಂಗ್ ತನ್ನ ಮುಂದಿನ ಸಾಫ್ಟ್ವೇರ್ ಅಪ್ಡೇಟ್ One UI 9.5 Beta(Samsung One UI 9.5 Beta) ಕಾರ್ಯಕ್ರಮವನ್ನು ಆರಂಭಿಸಿದ್ದು, ಅಧಿಕೃತ ಬಿಡುಗಡೆಯ ಮುನ್ನವೇ ಹೊಸ ಫೀಚರ್ಗಳನ್ನು ಪರೀಕ್ಷಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಿದೆ. ಆರಂಭಿಕ ಹಂತದಲ್ಲಿ Galaxy S26 ಸರಣಿಯ ಬಳಕೆದಾರರಿಗೆ ಈ ಬೀಟಾ ಕಾರ್ಯಕ್ರಮ ಲಭ್ಯವಿದ್ದು, ಭಾರತ ಸೇರಿದಂತೆ ಆಯ್ದ ಮಾರುಕಟ್ಟೆಗಳಲ್ಲಿ ಬಳಕೆದಾರರು Samsung Members ಅಪ್ಲಿಕೇಶನ್ ಮೂಲಕ ಬೀಟಾ ಕಾರ್ಯಕ್ರಮಕ್ಕೆ ಸೇರಲು ಅರ್ಜಿ ಸಲ್ಲಿಸಬಹುದು.
One UI 9.5ನಲ್ಲಿ ಕ್ಯಾಮೆರಾ ನಿಯಂತ್ರಣಗಳನ್ನು ಮತ್ತಷ್ಟು ಸುಧಾರಿಸಲಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ಅನುಭವ, Accessibility ಆಯ್ಕೆಗಳು ಮತ್ತು Privacy ರಕ್ಷಣೆಯನ್ನು ಬಲಪಡಿಸಲಾಗಿದೆ. ದಿನನಿತ್ಯದ ಸ್ಮಾರ್ಟ್ಫೋನ್ ಬಳಕೆಯನ್ನು ಇನ್ನಷ್ಟು ಸರಳ ಹಾಗೂ ವೈಯಕ್ತಿಕಗೊಳಿಸುವುದು ಹೊಸ ಅಪ್ಡೇಟ್ನ ಪ್ರಮುಖ ಉದ್ದೇಶವಾಗಿದೆ.
also read: https://hosasuddi.in/india-vs-new-zealand-test-nz-206-5/
India vs New Zealand: ಟೀ ವಿರಾಮಕ್ಕೆ ಕಿವೀಸ್ 206/5; ಭಾರತಕ್ಕೆ ಸವಾಲು
Samsung One UI 9.5 Beta ಕ್ಯಾಮೆರಾದಲ್ಲಿ ಮತ್ತಷ್ಟು ನಿಯಂತ್ರಣ
One UI 9.5ನಲ್ಲಿ ಕ್ಯಾಮೆರಾ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣ ನೀಡುವ ಹೊಸ ಆಯ್ಕೆಗಳು ಪರಿಚಯಿಸಲಾಗಿದೆ. ವಿಶೇಷವಾಗಿ Pro ಮತ್ತು Pro Video ಮೋಡ್ಗಳಲ್ಲಿ ಹಲವು ಸೆಟ್ಟಿಂಗ್ಗಳನ್ನು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿಕೊಳ್ಳಬಹುದು.
ವಿಭಿನ್ನ ಬೆಳಕು ಮತ್ತು ಶೂಟಿಂಗ್ ಪರಿಸ್ಥಿತಿಗಳಿಗೆ ತಕ್ಕಂತೆ ಪ್ರಿಸೆಟ್ಗಳನ್ನು ಬಳಸಿಕೊಳ್ಳುವ ಅವಕಾಶವೂ ಇದೆ. ಇದರಿಂದ ಫೋಟೋ ಹಾಗೂ ವಿಡಿಯೋ ಕ್ರಿಯೇಟರ್ಗಳಿಗೆ ಶೂಟಿಂಗ್ ವೇಳೆ ಹೆಚ್ಚಿನ ನಿಯಂತ್ರಣ ಸಿಗಲಿದೆ.
ಡೀಫಾಲ್ಟ್ ಕ್ಯಾಮೆರಾ ಅಪ್ಲಿಕೇಶನ್ನಲ್ಲಿಯೂ ಕೆಲವು ನಿಯಂತ್ರಣಗಳನ್ನು ಸುಧಾರಿಸಲಾಗಿದ್ದು, ಹೊಸ Zoom Bar ಅನ್ನು ಸೇರಿಸಲಾಗಿದೆ. ಪ್ರಮುಖ ಕ್ಯಾಮೆರಾ ಸೆಟ್ಟಿಂಗ್ಗಳನ್ನು ಒಂದೇ ಪರದೆಯಲ್ಲಿ ಸುಲಭವಾಗಿ ನಿರ್ವಹಿಸಲು ಇದು ಸಹಾಯ ಮಾಡಲಿದೆ. ಪ್ರತಿಯೊಂದು ಆಯ್ಕೆಯನ್ನು ಹುಡುಕಲು ಹಲವು ಮೆನುಗಳನ್ನು ತೆರೆಯುವ ಅಗತ್ಯ ಕಡಿಮೆಯಾಗಲಿದೆ.
Samsung One UI 9.5 Beta Samsung Healthನಲ್ಲಿ Mindful Note
One UI 9.5ನೊಂದಿಗೆ Samsung Health ಅಪ್ಲಿಕೇಶನ್ನಲ್ಲಿ Mindful Note ಎಂಬ ಹೊಸ ಫೀಚರ್ ಪರಿಚಯಿಸಲಾಗಿದೆ. ಬಳಕೆದಾರರು ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಬರವಣಿಗೆಯ ಮೂಲಕ ದಾಖಲಿಸಿಕೊಳ್ಳಬಹುದು.
ಸ್ವತಂತ್ರವಾಗಿ ಬರೆಯುವುದರ ಜೊತೆಗೆ ಮಾರ್ಗದರ್ಶಿತ Prompts ಮೂಲಕವೂ ತಮ್ಮ ಅನುಭವಗಳನ್ನು ದಾಖಲಿಸುವ ಅವಕಾಶವನ್ನು Mindful Note ನೀಡುತ್ತದೆ. ಇದರಿಂದ Samsung Health ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಾಗದೆ ಬಳಕೆದಾರರ ವೈಯಕ್ತಿಕ ಆರೋಗ್ಯ ಅನುಭವಕ್ಕೂ ಹೆಚ್ಚಿನ ಒತ್ತು ನೀಡಲಿದೆ.
Samsung One UI 9.5 Beta Medications ಮೂಲಕ ಔಷಧಿ ಟ್ರ್ಯಾಕಿಂಗ್
Samsung Healthನಲ್ಲಿ Medications ಫೀಚರ್ ಕೂಡ ಪರಿಚಯಿಸಲಾಗಿದೆ. ಬಳಕೆದಾರರು ತಮ್ಮ Prescription ಔಷಧಿಗಳು, Vitamins ಮತ್ತು Supplementsಗಳನ್ನು ಸೇರಿಸಿ, ಅವುಗಳನ್ನು ತೆಗೆದುಕೊಳ್ಳಬೇಕಾದ ಸಮಯಕ್ಕೆ ವೈಯಕ್ತಿಕ Reminders ಹೊಂದಿಸಿಕೊಳ್ಳಬಹುದು.
ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವುದನ್ನು ಟ್ರ್ಯಾಕ್ ಮಾಡಲು ಕೂಡ ಈ ಫೀಚರ್ ಸಹಾಯ ಮಾಡಲಿದೆ. ಆದರೆ ಈ ಸೇವೆ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ ಮತ್ತು Medications ಫೀಚರ್ ಲಭ್ಯತೆ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗಬಹುದು ಎಂದು Samsung ತಿಳಿಸಿದೆ.
Samsung One UI 9.5 Beta Accessibilityಗೆ ಹೆಚ್ಚಿನ ಆದ್ಯತೆ
One UI 9.5ನಲ್ಲಿ Accessibility ಬಳಕೆದಾರರಿಗಾಗಿ ತ್ವರಿತ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲಾಗಿದೆ. ಅಗತ್ಯವಿರುವ ಪ್ರಮುಖ Controlsಗಳಿಗೆ ತಕ್ಷಣ ಪ್ರವೇಶ ಪಡೆಯಲು Floating Shortcut ಪರಿಚಯಿಸಲಾಗಿದೆ.
Hearing Aid ಬಳಕೆದಾರರಿಗೂ ಹೊಸ ಅಪ್ಡೇಟ್ನಲ್ಲಿ ಸುಧಾರಣೆಗಳನ್ನು ಮಾಡಲಾಗಿದೆ. Notification Panelನಿಂದಲೇ Hearing Aid ಧ್ವನಿಯ Volume ಅನ್ನು ಬದಲಾಯಿಸಬಹುದು. Notifications, Ringtones ಮತ್ತು Alarms ಸೇರಿದಂತೆ ಯಾವ ಧ್ವನಿಗಳನ್ನು Hearing Aid ಮೂಲಕ ಕೇಳಬೇಕು ಎಂಬುದನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
Samsung One UI 9.5 Beta App Lock ಮೂಲಕ Privacy ರಕ್ಷಣೆ
One UI 9.5ನ ಪ್ರಮುಖ Privacy ಫೀಚರ್ಗಳಲ್ಲಿ App Lock ಕೂಡ ಒಂದಾಗಿದೆ. ಬಳಕೆದಾರರು ಆಯ್ದ ವೈಯಕ್ತಿಕ ಅಪ್ಲಿಕೇಶನ್ಗಳನ್ನು Biometric Authentication ಅಥವಾ Screen Lock ಮೂಲಕ ಸುರಕ್ಷಿತಗೊಳಿಸಬಹುದು.
ಒಂದು ಅಪ್ಲಿಕೇಶನ್ ಲಾಕ್ ಮಾಡಿದ ಬಳಿಕ ಅದರ Notification Content ಮತ್ತು Widgets ಕೂಡ ಇತರರಿಗೆ ಕಾಣದಂತೆ ಮರೆಮಾಡಲಾಗುತ್ತದೆ. ಇದರಿಂದ ತಮ್ಮ ಫೋನ್ ಅನ್ನು ಬೇರೆ ವ್ಯಕ್ತಿಗಳು ಬಳಸುವ ಸಂದರ್ಭದಲ್ಲೂ ವೈಯಕ್ತಿಕ ಮಾಹಿತಿಗೆ ಹೆಚ್ಚುವರಿ ರಕ್ಷಣೆ ದೊರೆಯಲಿದೆ.
Samsung One UI 9.5 Beta ಭಾರತ ಸೇರಿದಂತೆ ಹಲವು ದೇಶಗಳಲ್ಲಿ Beta ಲಭ್ಯ
One UI 9.5 Beta ಕಾರ್ಯಕ್ರಮವು ಸದ್ಯ Galaxy S26 ಸರಣಿ ಬಳಕೆದಾರರಿಗೆ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಜರ್ಮನಿ, ಭಾರತ, ದಕ್ಷಿಣ ಕೊರಿಯಾ, ಪೋಲೆಂಡ್, ಯುಕೆ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅರ್ಹ ಬಳಕೆದಾರರು Beta ಕಾರ್ಯಕ್ರಮಕ್ಕೆ ಸೇರಬಹುದು.
ಅರ್ಹ Galaxy S26 ಬಳಕೆದಾರರು ತಮ್ಮ ಫೋನ್ನ Samsung Members ಅಪ್ಲಿಕೇಶನ್ ಮೂಲಕ Beta ಕಾರ್ಯಕ್ರಮಕ್ಕೆ ಸೇರುವ ಆಯ್ಕೆಯನ್ನು ಪರಿಶೀಲಿಸಬಹುದು. Beta ಸಾಫ್ಟ್ವೇರ್ ಅಧಿಕೃತ ಆವೃತ್ತಿಗಿಂತ ಮುಂಚಿನ ಪರೀಕ್ಷಾ ಆವೃತ್ತಿಯಾಗಿರುವುದರಿಂದ ಕೆಲವು ಫೀಚರ್ಗಳು ಅಥವಾ ಕಾರ್ಯಕ್ಷಮತೆಯಲ್ಲಿ ಬದಲಾವಣೆಗಳು ಕಂಡುಬರುವ ಸಾಧ್ಯತೆ ಇದೆ.